ಪುಟ್ಟ ಮಗುವಿನ ಆಗಮನದ ನಿರೀಕ್ಷೆಯ ಸಂಭ್ರಮದಲ್ಲಿ ಬಿಗ್ ಬಾಸ್ ಸಮೀರ್ ಆಚಾರ್ಯ ದಂಪತಿ!!!

ಸೆಲೆಬ್ರಿಟಿ ಕಪಲ್ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಇವರ ಸೀಮಂತದ ಶುಭಕಾರ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರಾಜಾ ರಾಣಿ ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಶ್ರಾವಣಿಯವರಿಗೆ ಮಿಸ್ ಕ್ಯಾರೇಜ್‌ ಆಗಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಫ್ಯಾಮಿಲಿ ಬೇಕು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ರಾಜಾ ರಾಣಿ ರಿಯಾಲಿಟಿ ಶೋ ನಲ್ಲಿ ಹೇಳಿಕೊಂಡಿದ್ದರು. ಇದೀಗ ಅವರ ನಿರೀಕ್ಷೆಯ ಸಂಭ್ರಮದಲ್ಲಿದ್ದಾರೆ.

 

ಬಿಗ್ ಬಾಸ್ ಮತ್ತು ರಾಜಾ ರಾಣಿ ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮನೆಯಲ್ಲಿ ಎಷ್ಟೋ ಸಮಯದ ನಂತರ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಸೀಮಂತದ ಸಂಭ್ರಮ ಮುಗಿಲುಮುಟ್ಟಿದೆ. ‘ಜೀವನದ ಹೊಸ ಅಧ್ಯಾಯ ಆರಂಭವಾಗಿದೆ’ ಎಂದು ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಮಗುವಿನ ಆಗಮನದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಸಂಪ್ರದಾಯದ ಪ್ರಕಾರ ಶ್ರಾವಣಿ ಅವರಿಗೆ ಸೀಮಂತ ಮಾಡಲಾಗಿದೆ. ಜೋಕಾಲಿಯಲ್ಲಿ ದಂಪತಿಗಳಿಬ್ಬರೂ ಕುಳಿತುಕೊಂಡಿದ್ದು, ಹಿರಿಯರು ಹಾಡುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಮತ್ತು ಸಿನಿ ಸ್ನೇಹಿತರು ವಿಶ್ ಮಾಡಿ ಅವರ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಸಮೀರ್ ಆಚಾರ್ಯ ಮತ್ತು ಶ್ರಾವಣಿ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Leave A Reply

Your email address will not be published.