ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಕೇವಲ 277 ರೂಪಾಯಿಗೆ ಸಿಗುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಕುತೂಹಲವೆನಿಸುತ್ತದೆ.
ಇನ್ನೂ, ಲಾಟರಿಯಿಂದ ಅತಿ ಬಡವನೂ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಅದೃಷ್ಟ ಅನ್ನೋದು ಯಾರ ಮನೆಯ ಸೊತ್ತು ಅಲ್ಲಾ ಅಲ್ವಾ! ಇದೀಗ ಆ ಅದೃಷ್ಟ ನಿಮ್ಮ ಪಾಲಿಗೆ ಬಂದಿದೆ. ಸುಮಾರು 3.7 ಕೋಟಿ ರೂ. ಬೆಲೆಬಾಳುವ ಭವ್ಯ ಬಂಗಲೆಯನ್ನು ಕೇವಲ 227 ರೂಪಾಯಿಗೆ ನೀಡಲು ಸಹೋದರರಿಬ್ಬರು ತಯಾರಿ ನಡೆಸಿದ್ದಾರೆ.
ಇಂಗ್ಲೆಂಡ್‌ನ ಕೆಂಟ್‌ನ ಮೆಡ್ವೇಯ ಪ್ರದೇಶದ ಸಹೋದರರಾದ ಜೇಸನ್ ಮತ್ತು ವಿಲ್ ಅದ್ಭುತವಾದ ಆಫರೊಂದನ್ನು ನೀಡಿದ್ದಾರೆ. ಒಬ್ಬ ಅದೃಷ್ಟವಂತ ವ್ಯಕ್ತಿಗೆ £400,000ನ ಮನೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಅವರು ಸಿದ್ಧರಾಗಿದ್ದಾರೆ. ಅದೃಷ್ಟಶಾಲಿಗಳಿಗೆ ಆಧುನಿಕ ಸೌಕರ್ಯಗಳು ಇರುವಂತಹ ಈ ವಿಶಾಲವಾದ ಮನೆಯಲ್ಲಿ ಇರಲು ಅವಕಾಶ ನೀಡುತ್ತಿರುವುದಾಗಿ ಹೇಳಿದ್ದಾರೆ.
ರಾಜಮನೆತನದ ಆಸ್ತಿಯಾದ ಈ ಬಂಗಲೆಯಲ್ಲಿ ಮೂರು ಮಹಡಿಗಳು, ನಾಲ್ಕು ದೊಡ್ಡ ದೊಡ್ಡ ಮಲಗುವ ಕೋಣೆಗಳು, ಐಷಾರಾಮಿ ಈಟ್-ಇನ್ ಕಿಚನ್ ಮತ್ತು ಡೈನರ್, ಸುಂದರವಾದ ಲಿವಿಂಗ್ ರೂಮ್ ಮತ್ತು ಕಣ್ಮನ ಸೆಳೆಯುವ ಉದ್ಯಾನವನಗಳಿವೆ. ಮನೆಯು ಅಲಂಕಾರಿಕ ವಸ್ತುಗಳಿಂದ ಅಲಂಕಾರಿಸಿ ಕಂಗೊಳಿಸುತ್ತಿದೆ. ಹಾಗೇ ಗಾಳಿಯಾಡುವ ಕಿಟಕಿಗಳು ಮತ್ತು ವಿಶಾಲವಾದ ನೆಲದ ಹಾಸುಗಳನ್ನು ಹೊಂದಿದೆ.
ಇನ್ನೂ, ಇದರಲ್ಲಿ ವಾಸಿಸುವ ಅದೃಷ್ಟ ಯಾರಿಗೆ ಇದೆ ಎಂದು ಸಮಯವೇ ನಿರ್ಧರಿಸಬೇಕು. ಈ ಭವ್ಯವಾದ ಬಂಗಲೆಯನ್ನು ತಮ್ಮದಾಗಿಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆದರೆ ಆಯ್ದ ಒಂದು ಕುಟುಂಬಕ್ಕೆ ಮಾತ್ರ ಈ ಅವಕಾಶ ನೀಡುವುದಾಗಿ ಸಹೋದರರು ಹೇಳಿದ್ದಾರೆ.