Gold coins : ಅಬ್ಬಾ ಏನಿದು ಧಮಾಕಾ| ಮನೆಯ ಹಿಂದೆ ಪತ್ತೆಯಾಯ್ತು 150ವರ್ಷ ಹಳೆಯ 8 ಮಡಕೆ | ತೆರೆದಾಗ ಅದೃಷ್ಟವೇ ಚೇಂಜ್!!!

ಪ್ರಪಂಚ ಒಂದೊಂದು ಸಲ ತುಂಬಾ ವಿಶಾಲವಾಗಿದೆ ಅನಿಸುತ್ತೆ. ಆದರೆ ಕೆಲವೊಮ್ಮೆ ವಾಸ್ತವವಾಗಿ ನೋಡಿದಾಗ ಬಹಳ ಸೂಕ್ಷ್ಮವಾಗಿದೆ ಅನಿಸುತ್ತೆ. ಇದರ ನಡುವೆ ಅನಾಧಿಕಾಲದ ವಸ್ತುಗಳು ಕಾಣ ಸಿಕ್ಕಾಗ ಆಶ್ಚರ್ಯವಾಗೋದು ಖಂಡಿತ. ಹೌದು ಉತ್ತರ ಕ್ಯಾಲಿಫೋರ್ನಿಯಾದ ಗೋಲ್ಡ್ ಕಂಟ್ರಿ ಪ್ರದೇಶದಲ್ಲಿ ದಂಪತಿ 150 ವರ್ಷ ಹಳೆಯ ಮನೆಯಲ್ಲಿ ಹಲವು ವರ್ಷಗಳ ಕಾಲ ವಾಸಿಸುತ್ತಿದ್ದರು. ಅಲ್ಲಿಯೇ ಅವರ ಅದೃಷ್ಟ ಬದಲಾಗಿದ್ದು, ದಿನ ಬೆಳಗಾಗುವಷ್ಟರಲ್ಲಿ ಅವರು ಕೋಟ್ಯಾಧಿಪತಿಗಳಾಗಿದ್ದಾರೆ.

ಮನುಷ್ಯ ಅತಿ ಬೇಗನೆ ಶ್ರೀಮಂತನಾಗಬೇಕೆಂದು ಏನೆಲ್ಲಾ ಪ್ರಯತ್ನ ಮಾಡುತ್ತಾನೆ. ತಾನು ರಾತ್ರೋರಾತ್ರಿ ಶ್ರೀಮಂತರಾಗಬಹುದೆಂಬ ಆಸೆಯಿಂದ ಹಲವಾರು ಪ್ರಯತ್ನಗಳು ನಡೆಯುತ್ತವೆ. ಆದರೆ ಹಣ ಎನ್ನುವುದು ಯಾವುದೇ ಮರದಲ್ಲಾಗುವ ಎಲೆಯಂತಲ್ಲ. ಅದನ್ನು ಗಳಿಸಲು ಬಹಳಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ ಅನೇಕ ಬಾರಿ ಕೆಲವರ ಅದೃಷ್ಟ ಅದೆಷ್ಟು ಸಾಥ್ ನೀಡುತ್ತದೆ ಎಂದರೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಇಲ್ಲವೇ ಲಾಟರಿ ಹೊಡೆಯುತ್ತದೆ. ಹೀಗೆ ಏಕಾಏಕಿ ಶ್ರೀಮಂತರಾಗುತ್ತಾರೆ. ಹೀಗೆಯೇ ಅನೇಕ ವರ್ಷಗಳ ಹಿಂದೆ ಅಮೆರಿಕನ್ ದಂಪತಿಯ ಅದೃಷ್ಟ ಅರಳಿತ್ತು. ಈ ವಿಚಾರ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತದೆ.

ಮಾಹಿತಿ ಪ್ರಕಾರ ಉತ್ತರ ಕ್ಯಾಲಿಫೋರ್ನಿಯಾದ ಗೋಲ್ಡ್ ಕಂಟ್ರಿ ಪ್ರದೇಶದಲ್ಲಿ ದಂಪತಿ 150 ವರ್ಷ ಹಳೆಯ ಮನೆಯಲ್ಲಿ ಹಲವು ವರ್ಷಗಳ ಕಾಲ ವಾಸಿಸುತ್ತಿದ್ದರು. ಕ್ಯಾಲಿಫೋರ್ನಿಯಾದ ಗೋಲ್ಡ್ ಕಂಟ್ರಿ ಪ್ರದೇಶವು ಖನಿಜ ಮತ್ತು ಚಿನ್ನದ ಗಣಿಗಳ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ ಎಂಬುವುದು ಉಲ್ಲೇಖನೀಯ. ದಂಪತಿ ಹಲವಾರು ವರ್ಷ ಈ ಮನೆಯಲ್ಲಿ ವಾಸಿಸಿದ್ದರು. ಆ ಮನೆಯ ಮೂಲೆ ಮೂಲೆಯೂ ಅವರಿಗೆ ತಿಳಿದಿತ್ತು. ಆದಾಗ್ಯೂ, ಮನೆ ಹಿಂಬದಿಯಲ್ಲಿದ್ದ ಮರದ ಕೆಳಗೆ ಹೂತುಹಾಕಲಾದ ಡಬ್ಬಿಯಂತ ಅಲ್ಯೂಮಿನಿಯಂ ಮಡಕೆ ಯಾವತ್ತೂ ಅವರ ಗಮನ ಸೆಳೆದಿರಲಿಲ್ಲ.

ಒಂದು ದಿನ ನಾಯಿ ಜೊತೆ ವಾಕಿಂಗ್​ಗೆ ತೆರಳಿದಾಗ ಮರದ ಕೆಳಗೆ ಹೂತಿದ್ದ ಅಲ್ಯೂಮಿನಿಯಂ ಮಡಕೆಯನ್ನು ನೋಡುತ್ತಾರೆ. ಅಲ್ಲಿ ಅಗೆದಾಗ ಪಾತ್ರೆಗಳನ್ನು ತೆಗೆದಾಗ ಒಂದಲ್ಲ ಎರಡಲ್ಲ ಬರೋಬ್ಬರಿ 8 ಅಲ್ಯೂಮಿನಿಯಂ ಡಬ್ಬಗಳು ಸಿಕ್ಕಿವೆ. ಅವುಗಳೊಳಗೆ ಚಿನ್ನದ ನಾಣ್ಯಗಳಿದ್ದವು. ದಂಪತಿ ಆ ನಾಣ್ಯಗಳನ್ನು ಎಣಿಸಿದಾಗ, ಅವರಿಗೇ ಅಚ್ಚರಿಯಾಗಿತ್ತು. ಯಾಕೆಂದರೆ ಅದರಲ್ಲಿ ಬರೋಬ್ಬರಿ 1427 ನಾಣ್ಯಗಳು ಪತ್ತೆಯಾಗಿದ್ದವು. ವರದಿಯ ಪ್ರಕಾರ, ಆ ನಾಣ್ಯಗಳು 1847 ರಿಂದ 1894ರ ಕಾಲಮಾನದ್ದಾಗಿತ್ತು.

ಆ ನಾಣ್ಯಗಳನ್ನು ಮಾರಾಟ ಮಾಡಲು ದಂಪತಿ ನಿರ್ಧರಿಸಿದರು. ನಾಣ್ಯಗಳ ಮುಖಬೆಲೆ 22 ಲಕ್ಷ ರೂ.ಗಳಾಗಿದ್ದರೂ ಕೆಲವು ಅಪರೂಪದ ನಾಣ್ಯಗಳ ಬೆಲೆ 8 ಕೋಟಿ ರೂ. ಆಗಿತ್ತು. ದಂಪತಿ ನಾಣ್ಯಗಳನ್ನು ಮಾರಾಟ ಮಾಡಿದ್ದಾರೆ. ಇದಕ್ಕೆ ಅವರು ಕೋಟಿಗಟ್ಟಲೇ ಹಣ ಪಡೆದಿದ್ದಾರೆ. ಆ ನಾಣ್ಯಗಳನ್ನು ಯಾರು ಇಟ್ಟಿದ್ದರೆಂಬ ಬಗ್ಗೆಯೂ ಅವರಿಗೆ ತಿಳಿದಿರಲಿಲ್ಲ. ಆ ವೇಳೆ ಯಾರಿಗಾದರೂ ತಮ್ಮ ವಿಚಾರ ತಿಳಿದರೆ ಕಳ್ಳರು ಕೂಡ ತಮ್ಮ ಹಿಂದೆ ಬಿದ್ದು ಪ್ರಾಣಕ್ಕೆ ಅಪಾಯವಾಗಬಹುದು ಎಂಬ ಭಯದಿಂದ ದಂಪತಿ ತಮ್ಮ ಗುರುತು ಕೂಡ
ಗೌಪ್ಯವಾಗಿಟ್ಟಿದ್ದರು.

ಬ್ರಿಟನ್‌ನ ಯಾರ್ಕ್‌ಷೈರ್‌ನಲ್ಲಿ ಪ್ರಕರಣ ನಡೆದಿದ್ದು, 3 ವರ್ಷಗಳ ಹಿಂದೆ ಎಲ್ಲರ್ಬಿ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗೆ ಅಡುಗೆ ಮನೆಯ ನೆಲದಡಿಯಿಂದ 264 ಚಿನ್ನದ ನಾಣ್ಯಗಳು ಸಿಕ್ಕಿದ್ದವು. ಈ ನಾಣ್ಯಗಳು ರಾಜ ಜೇಮ್ಸ್ I ರ ಆಳ್ವಿಕೆಗೆ ಸೇರಿವೆ. ದಂಪತಿ ಇತ್ತೀಚೆಗೆ ಹರಾಜಿನಲ್ಲಿ ಈ ನಾಣ್ಯಗಳನ್ನು £ 755,000 (ರೂ 6 ಕೋಟಿ 92 ಲಕ್ಷ) ಗೆ ಮಾರಾಟ ಮಾಡಿದ್ದಾರೆ.

‘ಡೈಲಿ ಮೇಲ್’ ಪ್ರಕಾರ, ಜೋಸೆಫ್ ಫರ್ನ್ಲಿ ಮತ್ತು ಅವರ ಪತ್ನಿ ಸಾರಾ ಮೀಸ್ಟರ್ 18 ನೇ ಶತಮಾನದಲ್ಲಿ ನಿರ್ಮಿಸಲಾದ ಮನೆಯಲ್ಲಿ ವಾಸಿಸುತ್ತಿದ್ದರು. 2019 ರಲ್ಲಿ, ಅವರು ತಮ್ಮ ಅಡುಗೆ ಮನೆ ದುರಸ್ತಿ ಮಾಡುತ್ತಿದ್ದರು. ಆಗ ಅಡುಗೆ ಮನೆಯ ಕಾಂಕ್ರೀಟ್ ನೆಲದಡಿಯಲ್ಲಿ ನೂರಾರು ಚಿನ್ನದ ನಾಣ್ಯಗಳು ಪತ್ತೆಯಾಗಿವೆ, ಅವುಗಳಲ್ಲಿ ಕೆಲವು 400 ವರ್ಷಗಳಷ್ಟು ಹಳೆಯದಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿಂದೆ.

Leave A Reply

Your email address will not be published.