ಚಾಲಕನ ಉದ್ಧಟತನ : ಡ್ರೈವಿಂಗ್ ವೇಳೆ ಮೊಬೈಲ್ ನಲ್ಲಿ ಚಾಟ್ | ರೆಡ್ ಹ್ಯಾಂಡ್ ಆಗಿ ಹಿಡಿದ ಸಾರಿಗೆ ಇಲಾಖೆ ಅಧಿಕಾರಿಗಳು, ನಂತರ ನಡೆದದ್ದೇನು?

ಇಂದಿನ ದಿನಗಳಲ್ಲಿ ನಾವು ಮೊಬೈಲ್ ಅನ್ನು ಕಂಟ್ರೋಲ್ ಮಾಡುವ ಬದಲು, ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರದ ಹಾಗೆ ಅದೇ ನಮ್ಮನ್ನು ಕಂಟ್ರೋಲ್ ಮಾಡುತ್ತಿದೆ. ಜನರು ಮೊಬೈಲ್ ನಲ್ಲಿ ಎಷ್ಟು ಮುಳುಗಿದ್ದಾರೆಂದರೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಹಾಗೆ. ಅದೇ ರೀತಿ ಇಲ್ಲೊಬ್ಬ ಖಾಸಗಿ ಬಸ್ ಚಾಲಕ ಡ್ರೈವಿಂಗ್ ಮಾಡುತ್ತಾ ಮೊಬೈಲ್ ನಲ್ಲಿ ಬಿಜಿಯಾಗಿದ್ದ. ಈತನನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಕೊಚ್ಚಿಯ ಅಲುವಾ ಮತ್ತು ಥೀವರಾ ಮಾರ್ಗದ ನಡುವೆ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಚಾಲಕ ರುಬೀಶ್ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನೂ ಈ ಫೋಟೋ ಸಾಕಷ್ಟು ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ನೋಡಿದ ತಕ್ಷಣ ಕಾರ್ಯಪ್ರವೃತ್ತರಾದ ಎಂವಿಡಿ ಅಧಿಕಾರಿಗಳು ಬಸ್ ಚೇಸ್ ಮಾಡಿ ಚಾಲಕ ರುಬೀಶ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ, ಬಸ್ ಸಹ ಸೀಜ್ ಮಾಡಲಾಗಿದ್ದು, ಸ್ಪೀಡ್ ಗವರ್ನರ್ ಕಡಿತ ಸೇರಿದಂತೆ ಅನೇಕ ಗಂಭೀರ ಸ್ವರೂಪದ ಸಂಚಾರ ನಿಯಮ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿದೆ.

ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಕಾನೂನಿಗೆ ವಿರುದ್ಧವಾಗಿದೆ. ಸಾಕಷ್ಟು ಜನರು ಡ್ರೈವಿಂಗ್ ಮಾಡುವಾಗ ಅಥವಾ ಇನ್ನಿತರ ಸಮಯದಲ್ಲಿ ಮೊಬೈಲ್ ಬಳಕೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ನಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಇದೆ.

Leave A Reply

Your email address will not be published.