ನಿಮ್ಮ ಮಕ್ಕಳಿಗೆ ಬಿಸ್ಕೆಟ್‌ ಕೊಡುವಿರಾ? ಈಗಂಭೀರ ಸಮಸ್ಯೆ ಎದುರಾಗಬಹುದು : ಈ ಸ್ಟೋರಿ ಓದಿ

ಮಕ್ಕಳ ಆರೋಗ್ಯ (Health)ದ ಬಗ್ಗೆ ಪ್ರತಿಯೊಬ್ಬ ಪೋಷಕರೂ (Parents) ಅತಿ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ಮಕ್ಕಳು ಸದೃಢವಾಗಿರಬೇಕೆಂದು ಚಿಕ್ಕಂದಿನಿಂದಲೇ ಅವರಿಗೆ ಉತ್ತಮ ಆಹಾರ (Food) ನೀಡಲು ಯತ್ನಿಸುತ್ತಾರೆ. ಈ ನಡುವೆ ಕೆಲವೊಮ್ಮೆ ಮಕ್ಕಳ ಹಠ ಮಾಡಿದಾಗ ಬಿಸ್ಕೆಟ್‌ ಕೊಡುವ ಕೆಟ್ಟ ಅಭ್ಯಾಸವೂ ಬೆಳೆಸಿಕೊಂಡಿರುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕುರಿತ ಸ್ಟೋರಿ ಇಲ್ಲಿದೆ ಓದಿ

  • ಬಿಸ್ಕೆಟ್ ತಯಾರಿಕೆಯಲ್ಲಿ ಉಪ್ಪು ಮತ್ತು ಹಾಲಿನ ಮಿಶ್ರಣವಾಗುತ್ತದೆ. ಆಯುರ್ವೇದದ ಪ್ರಕಾರ ಇದು ವಿರುದ್ಧ ಆಹಾರ. ಅಲ್ಲದೆ ಕೆಲವು ಬಿಸ್ಕೆಟ್‌ಗಳು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಇಂತಹ ಆಹಾರ ತಿನ್ನುವುದರಿಂದ ಸಣ್ಣ ವಯಸ್ಸಿನಲ್ಲಿಯೇ ರಕ್ತದೊತ್ತಡದಂತಹ ಸಮಸ್ಯೆ ಕಾಡಬಹುದು. ಹೀಗಾಗಿ ಮಕ್ಕಳಿಗೆ ಬಿಸ್ಕೆಟ್‌ ಕೊಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

*ಬಿಸ್ಕೆಟ್‌ ತಯಾರಿಕೆಯಲ್ಲಿ ಸಾಮಾನ್ಯವಾಗಿ ಬೇಕಿಂಗ್‌ ಪೌಡರ್‌ ಬಳಸುತ್ತಾರೆ. ಪ್ರತಿನಿತ್ಯ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ.

*ಹೆಚ್ಚು ಬಿಸ್ಕೆಟ್‌ ತಿನ್ನುವುದರಿಂದ ಬೇಕಿಂಗ್‌ ಪೌಡರ್‌ನ ಪರಿಣಾಮವಾಗಿ ಬೇಧಿ, ಹೊಟ್ಟೆಯ ನೋವಿನಂತಹ ಅನಾರೋಗ್ಯ ಕಾಡಬಹುದು.

​ಆರೋಗ್ಯ ಸಮಸ್ಯೆಗಳಿಂದರೆ

*ನಿರಂತರವಾಗಿ ಬಿಸ್ಕೆಟ್‌ ತಿನ್ನುವುದರಿಂದ ಮಕ್ಕಳಲ್ಲಿ ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು. ಏಕೆಂದರೆ ಕೆಲವು ಬಿಸ್ಕೆಟ್‌ನಲ್ಲಿ ಮೈದಾ ಬಳಕೆ ಮಾಡಲಾಗುತ್ತದೆ. ಹೀಗಾಗಿ ಸರಿಯಾಗಿ ಜೀರ್ಣವಾಗುವುದಿಲ್ಲ.

*ಬಿಸ್ಕೆಟ್‌ ಒಣ ಆಹಾರವಾಗಿರುವುದರಿಂದ ಕರುಳಿನಲ್ಲಿ ಜೀರ್ಣವಾಗದೇ ಉಳಿದುಬಿಡಬಹುದು. ಇದರಿಂದ ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಅನೇಕ ಮಕ್ಕಳಲ್ಲಿ ಮಲವಿಸರ್ಜನೆ ಸರಿಯಾಗಿ ಆಗದೇ ಇರುವುದಕ್ಕೆ ಪದೇ ಪದೇ ಬಿಸ್ಕೆಟ್‌ ತಿನ್ನುವುದೇ ಆಗಿರುತ್ತದೆ.

*ಇದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಕಾಡಬಹುದು. ಹೀಗಾಗಿ ಬಿಸ್ಕೆಟ್‌ನಿಂದ ಮಕ್ಕಳನ್ನು ಆದಷ್ಟು ದೂರವಿಡುವುದು ಒಳ್ಳೆಯದು.

​ಬಿಸ್ಕೆಟ್‌ ಅಭ್ಯಾಸ ತಪ್ಪಿಸಲು ಹೀಗೆ ಮಾಡಿ

*ಬಿಸ್ಕೆಟ್‌ ತಿಂದು ಅಭ್ಯಾಸವಾದ ಮೇಲೆ ಅದನ್ನು ಬಿಡುವುದು ಕಷ್ಟ. ಹೀಗಾಗಿ ಪ್ರತಿದಿನ ನೀಡುವುದನ್ನು ತಪ್ಪಿಸಿ ವಾರದಲ್ಲಿ ಒಂದು ಅಥವಾ ಎರಡು ಬಾರಿ ನೀಡಿ.

*ಹೆಚ್ಚು ಉಪ್ಪು, ಕ್ರೀಮ್‌ ಇರುವ ಬಿಸ್ಕೆಟ್‌ಗಳನ್ನು ನೀಡಬೇಡಿ. ಗೋದಿ ಅಥವಾ ರಾಗಿ ಬಿಸ್ಕೆಟ್‌ಗಳನ್ನು ನೀಡಿ. ಅದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಮಕ್ಕಳಿಗೆ ತಪ್ಪದೇ ನೀಡಿ.

*ಅಥವಾ ಬಿಸ್ಕೆಟ್‌ ನೀಡುವಾಗ ಬಿಸಿ ಹಾಲನ್ನು ನೀಡಿ. ಇದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ.

​* ಮಕ್ಕಳಿಗೆ ಬೇಗನೆ ಸಿಗುವ ಆಹಾರಗಳ ಬದಲು ಆರೋಗ್ಯಕರ ಆಹಾರವನ್ನು ನೀಡಿ. ಇದರಿಂದ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ.

*ಸ್ನ್ಯಾಕ್ಸ್‌ಗಳ ರೀತಿಯಲ್ಲಿ ಪ್ರತಿದಿನ ಮೊಳಕೆಭರಿಸಿದ ಕಾಳು, ಹಣ್ಣು, ತರಕಾರಿಗಳ ಸಲಾಡ್‌ ಹೀಗೆ ಆರೋಗ್ಯಕರ ಆಹಾರವನ್ನು ನೀಡಿ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ಜೀರ್ಣಕ್ರಿಯೆಯೂ ಸುಗಮವಾಗುತ್ತದೆ.

*ಯಾವುದೇ ಋತುಮಾನವಿರಲಿ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು, ಎಳನೀರು ಸೇರಿದಂತೆ ದ್ರವ ಪದಾರ್ಥಗಳನ್ನು ಆಗಾಗ ಮಕ್ಕಳಿಗೆ ನೀಡುತ್ತಿರಿ.

Leave A Reply

Your email address will not be published.