ಬರಲಿದೆ ಅಂಡ್ರಾಯ್ಡ್ 13 | ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಬರುತ್ತಾ ನೋಡಿ!
ಗೂಗಲ್ ಸಂಸ್ಥೆಯು ಹೊಸ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇತ್ತೀಚಿಗೆ ಬಿಡುಗಡೆ ಮಾಡಿದೆ. ಆದರೆ ಆರಂಭದಲ್ಲಿ ಆಂಡ್ರಾಯ್ಡ್ 13 ಓಎಸ್ ಗೂಗಲ್ ಪಿಕ್ಸೆಲ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಹಾಗೇ ಕಳೆದ ತಿಂಗಳು ಕೆಲವು ಫೋನ್‌ಗಳು ಆಂಡ್ರಾಯ್ಡ್ 13 ಅಪ್‌ಡೇಟ್ ಪಡೆದಿದ್ದವು. ಇನ್ನೂ ಇತರೆ ಬ್ರ್ಯಾಂಡ್‌ನ ಆಂಡ್ರಾಯ್ಡ್ ಫೋನ್‌ಗಳು ಸಹ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ (Android 13 OS) ಅಪ್‌ಡೇಟ್ ಪಡೆಯಲಿವೆ ಎನ್ನಲಾಗಿದೆ.
ಆಂಡ್ರಾಯ್ಡ್ 13 OS ಆವೃತ್ತಿಯು ಗೂಗಲ್ ಆಂಡ್ರಾಯ್ಡ್ 12 OS ನ ಅಪಗ್ರೇಡ್ ಆವೃತ್ತಿಯಾಗಿದೆ. ಈ ಹೊಸದಾದ ಆಪರೇಟಿಂಗ್ ಸಿಸ್ಟಮ್ ಹಲವಾರು ಆಕರ್ಷಣೀಯ ಫೀಚರ್ಸ್‌ಗಳನ್ನು ಹೊಂದಿದೆ. ಹಾಗೂ ಸದ್ಯದಲ್ಲೇ ಆಂಡ್ರಾಯ್ಡ್ 13 OS (ಸ್ಥಿರ ಹಾಗೂ ಬೀಟಾ ಆವೃತ್ತಿ) ಅಪ್‌ಡೇಟ್ ಪಡೆಯಲಿರುವ ಸ್ಯಾಮ್‌ಸಂಗ್, ರಿಯಲ್‌ಮಿ, ಶಿಯೋಮಿ, ಒನ್‌ಪ್ಲಸ್, ಒಪ್ಪೋ ಮತ್ತು ವಿವೋ ಕಂಪನಿಗಳ ಕೆಲವು ಫೋನ್‌ಗಳ ಬಗ್ಗೆ ಇಲ್ಲಿದೆ ವಿವರಗಳು.
ಆಂಡ್ರಾಯ್ಡ್ 13 OS ಅಪ್‌ಡೇಟ್ ಪಡೆಯಲಿರುವ ಸ್ಯಾಮ್‌ಸಂಗ್ ಫೋನ್‌ಗಳು ಯಾವುದೆಂದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಪ್ಲಸ್. ಹಾಗೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S8 ಅಲ್ಟ್ರಾ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 ಪ್ಲಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ Quantum 3 ,ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A33 5G ಆಗಿದೆ.
ಇನ್ನೂ ರಿಯಲ್‌ಮಿ ಫೋನ್‌ಗಳಲ್ಲಿ ಯಾವುದೆಲ್ಲಾ ಅಂದ್ರೆ, ರಿಯಲ್‌ಮಿ GT ನಿಯೋ 3 150W, ರಿಯಲ್‌ಮಿ GT ನಿಯೋ 3, ರಿಯಲ್‌ಮಿ GT 2, ರಿಯಲ್‌ಮಿ GT ನಿಯೋ 3T, ರಿಯಲ್‌ಮಿ 9 ಪ್ರೊ+ 5G, ರಿಯಲ್‌ಮಿ 9 ಪ್ರೊ 5G, ರಿಯಲ್‌ಮಿ 9i 5G, ರಿಯಲ್‌ಮಿ GT, ರಿಯಲ್‌ಮಿ ನಾರ್ಜೋ 50 ಪ್ರೊ 5G ಮತ್ತು ರಿಯಲ್‌ಮಿ ನಾರ್ಜೋ 50 5G ಗಳಾಗಿದೆ.
ಹಾಗೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಹೀಗಿದೆ, ಒನ್‌ಪ್ಲಸ್ 8 5G, ಒನ್‌ಪ್ಲಸ್ 8T 5G, ಒನ್‌ಪ್ಲಸ್ 8 ಪ್ರೊ 5G, ಒನ್‌ಪ್ಲಸ್ ನಾರ್ಡ್ 2T 5G ಮತ್ತು ಒನ್‌ಪ್ಲಸ್ ನಾರ್ಡ್ CE ಲೈಟ್ 5G.
ಒಪ್ಪೋ ಸ್ಮಾರ್ಟ್‌ಫೋನ್‌ಗಳಲ್ಲಿ, ಒಪ್ಪೋ ರೆನೋ 8 ಪ್ರೊ 5G, ಒಪ್ಪೋ ರೆನೋ 8 5G, ಒಪ್ಪೋ K10 5G, ಒಪ್ಪೋ F19 ಪ್ರೊ+, ಒಪ್ಪೋ F21 ಪ್ರೊ 5G, ಒಪ್ಪೋ F21 ಪ್ರೊ, ಒಪ್ಪೋ ರೆನೋ 7 ಪ್ರೊ 5G, ಒಪ್ಪೋ ರೆನೋ 7 5G, ಒಪ್ಪೋ ರೆನೋ 6 ಪ್ರೊ 5G, ಒಪ್ಪೋ ರೆನೋ 6 5G, ಒಪ್ಪೋ ರೆನೋ 5 ಪ್ರೊ 5G, ಒಪ್ಪೋ K10, ಒಪ್ಪೋ A96, ಒಪ್ಪೋ A76 ಮತ್ತು ಒಪ್ಪೋ A74 5G.
ಇನ್ನು, ಕೊನೆಯದಾಗಿ ವಿವೋ ಫೋನ್‌ಗಳ ವಿವರ ಹೀಗಿದೆ, ವಿವೋ X80, ವಿವೋ X70 ಪ್ರೊ+, ವಿವೋ X70 ಪ್ರೊ, ವಿವೋ V25 ಪ್ರೊ, ವಿವೋ V25, ವಿವೋ V23 ಪ್ರೊ, ವಿವೋ V23 5G, ವಿವೋ V23e 5G, ವಿವೋ T1 ಪ್ರೊ 5G, ವಿವೋ T1 5G, ವಿವೋ T1, ವಿವೋ Y75 5G, ವಿವೋ Y35, ವಿವೋ Y22 ಮತ್ತು ವಿವೋ Y22s.
ಹಾಗೇ ಶಿಯೋಮಿ, ನಥಿಂಗ್, ಆಸುಸ್ ಕಂಪನಿಗಳ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿಯೂ ಆಂಡ್ರಾಯ್ಡ್ 13 OS ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಇನ್ನು, ಸದ್ಯದಲ್ಲೇ ಆಂಡ್ರಾಯ್ಡ್ 13 OS ಸೇರ್ಪಡೆಯಾಗಲಿದೆ.