ವಾಹನ ಸವಾರರಿಗೆ ಮುಖ್ಯವಾದ ಮಾಹಿತಿ : ಈ ಪ್ರದೇಶದಲ್ಲಿ ಅಪ್ಪಿ ತಪ್ಪಿ ‘ಹಾರ್ನ್’ ಮಾಡಿದ್ರೆ ಬೀಳುತ್ತೆ ಭರ್ಜರಿ ದಂಡ..!

ಇನ್ಮುಂದೆ ಬೆಂಗಳೂರಿನ ಈ ಪ್ರದೇಶದಲ್ಲಿ ಹಾರ್ನ್ ಏನಾದರೂ ಮಾಡಿದರೆ ನಿಮಗೆ ಖಂಡಿತಾ ಬೀಳುತ್ತೆ ರೂ. 500 ದಂಡ. ಹೌದು, ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಹಾರ್ನ್ ಮಾಡಿದರೆ ನಿಮಗೆ ಪೊಲೀಸರು 500 ರೂ ದಂಡ (Fine) ವಿಧಿಸಲಿದ್ದಾರೆ.

ಈ ಆದೇಶವನ್ನು ತೋಟಗಾರಿಕೆ ಇಲಾಖೆ ಹೊರಡಿಸಿದ್ದು, ಕಬ್ಬನ್ ಪಾರ್ಕ್ ಒಳಪ್ರದೇಶದಲ್ಲಿ ಹಾರ್ನ್ ( ಶಬ್ದ) ಮಾಡುವುದರಿಂದ ಸಾರ್ವಜನಿಕರು ಹಾಗೂ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು, ಈ ಹಿನ್ನೆಲೆ ತೋಟಗಾರಿಕೆ ಇಲಾಖೆ ನಗರ ಸಂಚಾರಿ ಪೊಲೀಸರ ಜೊತೆ ಸಭೆ ನಡೆಸಿ ನಗರದ ಕಬ್ಬನ್ ಪಾರ್ಕ್ ನ್ನು ನಿಶಬ್ದ ವಲಯ ಎಂದು ಘೋಷಣೆ ಮಾಡಿದೆ.

ಉದ್ಯಾನವನ ಬಹಳ ಶಾಂತವಾಗಿದ್ದು, ಜನರು ಇಲ್ಲಿಗೆ ಬರುತ್ತಾರೆ. ಅಲ್ಲದೇ ಸಾಕಷ್ಟು ಪಕ್ಷಿಗಳು ಇಲ್ಲಿ ವಾಸವಿದ್ದು, ಅವುಗಳಿಗೆ ಕಿರಿಕಿರಿ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.

Leave A Reply

Your email address will not be published.