Mosquitos: ಇಲ್ಲೊಂದು ಫ್ಯಾಕ್ಟರಿಯಲ್ಲಿ ಸೊಳ್ಳೆ ತಯಾರಾಗುತ್ತೆ! ಇವು ಅಂತಿಂಥ ಸೊಳ್ಳೆಯಲ್ಲ, ರೋಗ ವಾಸಿ ಮಾಡೋ ಸೊಳ್ಳೆಗಳು!!!

ಸೊಳ್ಳೆ ಅಂದರೆನೇ ಹೆದರುವ ಜನರಿದ್ದಾರೆ. ಏಕೆಂದರೆ ಈ ಸೊಳ್ಳೆಗಳದನೇ ಅನೇಕ ರೋಗ ರುಜಿನಗಳು ಹರಡುವುದರಿಂದ ಜನ ಹೆದರೋದು ಸಾಮಾನ್ಯ. ಮಾರಕ ರೋಗಗಳನ್ನು ಉಂಟು ಮಾಡೋ ಭಯ ಮೂಡಿಸೋ ಈ ಸೊಳ್ಳೆಗಳಿಂದ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ.

 

ಆದರೆ ಈಗ ಬಂದಿರೋ ವರದಿ ಪ್ರಕಾರ, ಚೀನಾದಲ್ಲಿ ಸೊಳ್ಳೆ ಸಾಯಿಸೋ ಬದಲು, ಹೊಸ ಸೊಳ್ಳೆ ಉತ್ಪಾದನೆ ಮಾಡಲಾಗುತ್ತದೆಯಂತೆ. ಗೊತ್ತೇ ನಿಮಗೆ? ಸೊಳ್ಳೆಗಳ ನಿರ್ಮೂಲನೆಗಾಗಿ ಸೊಳ್ಳೆಗಳನ್ನೇ ಬಳಸುತ್ತಿದೆಯಂತೆ. ವಿಚಿತ್ರ ಆದರೂ ಸತ್ಯ. ರೋಗ ಹರಡುವ ಸೊಳ್ಳೆ ಸಾಯಿಸಲು ಹೊಸ ಸೊಳ್ಳೆಗಳನ್ನು ಕಾರ್ಖಾನೆಯಲ್ಲೇ ಉತ್ಪಾದಿಸಲಾಗುತ್ತದೆ.

ಚೀನಾದ ದಕ್ಷಿಣ ಭಾಗದ ಗುವಾಂಗ್‌ಝ್ದಲ್ಲಿ ಈ ಉತ್ತಮ ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆಯಿದೆ. ಪ್ರತಿ ವಾರ ಸುಮಾರು 02 ಕೋಟಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳು ವಾಸ್ತವವಾಗಿ ವೊಲ್ಟಾಚಿಯಾ ಬ್ಯಾಕ್ಟಿರಿಯಾದಿಂದ ಸೋಂಕಿಗೆ ಒಳಗಾಗುತ್ತವೆ, ಇದರ ಪ್ರಯೋಜನವೂ ಇದೆ.

ಚೀನಾದಲ್ಲಿ ಸನ್ ಯಾಟ್ ಸೆಟ್ ವಿಶ್ವವಿದ್ಯಾನಿಲಯ ಮತ್ತು ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆ ನಡೆಸಿದ ಅಧ್ಯಯನವು ವೊಲ್ಟಾಚಿಯಾ ಬ್ಯಾಕ್ಟಿರಿಯಾದಿಂದ ಸೋಂಕಿತ ಸೊಳ್ಳೆಗಳು ಉತ್ಪತ್ತಿಯಾದರೆ, ಅವು ಹೆಣ್ಣು ಸೊಳ್ಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬಂಜೆತನವನ್ನು ಮಾಡಬಹುದು ಎಂಬುದಾಗಿ ಕಂಡುಹಿಡಿದಿದೆ.

ಸೊಳ್ಳೆಗಳನ್ನು ಉತ್ಪಾದಿಸುವ ಈ ಚೈನೀಸ್ ಕಾರ್ಖಾನೆಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಇದು 3500 ಚದರ ಮೀಟರ್‌ಗಳಲ್ಲಿ ಹರಡಿದೆ. ಇದು 04 ದೊಡ್ಡ ಕಾರ್ಯಾಗಾರಗಳನ್ನು ಹೊಂದಿದೆ. ಪ್ರತಿ ಕಾರ್ಯಾಗಾರವು ವಾರಕ್ಕೆ ಸುಮಾರು 5 ಮಿಲಿಯನ್ ಸೊಳ್ಳೆಗಳನ್ನು ಉತ್ಪಾದಿಸುತ್ತದೆ.

ಗುವಾಂಗ್‌ಝ್ದಲ್ಲಿನ ಕಾರ್ಖಾನೆಯಲ್ಲಿ ಇವುಗಳನ್ನು ಮೊದಲು ಬೆಳೆಸಲಾಗುತ್ತದೆ. ಅದಾದ ನಂತರ ಕಾಡಿನಲ್ಲಿ ಮತ್ತು ಸೊಳ್ಳೆಗಳು ಹೆಚ್ಚಾಗಿ ಇರುವ ಸ್ಥಳದಲ್ಲಿ ಇವುಗಳನ್ನು ಬಿಡಲಾಗುತ್ತದೆ. ಇವುಗಳು ಕಾರ್ಖಾನೆಯ ಸೊಳ್ಳೆಗಳು ಹೆಣ್ಣು ಸೊಳ್ಳೆಗಳೊಂದಿಗೆ ಬೆರೆತು ಅವುಗಳ ಫಲವತ್ತತೆಯನ್ನು ನಾಶಪಡಿಸಿ, ಆ ಪ್ರದೇಶದಲ್ಲಿ ಸೊಳ್ಳೆಗಳು ಕಡಿಮೆಯಾಗುತ್ತದೆ ಮತ್ತು ಇದು ರೋಗಗಳನ್ನು ತಡೆಗಟ್ಟಲು ಕಾರಣವಾಗುತ್ತದೆ.

ಚೀನಾ ಇದೇ ಮೊದಲ ಬಾರಿಗೆ ಇದನ್ನು ಮಾಡುವುದಲ್ಲ. 2015 ರಿಂದ, ಈ ಮೊದಲು ಈ ಸೊಳ್ಳೆಗಳನ್ನು ಗುವಾಂಗ್‌ಝ್ಗೆ ಮಾತ್ರ ತಯಾರಿಸಲಾಗುತ್ತಿತ್ತು, ಏಕೆಂದರೆ ಪ್ರತಿ ವರ್ಷ ಇಲ್ಲಿ ಡೆಂಗ್ಯೂ ಹೆಚ್ಚಾಗಿ ಹರಡುತ್ತಿತ್ತು. ಈಗ ಇಲ್ಲಿ ಸೊಳ್ಳೆಗಳು ಸಾಕಷ್ಟು ನಿಯಂತ್ರಣಕ್ಕೆ ಬಂದಿರುವುದರಿಂದ ರೋಗಗಳೂ ನಿಯಂತ್ರಣಕ್ಕೆ ಬಂದಿವೆ. ಈಗ ಈ ಕಾರ್ಖಾನೆಯಿಂದ ಸೊಳ್ಳೆಗಳು ಉತ್ಪತ್ತಿಯಾದ ನಂತರ ಚೀನಾದ ಇತರ ಪ್ರದೇಶಗಳಿಗೂ ಕಳುಹಿಸುತ್ತದೆಯಂತೆ. ಈ ಕಾರ್ಖಾನೆಯ ಸೊಳ್ಳೆಗಳು ಹೆಚ್ಚು ಶಬ್ದ ಮಾಡುತ್ತವೆ ಆದರೆ ಅವು ನಿರ್ದಿಷ್ಟ ಸಮಯದ ನಂತರ ಸಾಯುತ್ತವೆ. ಅವುಗಳಿಂದ ಯಾವುದೇ ರೀತಿಯಲ್ಲಿ ರೋಗಗಳು ಹರಡುವ ಅಪಾಯವಿಲ್ಲ ಅಂತ ಚೀನಾ ಹೇಳುತ್ತಿದೆ.

ಒಟ್ಟಾರೆ ಸೊಳ್ಳೆಗಳಿಂದಲೇ ರೋಗ ಹರಡುವ ಕಾಲ ದೂರ ಆಗೋದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನ ಹೀಗೆ ಮುಂದುವರಿದರೆ ಜನ ಸೊಳ್ಳೆಗಳಿಂದ ಹರಡೋ ರೋಗ ರುಜಿನದಿಂದ ಮುಕ್ತರಾಗಿ ಬಾಳೋ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು. ಇದಕ್ಕೆಲ್ಲ ಕಾಲವೇ ಉತ್ತರ ನೀಡಬೇಕು. ಅಲ್ಲಿಯವರೆಗೆ ಕಾಯೋಣ.

Leave A Reply

Your email address will not be published.