ಕೃಷಿ ಮೇಳ : ಕ್ಕೊಕ್ಕೋ…ಅಬ್ಬಾ ಈ ಕೋಳಿ ಬೆಲೆ ಇಷ್ಟಾ? ಡಾಂಗ್ ತಾವ್ ಕೋಳಿ ಬೆಲೆ ಕೇಳಿದರೆ ನಿಜಕ್ಕೂ ದಂಗಾಗ್ತೀರಾ…

ಸಾಮಾನ್ಯವಾಗಿ ಕೋಳಿಗಳಿಗೆ ಒಂದು ಅಥವಾ ಎರಡು ಸಾವಿರ ರೂಪಾಯಿಗಳು ಇರುವುದು ಕೇಳಿರುತ್ತೇವೆ. ಆದರೆ ಇಲ್ಲಿ ಡಾಂಗ್ ತಾವ್ (ಡ್ರಾಗನ್ ಬರ್ಡ್) ಎಂಬ ಕೋಳಿ ಜೋಡಿಯ ಬೆಲೆ ಕೇಳಿದ್ರೆ ಆಶ್ಚರ್ಯಪಡುತ್ತೀರ. ಹಾಗಾದರೆ ಕೋಳಿಯ ಬೆಲೆ ಎಷ್ಟು? ಅದರ ವಿಶೇಷತೆ ಏನು? ನೋಡೋಣ.

 

ಕೃಷಿ ಮೇಳದಲ್ಲಿ ಸುಮಾರು 15 ಪ್ರಕಾರದ ವಿದೇಶಿ, ಅಲಂಕಾರಿಕ ಕೋಳಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಅದರಲ್ಲಿ ಡಾಂಗ್ ತಾವ್ ಎಂಬ ಕೋಳಿಯು ಸಣ್ಣನೆಯ ಕೊಕ್ಕು, ದಪ್ಪ ಕಾಲುಗಳುಗಳಿದ್ದು, 5-6 ಕೆ.ಜಿಯಷ್ಟು ತೂಗುವಂತದ್ದಾಗಿದೆ. ಇದರ ಸದ್ಯದ ಮಾರುಕಟ್ಟೆಯ ಬೆಲೆ ₹ 30 ಸಾವಿರ! ಇನ್ನೂ ಜೋಡಿಯ ಬೆಲೆ ಬರೋಬ್ಬರಿ ₹ 65 ಸಾವಿರ.

ವಿಯೆಟ್ನಾಂನ ಡಾಂಗ್ ತಾವ್ ಒಂದು ಅಪರೂಪದ ತಳಿಯಾಗಿದ್ದು, ಅವುಗಳಿಗೆ ದೊಡ್ಡ ದೊಡ್ಡ ಕಾಲುಗಳಿವೆ. ಹೀಗಾಗಿ ಮೊಟ್ಟೆಗೆ ಕಾವು ಕೊಡಲು ಕಷ್ಟವಾಗುವುದರಿಂದ ಸಂತಾನೋತ್ಪತ್ತಿ ಮಾಡುವುದೂ ಕಷ್ಟ. ಇವುಗಳನ್ನು ಬೆಳೆಸುವಾಗ ಹೆಚ್ಚಿನ ನಿರ್ವಹಣೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ರೈತರು ವಾಣಿಜ್ಯ ಉದ್ದೇಶಕ್ಕೆ ಗಿರಿರಾಜ, ಕಾವೇರಿ, ಅಸೀಲ್ ಕ್ರಾಸ್, ಕಳಿಂಗ ಬ್ರೌನ್, ವೈಟ್ ಪೆಕಿನ್, ಖಾಕಿ ಕ್ಯಾಂಪ್‌ಬೆಲ್ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಯೆಟ್ನಾಂ, ಅಮೆರಿಕ, ಜಪಾನ್, ಮಲೇಷಿಯಾ, ಚೀನಾ, ದೇಶಗಳ ಅಲಂಕಾರಿಕ ಕೋಳಿಗಳನ್ನು ಸಾಕಾಣಿಕೆ ಮಾಡುವುದು ಹವ್ಯಾಸವಾಗಿದೆ. ಹಾಗೂ ಇದರ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ರೈತ ಚೇತನಾ ಹ್ಯಾಚರೀಸ್ಸ್ ನ ಮುಖ್ಯಸ್ಥ ಚೇತನ ಬಿ.ಸಿ ತಿಳಿಸಿದರು.

ಕೊಲಂಬಿಯನ್ ಲೈವ್ ಬ್ರಹ್ಮ, ಅಮೆರಿಕನ್ ಬ್ರೀಡ್, ಪಾಲಿಶ್ ಕ್ಯಾಬ್, ಜಪಾನಿನ ಒನಗಧಾರಿ ತಳಿಯ ಕೋಳಿ 16-18 ಗರಿಗಳನ್ನು ಹೊಂದಿರುತ್ತದೆ. ಇದರ ಬಾಲ ಸುಮಾರು 12 ಮೀಟರ್‌ವರೆಗೆ ಬೆಳೆಯುತ್ತದೆ ಇನ್ನು ಇದು ಒಂದಕ್ಕೆ ₹ 30 ಸಾವಿರ ಬೆಲೆ ಇದೆ. ಹಾಗೂ ‘ಪೋಲಿಷ್ ಕ್ಯಾಪ್’ ಕೋಳಿಯ ತಲೆಯ ಭಾಗದ ಮೇಲೆ ಬಿಳಿ ಟೊಪ್ಪಿಗೆ ಇರುತ್ತದೆ. ಅಷ್ಟೇ ಅಲ್ಲದೆ ಸಿರಾಮ್ ಎಂಬ ಕೋಳಿಯು ವಿಶ್ವದ ಅತಿ ಚಿಕ್ಕ ಕೋಳಿಯಾಗಿದೆ. ಅಲಂಕಾರಿಕ ಕೋಳಿಗಳಿಗೆ ಬೇರೆ ರಾಜ್ಯಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಇವುಗಳ ತಳಿ ಅಭಿವೃದ್ಧಿ ಮಾಡುವವರು ಕಡಿಮೆ. ಈ ಕೋಳಿಗಳು ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳುವಂತಹ ಕೋಳಿಗಳಾಗಿವೆ.

Leave A Reply

Your email address will not be published.