Shyam Saran Negi : ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ !!!

ಭಾರತದ ಮೊದಲ ಮತದಾರರಾಗಿರುವ ಹಿಮಾಚಲ ಪ್ರದೇಶದ (Himachal Pradesh) 106 ವರ್ಷದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು ಇಂದು ಕಿನ್ನೌರ್‌ನ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ.

2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ಯಾಮ್ ಶರಣ್ ನೇಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.


ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 2ರಂದು ಅವರು ಅಂಚೆ ಮತ ಚಲಾಯಿಸಿದ್ದು, ಹಾಗೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಬುಧವಾರ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದಾರೆ. ಕಳೆದ 35 ಬಾರಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಆದರೆ, ಈ ಬಾರಿ ಅನಾರೋಗ್ಯದ ಕಾರಣ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು.

ನೇಗಿ ಅವರು ಮೊದಲ ಚುನಾವಣಾ ಪ್ರಕ್ರಿಯೆಯಲ್ಲಿ ನಡೆದ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದಾರೆ. ಬ್ಯಾಲೆಟ್ ಪೇಪರ್‌ನಲ್ಲಿ ಸ್ಟಾಂಪ್ ಹಾಕುವುದರಿಂದ ಹಿಡಿದು ಇವಿಎಂನಿಂದ ವಿವಿಪಿಎಟಿವರೆಗೆ ಅವರು ಭಾರತದ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ಎಂದಿಗೂ ತಪ್ಪಿಸಲಿಲ್ಲ ಎಂಬುದು ವಿಶೇಷ.

ಇಂದಿನ ಕಾಲದಲ್ಲಿ ಆರೋಗ್ಯವಂತರಾಗಿದ್ದರು ಕೂಡ ಎಷ್ಟೋ ಬಾರಿ ಮತದಾನ ಮಾಡಲು ನಿರ್ಲಕ್ಷ ಧೋರಣೆ ತಾಳುವುದು ಸಾಮಾನ್ಯ. ಆದರೆ, ಇವರ ನಡುವೆ ತಮ್ಮ ಇಳಿ ವಯಸ್ಸಿನವರೆಗೂ ಕೂಡ ಮತದಾನ ಚಲಾಯಿಸುವ ಮೂಲಕ ನೇಗಿ ಅವರು ಉಳಿದವರಿಗೆ ಮಾದರಿಯಾಗಿದ್ದರು.


ಜುಲೈ 1, 1917ರಂದು ಜನಿಸಿದ ಶ್ಯಾಮ್ ಶರಣ್ ನೇಗಿ ಅವರು 1975ರಲ್ಲಿ ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. 1951ರಲ್ಲಿ ನೇಗಿ ಅವರು ಮತದಾನ ತಂಡದ ಸದಸ್ಯರಾಗಿದ್ದು ಅಲ್ಲದೆ, ತಮ್ಮ ಮೊದಲ ಮತವನ್ನು ಶೋಂಥಾಂಗ್ ಮತಗಟ್ಟೆಯಲ್ಲಿ ಚಲಾಯಿಸಿದ್ದರು.

ಅವರು ಎಲ್ಲಾ ಪಂಚಾಯತ್, ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. ಇದುವರೆಗೆ ಎಲ್ಲ ಚುನಾವಣೆಗಳಲ್ಲೂ ಮತಗಟ್ಟೆಯಲ್ಲಿಯೇ ಮತ ಚಲಾಯಿಸಿದವರು. 2014ರಲ್ಲಿ ಹಿಮಾಚಲ ಪ್ರದೇಶದಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸಲು ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಶ್ಯಾಮ್ ಶರಣ್ ನೇಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.


2014ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ತನ್ನ #PledgeToVote ಪ್ರಚಾರಕ್ಕಾಗಿ ಗೂಗಲ್ ನೇಗಿ ಅವರ ವೀಡಿಯೊವನ್ನು ರಚಿಸಿದ ನಂತರ ನೇಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಸಾಕಷ್ಟು ಪ್ರಯತ್ನಗಳ ನಂತರ ದೇಶವು ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ.

ಪ್ರತಿ ಚುನಾವಣೆಯು ಧಾರ್ಮಿಕ ಹಬ್ಬವಾಗಿದ್ದು, ಹಾಗಾಗಿ, ಜನರು ತಪ್ಪದೇ ಮತ ಚಲಾಯಿಸಬೇಕು. ಇದರಿಂದಾಗಿಯೇ, ಒಳ್ಳೆಯ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬ ಸಂದೇಶ ನೀಡಿದ ಶ್ಯಾಮ್ ಸರನ್ ನೇಗಿ ಅವರು ತಮ್ಮ ಕೊನೆಯ ಮತದಾನ ಚಲಾಯಿಸುವ ಮೂಲಕ ಪ್ರತಿ ಮತದ ಮೌಲ್ಯವನ್ನು ತಿಳಿ ಹೇಳಿ ಯುವಜನತೆಗೆ ಮತದಾನ ಮಾಡುವಂತೆ ಪ್ರೇರಣೆ ನೀಡಿದ್ದಾರೆ.


ಕಿನ್ನೌರ್ ಜಿಲ್ಲಾಧಿಕಾರಿ ಅಬಿದ್ ಹುಸೇನ್ ಅವರು ಶ್ಯಾಮ್ ಶರಣ್ ನೇಗಿ ಅವರ ಅಂತ್ಯಕ್ರಿಯೆಯನ್ನು ಕಲ್ಪಾದಲ್ಲಿರುವ ಅವರ ಗ್ರಾಮದಲ್ಲಿ ಪೂರ್ಣ ಗೌರವಗಳೊಂದಿಗೆ ನೆರವೇರಿಸಲು ಪೂರ್ವ ತಯಾರಿ ನಡೆಸುತ್ತಿದ್ದಾರೆ.


ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಕೂಡ 106 ವರ್ಷ ವಯಸ್ಸಿನ ಶ್ಯಾಮ್ ಶರಣ್ ನೇಗಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, “ಸ್ವತಂತ್ರ ಭಾರತದ ಮೊದಲ ಮತದಾರ ಮತ್ತು ಕಿನ್ನೌರ್‌ಗೆ ಸೇರಿದ ಶ್ಯಾಮ್ ಶರನ್ ನೇಗಿಜೀ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು” ಎಂದು ಸಿಎಂ ಜೈರಾಮ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.