QR Code : ನಿಮ್ಮ ಮೊಬೈಲ್ ನಂಬರ್ ಗೂ ಕ್ಯೂಆರ್ ಕೋಡ್ ಮಾಡಬಹುದು | ಹೇಗೆ?
QR ಕೋಡ್ಗಳನ್ನು ಪೇಮೆಂಟ್ ಮಾಡಲು, ವಿಳಾಸಗಾಗಿ , ಮಾಹಿತಿಗಳ ಲಿಂಕ್ಗಳು, ವಿಸಿಟಿಂಗ್ ಕಾರ್ಡ್ಗಳು ಸೇರಿದಂತೆ ಹಲವು ಕಡೆಗಳಲ್ಲಿ ಈಗ ಇದರ ಬಳಕೆ ಹೆಚ್ಚಾಗಿದೆ. ಹಾಗೆಯೇ, ಮೊಬೈಲ್ ನಂಬರ್ಗೂ QR ಕೋಡ್ ನ್ನು ಮಾಡಬಹುದು. ಇನ್ನೂ ಇದು ಹೇಗೆ ಸಾಧ್ಯ ಎಂದು ತಿಳಿಯೋಣ.
ಈ QR ಕೋಡ್ನಲ್ಲಿ ಬಳಕೆದಾರರಿಗೆ ಮಾಹಿತಿ ನೇರವಾಗಿ ಕಾಣಿಸುವುದಿಲ್ಲ ಮತ್ತು ಕೋಡ್ ರೂಪದಲ್ಲಿ ಇರುತ್ತದೆ. ಕ್ಯಾಮೆರಾ ಮೂಲಕ QR ಕೋಡ್ ಸ್ಕ್ಯಾನ್ ಮಾಡಿದಾಗ ಮಾಹಿತಿಯು ತೆರೆದುಕೊಳ್ಳುತ್ತದೆ. ಹಾಗಾಗಿ ಕೋಡ್ಗಳು ಮಾಹಿತಿಯ ಸಂಕ್ಷಿಪ್ತ ರೂಪ ಅಥವಾ ಡಿಜಿಟಲ್ ರೂಪ ಎಂದೇ ಹೇಳಬಹುದು. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಈ ಒಂದು QR CODE ಬಳಸಲು ಸಾಧ್ಯವಾಗುತ್ತದೆ.
ಇಲ್ಲಿ ಎರಡು ರೀತಿಯ QR CODE ಗಳಿವೆ. ಯಾವುದೆಂದರೆ, ವೆಬ್ನಲ್ಲಿ ಒಂದು ಸೆಟ್ ಸ್ಥಳಕ್ಕೆ ಲಿಂಕ್ ಮಾಡುವಂತಹವುಗಳು ಇದನ್ನು ಸ್ಟಿಲ್ QR ಕೋಡ್ ಎಂದು ಕರೆಯಲಾಗುತ್ತದೆ. ಮತ್ತು ಗ್ರಾಹಕರು ನವೀಕರಿಸಬಹುದಾದ ವೆಬ್ ಸ್ಥಳಕ್ಕೆ ಡೈನಾಮಿಕ್ QR ಕೋಡ್ ಎನ್ನುತ್ತಾರೆ. ಈ QR ಕೋಡ್ ಗಳನ್ನು ರಚಿಸಲು ಆ್ಯಪ್ಗಳು ಲಭ್ಯವಿದೆ.
ಯಾವುದೆಂದರೆ,ಗೂಗಲ್ ಕ್ರೋಮ್ ಇದರಲ್ಲಿ QR ಕೋಡ್ ರಚಿಸಬಹುದು. ಉಚಿತವಾಗಿ QR ರಚಿಸಲು ಗೂಗಲ್ ಕ್ರೋಮ್ನಲ್ಲಿ QR generator ಆಯ್ಕೆ ಇದೆ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕ್ರೋಮ್ ನಲ್ಲಿ ಶೇರ್ ಸಿಸ್ಟಮ್ನಲ್ಲಿ ನಿರ್ಮಾಣವಾಗಿದೆ. ಹಾಗೆಯೇ ಕ್ರೋಮ್ ಪ್ರತಿಯೊಂದು ಡೆಸ್ಕ್ಟಾಪ್ ಆವೃತ್ತಿಯಲ್ಲಿಯೂ ಕೂಡ ಲಭ್ಯವಿದೆ. ಹಾಗಾಗಿ ನೀವು ಗೂಗಲ್ ಕ್ರೋಮ್ನಲ್ಲಿ ಸುಲಭವಾಗಿ QR CODE ರಚಿಸಬಹುದು.
ಇನ್ನು, QR ಕೋಡ್ ಮಂಕಿ ಸಾಫ್ಟ್ವೇರ್ನಲ್ಲಿ ರಚಿಸಬಹುದು. ಈ QR ಕೋಡ್ ಮಂಕಿ ಸಾಫ್ಟ್ವೇರ್ ಉಚಿತವಾದದ್ದಾಗಿದೆ. ವೆಬ್ಸೈಟ್ನಿಂದ ಬಳಕೆದಾರರು ಬೇಕೆಂದರೆ QR ಕೋಡ್ ಅನ್ನು ರಚಿಸಿ, ಡೌನ್ಲೋಡ್ ಸಹ ಮಾಡಬಹುದು. Qr-code-generator.com ನಂತೆ ಪಾವತಿಸಿದ ಯೋಜನೆಗಳೊಂದಿಗೆ, ಡೈನಾಮಿಕ್ QR ಕೋಡ್ಗಳನ್ನೂ ಮಾಡಬಹುದಾಗಿದೆ.
QR ಕೋಡ್ ಜನರೇಟರ್ ಸಾಫ್ಟ್ವೇರ್ ಇದು ಪ್ರಮುಖ QR ಕೋಡ್ ಜನರೇಟರ್ಗಳಲ್ಲಿ ಒಂದಾಗಿದೆ. QR ಕೋಡ್ ಬಾರ್ಕೋಡ್ನ ಎರಡು ಆಯಾಮದ ಆವೃತ್ತಿ, ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಪಿಕ್ಸೆಲ್ ಮಾದರಿಗಳಿಂದ ಮಾಡಿದೆ. URL, vCard, ಇಮೇಲ್, SMS, ಟ್ವಿಟರ್, WiFi ಮತ್ತು ಬಿಟ್ಕಾಯಿನ್ ನಿಂದ ಆಯ್ಕೆಯನ್ನು ಮಾಡಬಹುದಾಗಿದೆ.
ಹಾಗೇ Wix QR ಕೋಡ್ ಜನರೇಟರ್ನೊಂದಿಗೆ ನಿಮ್ಮ ಸ್ವಂತ ಕಸ್ಟಮ್, ಉತ್ತಮ ಗುಣಮಟ್ಟದ QR ಕೋಡ್ಗಳನ್ನು ಮಾಡಬಹುದು. ಬಳಕೆದಾರರು ನಿಮ್ಮ ಮುದ್ರಿತ ಅಥವಾ ಡಿಜಿಟಲ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಮಾರಾಟದ ಹೆಚ್ಚಳಕ್ಕಾಗಿ QR ಕೋಡ್ಗಳನ್ನು ಬಳಸಬೇಕು. ಈ ರೀತಿಯ ಹಲವಾರು ಆ್ಯಪ್ಗಳಲ್ಲಿ QR CODE ನ್ನು ರಚಿಸಬಹುದಾಗಿದೆ.