ಟ್ವಿಟರ್ ಶಾಕ್ | ಪ್ರತಿ ತಿಂಗಳು 8 ಡಾಲರ್ ಪಾವತಿಸಿ, ಬ್ಲೂಟಿಕ್ ನಿಮ್ಮದಾಗಿಸಿಕೊಳ್ಳಿ| ಇಂದಿನಿಂದ ಹೊಸ ರೂಲ್ಸ್

ಎಲಾನ್ ಮಸ್ಕ್ ಟ್ವಿಟರ್ ಖರೀದಿಯ ಬೆನ್ನಲ್ಲೇ ಬ್ಲೂಟಿಕ್ ಪಡೆಯಲು ಇನ್ನು ಮುಂದೆ ಹಣ ಪಾವತಿಸಬೇಕು ಎಂದು ಹೊಸ ರೂಲ್ಸ್ ಜಾರಿಗೆ ತಂದಿದ್ದರು. ಹಾಗಾಗಿ ಇದೀಗ ಪ್ರತಿ ತಿಂಗಳು 8 ಡಾಲರ್ ನೀಡಿ ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆಯನ್ನು ಇಂದಿನಿಂದ ಟ್ವಿಟರ್ ಆರಂಭಿಸಿದೆ.

ಆದರೆ ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಮಾತ್ರವೇ ಈ ಸೇವೆ ಲಭ್ಯವಿದೆ. ಐಒಎಸ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಇಂದಿನಿಂದ ಟ್ವಿಟರ್ ಬ್ಲೂಟಿಕ್ ಗೆ ಉತ್ತಮವಾದ ಹೊಸ ಫೀಚರ್‌ಗಳನ್ನು ಸೇರಿಸುತ್ತಿದ್ದೇವೆ ಮತ್ತು ಅತಿ ಬೇಗನೆ ಹೆಚ್ಚಿನ ಫೀಚರ್‌ಗಳನ್ನು ಪಡೆಯಲಿದ್ದೇವೆ ಸದ್ಯಕ್ಕೆ ನೀವು ಈಗ ಸೈನ್ ಅಪ್ ಮಾಡಿದರೆ ಪ್ರತಿ ತಿಂಗಳಿಗೆ 7. 99 ಡಾಲರ್ ನೀಡಿ ಟ್ವಿಟರ್ ಬ್ಲೂ ಟಿಕ್ ಪಡೆಯಬೇಕಾಗುತ್ತದೆ ಎಂದು ಟ್ವಿಟರ್ ಮಾಹಿತಿ ನೀಡಿದೆ.

ಸಾಕಷ್ಟು ಸೆಲೆಬ್ರಿಟಿಗಳು, ಕಂಪನಿಗಳು ಮತ್ತು ರಾಜಕಾರಣಿಗಳು ಬ್ಲೂಟಿಕ್ ಪಡೆದವರಾಗಿದ್ದಾರೆ. ಪ್ರತಿಯೊಬ್ಬರಿಗೂ ಬೇಕಾದಲ್ಲಿ ತಮ್ಮ ಖಾತೆಗೆ ಬ್ಯೂಟಿಕ್ ಅನ್ನು ಪಡೆಯಬಹುದು ಎಂದು ಟ್ವಿಟರ್ ಹೇಳಿದೆ.
ಅಷ್ಟೇ ಅಲ್ಲದೆ, ಈವರೆಗೂ ಟ್ವಿಟರ್‌ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್ ಮಾಡಬಹುದಾಗಿತ್ತು. ಆದರೆ ಇದೀಗ ಬ್ಲೂಟಿಕ್ ಸೇವೆ ಪಡೆದವರು ಟ್ವಿಟರ್ ಗೆ ಸಣ್ಣ ವಿಡಿಯೋ ತುಣುಕಿನ ಜೊತೆಗೆ ತುಂಬಾ ಸಮಯ ವೀಕ್ಷಿಸುವಂತಹ ವೀಡಿಯೊಗಳನ್ನು ಪೋಸ್ಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಟ್ವಿಟರ್ ಅನ್ನು ಬೆಂಬಲಿಸುವುದಕ್ಕಾಗಿ ಅರ್ಧದಷ್ಟು ಜಾಹೀರಾತುಗಳನ್ನು ಟ್ವಿಟರ್ ಬಹುಮಾನವಾಗಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.

Leave A Reply

Your email address will not be published.