ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿ ಬೀಫ್ ಸ್ಟಾಲ್ ಇದ್ರೆ ಭೂಮಿ ಪೂಜೆ ನಡೆಯಲ್ಲ – ಶಾಸಕ ವೇದವ್ಯಾಸ ಕಾಮತ್

0 9

ಬೀಫ್ ಸ್ಟಾಲ್ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದೂ, ಇದರ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಶಾಸಕ ಕಾಮತ್, ಸೆಂಟ್ರಲ್ ಮಾರ್ಕೆಟ್ ನ ನೂತನ ಕಟ್ಟಡದಲ್ಲಿ ಬೀಫ್ ಸ್ಟಾಲ್ ಗಳು ನಿರ್ಮಾಣವಾಗುವುದಾದರೆ, ನಾನು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆಯನ್ನೇ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನೂತನ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದ‌ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿರಲಿಲ್ಲ. ಪ್ರಸ್ತುತ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ ಬಳಿಕ ಗೋಹಂತಕರ ಆಸ್ತಿ ಜಪ್ತಿ ಮಾಡಿಸಿ, ಕಠಿಣ ಕಾನೂನು ಕ್ರಮಗಳ ಮೂಲಕ ಗೋಹಂತಕರಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ.

ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬದಲಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೂ, ಯಾವುದೇ ಕಾರಣಕ್ಕೂ ಬೀಫ್ ಸ್ಟಾಲ್ ನಿರ್ಮಾಣವಾಗಲು ಅನುಮತಿ ನೀಡುವುದಿಲ್ಲ.

ಹಿಂದಿನ ಮಾರುಕಟ್ಟೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದ್ದೂ, ನೂತನವಾಗಿ ಸುಸಜ್ಜಿತ ಮಾರುಕಟ್ಟೆಯನ್ನು 114 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈ ನೂತನವಾಗಿ ನಿರ್ಮಿಸುವ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Leave A Reply