ಯಾವೆಲ್ಲ ಅನಾರೋಗ್ಯಕ್ಕೆ ಸಹಾಯವಾಗುತ್ತೆ ಚಿಕ್ಕು ಹಣ್ಣು?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಣ್ಣ ಹಣ್ಣು ಆದರೂ ಇದರ ಉಪಯೋಗಗಳು ಹಲವಾರು. ಅದುವೇ ಸಪೋಟ ಎಂದು ಕರೆಯಲಾಗುವಂತಹ ಚಿಕ್ಕ ಹಣ್ಣು,. ಚಿಕ್ಕು ಹಣ್ಣನ್ನು ಹಾಗೆ ತಿನ್ನುವುದಕ್ಕಿಂತ ಹಲವಾರು ಜನ ಜ್ಯೂಸ್ ಮಾಡಿ ಕುಡಿಯಲು ಇಚ್ಛಿಸುತ್ತಾರೆ. ಈ ಚಿಕ್ಕು ಹಣ್ಣು ಯಾವೆಲ್ಲ ಕಾಯಿಲೆಗಳಿಗೆ ಮದ್ದು ಎಂಬುದು ನಿಮಗೆ ಗೊತ್ತಾ? ಇಂದು ತಿಳಿಯಿರಿ.

ಸಪೋಟಾ ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿದೆ.  ಇದು ಅನೇಕ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ಚಿಕ್ಕೂ ಬೀಜದಿಂದ ತೊಗಟೆಯವರೆಗಿನ ಎಲ್ಲಾ ಭಾಗಗಳು ಹಲವು ರೋಗಗಳನ್ನು ನಿವಾರಿಸುತ್ತದೆ ಎಂದರೆ ನೀವು ನಂಬಲೇಬೇಕು. ಹೌದು ಕೇವಲ ಹಣ್ಣು ಮಾತ್ರ ಅಲ್ದೆ ಇದರ ಬೀಜ ಮತ್ತು ಸಿಪ್ಪೆ ಕೂಡ ಹಲವು ಅನಾರೋಗ್ಯಕ್ಕೆ ಮದ್ದಾಗಿದೆ.

ಚಿಕ್ಕೂ ತೊಗಟೆಯನ್ನು ಬೇಯಿಸಿ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.  ಜ್ವರವನ್ನು ಕಡಿಮೆ ಮಾಡಲು, ನೀವು 5-10 ಮಿಲಿ ಕಷಾಯವನ್ನು ತಯಾರಿಸಿ ಕುಡಿಯಬಹುದು. ಮನೆ ಮದ್ದು ಮಾಡಿ ಕುಡಿಯುವುದು ತುಂಬಾ ಸೂಕ್ತ.

ಕಾಲು ನೋವು ಅಥವಾ ಸಂಧಿ ನೋವು ನಿಮಗೆ ಕಾಣಿಸಿಕೊಂಡಲ್ಲಿ ಚಿಕ್ಕುವಿನ ಸಿಪ್ಪೆಯನ್ನು ತೆಗೆದು 5 ರಿಂದ 10 ನಿಮಿಷಗಳ ಕಾಲ ಆ ಜಾಗದಲ್ಲಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡುವುದರ ಮೂಲಕ ಊಟ ಶೇಖಡ 80ರಷ್ಟು ಕಡಿಮೆ ಆಗುತ್ತದೆ.

ಚಿಕ್ಕು ಜ್ಯೂಸ್ ಕುಡಿಯುವಾಗ ಹೆಚ್ಚಾಗಿ ಐಸ್ ಕ್ಯೂಬ್ ಹಾಕಿಕೊಳ್ಳಬೇಡಿ. ಏಕೆಂದರೆ ಇದರ ಸತ್ವಾಂಶ  ಹೋಗುತ್ತದೆ. ಜೊತೆಗೆ ಚಿಕ್ಕು ಮೊದಲೇ ಕೋಲ್ಡ್ ಇನ್ನು ಐಸ್ ಹಾಕಿ ಕುಡಿಯುವುದರಿಂದ ಶೀತಕ್ಕೆ ಕಾರಣವಾಗಬಹುದು.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದವರು ದಯವಿಟ್ಟು ಚಿಕ್ಕು ಹಣ್ಣನ್ನು ಸೇವಿಸಿ. ಜೀರ್ಣಶಕ್ತಿಯನ್ನು ಇದು ವೃದ್ಧಿಸುತ್ತದೆ. ಜೊತೆಗೆ ಮಲಬದ್ಧತೆ ಅಂತಹ ರೋಗ ರುಜಿನಗಳಿಂದ ಪಾರು ಮಾಡಿಸುತ್ತದೆ.

ಚಿಕ್ಕು ಹಣ್ಣಿವಿನಲ್ಲಿ ವಿಟಮಿನ್ ಎ ಇರುವುದರಿಂದ ದೃಷ್ಟಿ ಹೀನ ಸಮಸ್ಯೆಯನ್ನು ಕ್ಷೀಣಿಸುತ್ತದೆ. ಹೆಚ್ಚಾಗಿ ಇದನ್ನು ವಯೋವೃದ್ಧರಿಗೆ ನೀಡಿದರೆ ಬಹಳ ಸೂಕ್ತ. ಇಷ್ಟೆಲ್ಲಾ ಪ್ರಯೋಜನ ಇರುವ ಚಿಕನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬೇಡಿ.

Leave A Reply