Hair Care : ಚಳಿಗಾಲದಲ್ಲಿ ಕೂದಲು ಮಿರ ಮಿರ ಮಿಂಚಲು ಈ ಟ್ರಿಕ್ಸ್ ಫಾಲೋ ಮಾಡಿ!!!

ಚಳಿಗಾಲದಲ್ಲಿ ಕೂದಲಿನ ಸಮಸ್ಯೆಯು ಅತಿಯಾಗಿ ಕಾಣಿಸಿಕೊಳ್ಳುತ್ತದೆ. ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶವು ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ಕಡಿಮೆಯಾಗಿ ಬಿಡುತ್ತದೆ. ಇದರಿಂದಾಗಿ ಹೊಳಪನ್ನು ಕಳೆದುಕೊಳ್ಳುವುದಲ್ಲದೆ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಏನೆಲ್ಲಾ ಮಾಡಬೇಕು, ಮಾಡಬಾರದು ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ತಲೆ ಹೊಟ್ಟು ಆಗದಂತೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾಗಿ ಪದೇ ಪದೇ ಶಾಂಪೂ ಹಾಕಿ ತಲೆ ಸ್ನಾನ ಮಾಡಬೇಡಿ. ಸ್ನಾನವಾದ ತಕ್ಷಣ ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಚಳಿಗಾಲದಲ್ಲಿ ಹೇರ್ ಕಂಡಿಷ್ನರಿಂಗ್ ಅತ್ಯಂತ ಅವಶ್ಯಕ. ಡ್ಯಾಂಡ್ರಫ್ ಕಂಟ್ರೋಲ್ ಕಂಡಿಷನರ್ ಗಳನ್ನೇ ಬಳಸುವುದು ಉತ್ತಮ.

ಹೊಟ್ಟು ನಿವಾರಣೆ ಮಾಡುವ ಲೋಶನ್ ಹಚ್ಚಿ 7-10 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಶಾಂಪೂ ಹಾಕಿ ತಲೆ ಸ್ನಾನ ಮಾಡಿ. ನಂತರ ಟವೆಲ್ ಸುತ್ತಿಕೊಂಡು ಚೆನ್ನಾಗಿ ಕೂದಲನ್ನು ಒಣಗಿಸಿ. ನಿಯಮಿತವಾಗಿ ಹೇರ್ ಟ್ರಿಮ್ಮಿಂಗ್ ಮಾಡಿಸಿಕೊಳ್ಳಿ. ಇದರಿಂದ ಚಳಿಗಾಲದಲ್ಲಿ ಹೇರ್ ಸ್ಪ್ಲಿಟ್ ಆಗದಂತೆ ತಡೆಯಬಹುದು. ಡ್ರೈ ಶಾಂಪೂವನ್ನು ಬಳಸಿ. ಇದರಿಂದ ನಿಮ್ಮ ಕೂದಲಿನಲ್ಲಿ ನೈಸರ್ಗಿಕವಾದ ಎಣ್ಣೆಯ ಅಂಶ ಹಾಗೇ ಇರುತ್ತದೆ.

ಹೇರ್ ಸ್ಕೃಬ್ ಗಳನ್ನು ಬಳಸುವುದರಿಂದ ಡೆಡ್ ಸ್ಕಿನ್ ಲೇಯರ್ ಹೋಗಿ, ಕೂದಲು ಮೃದುವಾಗುತ್ತದೆ. ಸಿಲ್ಕಿ ಮತ್ತು ಸ್ಮೂತ್ ಹೇರ್ ಗಾಗಿ ಹೇರ್ ಮಾಸ್ಕ್ ಗಳನ್ನು ಕೂಡ ಬಳಸಬಹುದು. ಅಗಲವಾದ ಹಣಿಗೆಗಳಿಂದ ಕೂದಲನ್ನು ಬಾಚಿಕೊಳ್ಳಿ. ಸಿಕ್ಕಾಗದಂತೆ ನಾಜೂಕಾಗಿ -ಇಟ್ಟುಕೊಳ್ಳಿ. ಈ ರೀತಿಯಾಗಿ ಮಾಡಿದಲ್ಲಿ ಚಳಿಗಾಲದಲ್ಲೂ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ ಮತ್ತು ಹೊಳಪಾಗಿರುತ್ತದೆ.

Leave A Reply

Your email address will not be published.