ಕಾಂತಾರ ನಟಿ ಸಪ್ತಮಿ ಅಭಿಷೇಕ್ ಅಂಬರೀಶ್ ಗೆ ನಾಯಕಿ | ಸಿನಿಮಾ ಯಾವುದು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!!!

‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನು ಬರೆದಿದೆ. ಈ ಸಿನಿಮಾದ ನಾಯಕಿಯಾದ ಸಪ್ತಮಿ ಗೌಡ ಅವರಿಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹರಿದು ಬರುತ್ತಿವೆ. ಆದರೆ ಇದೀಗ ಅವರು ಕನ್ನಡದ ಮತ್ತೊಂದು ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತುಕತೆ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನಿಮಾ ಯಾವುದು? ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಪೈಲ್ವಾನ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ , ಇದೀಗ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರಿಗೆ ಸಿನಿಮಾವೊಂದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ‘ಕಾಳಿ’ ಎಂದು ಹೆಸರಿಡಲಾಗಿದೆ. ಸಿನಿಮಾದ ಟೈಟಲ್ ಸೇರಿದಂತೆ ಹಲವಾರು ವಿಚಾರಗಳನ್ನೂ ನಿರ್ದೇಶಕ ಕೃಷ್ಣ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಇನ್ನೂ, ಈ ಸಿನಿಮಾಗೆ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರನ್ನು ನಟಿಸಲು ಕೇಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಪ್ತಮಿ ಗೌಡ ಅವರನ್ನು ನಿರ್ದೇಶಕ ಕೃಷ್ಣ ಭೇಟಿಯಾಗಿ ಸಿನಿಮಾದ ಕಥೆ ಮತ್ತು ಪಾತ್ರದ ಹಿನ್ನೆಲೆಯನ್ನು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಚಿತ್ರದ ನಾಯಕಿ ಸಪ್ತಮಿ ಗೌಡ ಅವರೇ ಎನ್ನುತ್ತಿದೆ ಗಾಂಧಿ ನಗರ ಮೂಲಗಳು. ಆದರೆ ಈ ಬಗ್ಗೆ ಕೃಷ್ಣ ಅವರು ಆಗಲಿ ಅಥವಾ ಸಪ್ತಮಿ ಗೌಡ ಆಗಲಿ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ , ಈ ‘ಕಾಳಿ’ ಸಿನಿಮಾದ ಕಥೆಯೂ ರೋಚಕವಾಗಿದೆ. ಕಾವೇರಿ ನದಿಯ ಗಲಾಟೆಯಲ್ಲಿ ನಡೆದಂತಹ ನೈಜ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಅಳವಡಿಸಿಕೊಂಡಿದ್ದಾರೆ. ಅಷ್ಟಲ್ಲದೆ, ರೆಬಲ್ ಸ್ಟಾರ್ ಈ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರ ಫಸ್ಟ್ ಲುಕ್ ರಿಲೀಸ್ ಆಗಿರುವುದರಿಂದ ತಿಳಿದುಬಂದಿದೆ. ಇದೀಗ ಅಭಿಷೇಕ್ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಕಾಳಿ ಸಿನಿಮಾದ ಶೂಟಿಂಗ್ ನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

Leave A Reply

Your email address will not be published.