ನಾಯಿ ಪ್ರಿಯರೇ ಗಮನಿಸಿ | ರಾಜ್ಯಕ್ಕೆ ಕಾಲಿಟ್ಟಿದೆ ಅಪರೂಪದ ನಾಯಿ | ಇದರ ವೈಶಿಷ್ಟ್ಯತೆ ಏನು? ಹೆಸರೇನು ?

Share the Article

ನಾಯಿಗಳೆಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ? ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಸಹ ನಾಯಿಯನ್ನು ಮುದ್ದು ಮಾಡುತ್ತಾರೆ. ಈಗಂತೂ ಅನೇಕ ತಳಿಯ ನಾಯಿಗಳಿವೆ. ಅದರಲ್ಲಿ ಅಪರೂಪದ ಆಫ್ರಿಕನ್ ಲಯನ್ ಡಾಗ್ ಎಂಬ ತಳಿಯ ನಾಯಿಯು ಉಡುಪಿ ಜಿಲ್ಲೆಗೆ ಬಂದಿದೆ. ರಾಜ್ಯದ ಬೇರೆಲ್ಲೂ ಈ ತಳಿಯ ನಾಯಿ ಅಧಿಕೃತವಾಗಿ ಸಾಕುತ್ತಿಲ್ಲ.

ಸೌತ್ ಆಫ್ರಿಕಾದಲ್ಲಿ ನೊಂದಣಿ ಹೊಂದಿರುವ ಅಪರೂಪದ ತಳಿಯ ನಾಯಿ ಮರಿಗಳನ್ನು ಚೆನೈಗೆ ವಿವೇಕ್ ಎಂಬವರು ತಂದು ಬ್ರೀಡ್ ಮಾಡಿದ್ದಾರೆ. ಅವರಿಂದ ವಿಶ್ವನಾಥ್ ಅವರು 42 ದಿನದ ನಾಯಿ ಮರಿಯನ್ನು ಖರೀದಿಸಿ, ಚೆನೈನಿಂದ ರೈಲಿನ ಮೂಲಕ ಉಡುಪಿಗೆ ತಂದಿದ್ದಾರೆ. ಈ ನಾಯಿಯನ್ನು ಆಫ್ರಿಕನ್ ಲಯನ್ ಡಾಗ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಉಡುಪಿಯ ಅಜ್ಜರಕಾಡು ನಿವಾಸಿ, ವಿಶ್ವನಾಥ್ ಸುಮಾರು 25 ವರ್ಷಗಳಿಂದ ವಿವಿಧ ತಳಿಯ ನಾಯಿಯನ್ನು ಸಾಕುತ್ತಿದ್ದಾರೆ. ಹಾಗೂ ಅವರ ಪತ್ನಿ ಪ್ರಿಯಾ ಕಾಮತ್ ಪ್ರಸ್ತುತ 9 ನಾಯಿಗಳನ್ನು ಸಾಕುತ್ತಿದ್ದಾರೆ. ಅಮೇರಿಕನ್ ಬುಲ್ಲಿ, ಡಾಬರ್ ಮ್ಯಾನ್, ಲ್ಯಾಬರ್ ಡಾಂಗ್, ಪಗ್ ಸೇರಿದಂತೆ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ.

ಕಳೆದ 6 ವರ್ಷಗಳ ಹಿಂದೆ ತನ್ನ ಪ್ರೀತಿಯ ಡಾಬರ್ ಮ್ಯಾನ್ ರಾಷ್ಟ್ರೀಯ ಮಟ್ಟದ ಡಾಗ್ ಶೋನಲ್ಲಿ ಚಾಂಪಿಯನ್ ಆದ ಸವಿ ನೆನಪಿಗಾಗಿ, ತಮ್ಮ ಕೈಯಲ್ಲಿ ಡಾಬರ್ ಮ್ಯಾನ್ ನಾಯಿಯ ಅಚ್ಚೆ ಹಾಕಿಸಿಕೊಂಡಿದ್ದಾರೆ. ಅವರು ಡಾಬರ್ ಮ್ಯಾನ್‌ಗೆ ಇಟ್ಟಿರುವ ಬಾಂಡ್ ಎಂಬ ಹೆಸರನ್ನು ಬರೆಸಿಕೊಂಡಿದ್ದಾರೆ.

ನಾಯಿ ಪ್ರೇಮಿ ವಿಶ್ವನಾಥ್ ಅವರು ಅಪರೂಪದ ಜಿಂಬಾಬೈ ಮೂಲದ ರೊಡೇಶಿಯನ್ ರಿಡ್ಜ್ ಬ್ಯಾಕ್ ತಳಿಯ 42 ದಿನದ ಗಂಡು ನಾಯಿ ಮರಿಯನ್ನು ಖರೀದಿಸಿದ್ದಾರೆ. ಈ ನಾಯಿ ಕರ್ನಾಟಕದ ಕ್ಯಾನಲ್ ಕ್ಲಬ್ ನಲ್ಲಿ ನೊಂದಣಿ ಪಡೆದ ಏಕೈಕ ನಾಯಿಯಾಗಿದೆ.
ಈ ತಳಿಯ ನಾಯಿ ಮರಿಯನ್ನು 1,10,000 ರೂ. ನೀಡಿ ಖರೀದಿಸಿದ್ದಾರೆ.

ವಿಪರೀತ ಸಿಟ್ಟಿನ ನಾಯಿ ತಳಿ ಇದಾಗಿದ್ದು, ಇಂತಹ ಒಂದೇ ತಳಿಯ ನಾಲ್ಕು ನಾಯಿಗಳು ಒಟ್ಟಿಗೆ ಸೇರಿದರೇ ಸಿಂಹವನ್ನೇ ಮುಗಿಸುವ ತಾಕತ್ತು ಇದಕ್ಕಿದೆ. ಹೀಗಾಗಿ ಲಯನ್ ಡಾಗ್ ಎಂಬ ಹೆಸರು ಇದೆಯಂತೆ. ಈ ಪವರ್ ಫುಲ್ ತಳಿಯ ನಾಯಿಯ ಭುಜದಿಂದ ಸೊಂಟದವರೆಗೆ 2 ಇಂಚು ಅಗಲದ ನೇರ ರೋಮಗಳಿವೆ. ಈ ತಳಿಯು 10 ರಿಂದ 13 ವರ್ಷಗಳವರೆಗೆ ಮಾತ್ರ ಬದಕುತ್ತೆ. ಬೇಟೆಗಾರಿಕೆ, ಕಾವಲುಗಾರಿಕೆ ಬಲವಾದ ಇಚ್ಛಾಶಕ್ತಿ ಹಾಗೂ ಮಾಲೀಕನಿಗೆ ನಿಷ್ಠಾವಂತವಾಗಿರುತ್ತದೆ.

ಇಂತಹ ಅಪರೂಪದ ನಾಯಿಯೊಂದು ಉಡುಪಿ ಜಿಲ್ಲೆಗೆ ಬಂದಿದೆ. ಸೌತ್ ಆಫ್ರಿಕಾ ಮೂಲದ ನಾಯಿಯೊಂದು ಇದೀಗ ಸೌತ್ ಕರ್ನಾಟಕದಲ್ಲಿ ಜನಾಕರ್ಷಣೆಗೆ ಪಾತ್ರವಾಗಿದೆ.

Leave A Reply

Your email address will not be published.