ವಿಶ್ವದ ಅತ್ಯಂತ ಸುಂದರ, ಸೆಕ್ಸಿಯೆಸ್ಟ್ ಮ್ಯಾನ್ ಇವನೇ ನೋಡಿ!

ಭೂಮಿಯಲ್ಲಿ ಹುಟ್ಟಿದ ಮೇಲೆ ಮನುಷ್ಯ ಯಾವುದಾದರು ಒಂದು ಕಾರಣಕ್ಕೆ ತನ್ನನ್ನು ಗುರುತಿಸಿಕೊಳ್ಳಲು ಹರಸಾಹಸ ಪಡುತ್ತಾನೆ. ಮತ್ತು ಈ ಆಧುನಿಕ ಯುಗದಲ್ಲಿ ಬದುಕು ಸ್ಪರ್ಧಾತ್ಮಕ ಆಗಿದೆ ಅಂದರೆ ಪ್ರತಿಯೊಂದು ವಿಷಯದಲ್ಲೂ ಸ್ಪರ್ಧೆ ಏರ್ಪಡುತ್ತಿದೆ. ಮನುಷ್ಯ ಎಲ್ಲದರಲ್ಲೂ ಮೇಧಾವಿ ಹಾಗಿರುವಾಗ ತನ್ನ ಅಂದ ಚಂದದ ಬಗ್ಗೆ ಚಿಂತೆ ಮಾಡದೇ ಇರಲು ಸಾಧ್ಯವೇ.

ಹೌದು ಖ್ಯಾತ ನಟ ಕ್ರಿಸ್‌ ಎವಾನ್ಸ್‌ ವಿಶ್ವದ ಅತ್ಯಂತ ಸುಂದರ ಪುರುಷ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪೀಪಲ್‌ ಮ್ಯಾಗಜೀನ್‌ ಬಿಡುಗಡೆ ಮಾಡಿದ ಜೀವಂತವಿರುವ ವಿಶ್ವದ ಸುಂದರ ಪುರುಷರ ಪಟ್ಟಿಯಲ್ಲಿ ಕ್ರಿಸ್‌ ಎವಾನ್ಸ್‌ಗೆ ಈ ಹಿರಿಮೆ ಗಳಿಸಿದ್ದಾರೆ.

ಕ್ರಿಸ್‌ ಎವಾನ್ಸ್ ಪಾಶ್ಚಿಮಾತ್ಯ ಸಿನಿಮೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದು, ಅವರ ಕ್ಯಾಪ್ಟನ್ ಅಮೆರಿಕಾದಲ್ಲಿನ ಪಾತ್ರ ಗಮನ ಸೆಳೆದಿದೆ. ಅಲ್ಲದೇ ಅವರು ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರುಸ್ಸೋ ಸಹೋದರರ, ‘ದಿ ಗ್ರೇ ಮ್ಯಾನ್ ಮತ್ತು ಲೈಟ್‌ಇಯರ್’ ಸಿನಿಮಾದಲ್ಲಿಯೂ ಎವಾನ್ಸ್ ನಟಿಸಿದ್ದಾರೆ.

ಸೋಮವಾರ ರಾತ್ರಿ ನಡೆದ ಸ್ಟೆಫನ್‌ ಕಾಲ್ಬರ್ಚ್‌ ಕಾರ್ಯಕ್ರಮದಲ್ಲಿ ಖ್ಯಾತ ನಟ ಕ್ರಿಸ್‌ ಎವಾನ್ಸ್‌ 2022 ರ ಸೆಕ್ಸಿಯೆಸ್ಟ್ ಮ್ಯಾನ್ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಪೀಪಲ್ ಮ್ಯಾಗಜೀನ್ ಪ್ರಸ್ತುತ ಪಡಿಸಿದ ‘2022 ರ ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್ ‘ (ಜೀವಂತವಾಗಿರುವ 2022ರ ಸುಂದರಾದ) ಎಂಬ ಬಿರುದನ್ನು ಕ್ರಿಸ್ ಇವಾನ್ಸ್ ಗಳಿಸಿದ್ದಾರೆ. ಈ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಎವಾನ್ಸ್‌, ಇದರಿಂದ ನನ್ನ ತಾಯಿ ತುಂಬಾ ಸಂತೋಷವಾಗಿರುತ್ತಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಮಾಡುವ ಎಲ್ಲದರ ಬಗ್ಗೆ ಆಕೆ ಹೆಮ್ಮೆಪಡುತ್ತಾಳೆ, ಆದರೆ ಇದರಿಂದಂತೂ ಆಕೆ ಮತ್ತಷ್ಟು ಖುಷಿಪಟ್ಟಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅದಲ್ಲದೆ ಈಗಾಗಲೇ ಪ್ರತಿವರ್ಷ ಓರ್ವ ಸೆಲೆಬ್ರಿಟಿಯನ್ನು ಈ ಸ್ಥಾನಕ್ಕೆ ಘೋಷಣೆ ಮಾಡಲಾಗುತ್ತದೆ. ಕಳೆದ ವರ್ಷ, ಇದು ಪಾಲ್ ರುಡ್ ಆಗಿತ್ತು. ಅದಲ್ಲದೆ ಮೈಕೆಲ್ ಬಿ ಜೋರ್ಡಾನ್, ಡ್ವೇನ್ ಜಾನ್ಸನ್, ಕ್ರಿಸ್ ಹೆಮ್ಸ್‌ವರ್ತ್, ಜಾನಿ ಡೆಪ್ ಮತ್ತು ಹೆಚ್ಚಿನವರು ಸೇರಿದಂತೆ ಅನೇಕರು ಈಗಾಗಲೇ ಈ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಪ್ರಸ್ತುತ ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್ ಎಂಬ ಬಿರುದನ್ನು ಕ್ರಿಸ್ ಎವಾನ್ಸ್ ಗಳಿಸಿರುವುದರ ಬಗ್ಗೆ ಮಾಧ್ಯಮದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

Leave A Reply