ಈ ಬೀಚ್ ಗಳಲ್ಲಿ ಮದ್ಯ ಸೇವನೆ ಇನ್ನು ಮುಂದೆ ನಿಷಿದ್ಧ | ತಪ್ಪಿದರೆ 50,000/- ದಂಡ!!!

ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಗೋವಾದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋವಾದಲ್ಲಿ (Goa) ಸ್ನೇಹಿತರೊಂದಿಗೆ ಪಾರ್ಟಿ (Party) ಮಾಡಲು ಯೋಜನೆ ಹಾಕಿಕೊಂಡಿದ್ದರೆ, ಈ ಹೊಸ ನಿಯಮಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

ಗೋವಾದಲ್ಲಿ ಪ್ರವಾಸೋದ್ಯಮದ (Tourism) ಇಮೇಜ್ ಅನ್ನು ಹೆಚ್ಚಿಸಲು, ಪ್ರವಾಸಿ ಸ್ಥಳಗಳನ್ನು (Tourist Places) ಸ್ವಚ್ಛವಾಗಿ ಮತ್ತು ಪ್ರವಾಸಿಗರಿಗೆ ಸುರಕ್ಷಿತವಾಗಿಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಗೋವಾ ಬೀಚ್‌ಗಳಲ್ಲಿ ಇನ್ನು ಭಿಕ್ಷೆ, ಮದ್ಯ ಸೇವನೆ ನಿಷಿದ್ಧವಾಗಿದ್ದು, ಈ ನಿಯಮ ಪಾಲಿಸದೆ ಇದ್ದರೆ, 50 ಸಾವಿರದವರೆಗೂ ದಂಡ ವಿಧಿಸಬೇಕಾಗುತ್ತದೆ.

ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ನಿಯಮವನ್ನು ಪಾಲಿಸದೆ ಇದ್ದರೆ, ಅವರ ವಿರುದ್ಧ ಸರ್ಕಾರಿ ಆಜ್ಞೆ ಉಲ್ಲಂಘಿಸಿದ್ದಕ್ಕೆ ಸೆಕ್ಷನ್‌ 188 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ, ಯಾರೇ ಹಣ ಕೇಳುವುದು ಹಾಗೂ ಪ್ರವಾಸಿಗರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ .

ಈ ಅಕ್ಟೋಬರ್ 31 ರಂದು ಗೋವಾ ಸರ್ಕಾರ ಹೊರಡಿಸಿದ ನೋಟಿಸ್ ಪ್ರಕಾರ, ಈಗ ತೆರೆದ ಜಾಗದಲ್ಲಿ ಅಡುಗೆ ಮಾಡುವುದು (Cooking) ಮತ್ತು ಬೀಚ್‌ಗಳಲ್ಲಿ ವಾಹನ ಚಲಾಯಿಸುವುದನ್ನು (Driving) ನಿಷೇಧಿಸಲಾಗಿದೆ. ಗೋವಾ ಪ್ರವಾಸೋದ್ಯಮ ಇಲಾಖೆಯ (Goa Tourism Department) ಹೊಸ ಆದೇಶದ ಪ್ರಕಾರ ‘ಪ್ರವಾಸಿ ಸ್ಥಳಗಳಲ್ಲಿ ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಕಸ ಎಸೆಯುವುದು, ಮದ್ಯ ಸೇವಿಸುವುದು, ಭಿಕ್ಷೆ ಬೇಡುವುದು, ಅಕ್ರಮವಾಗಿ ಸರಕುಗಳ ಮಾರಾಟ, ಪ್ರವಾಸಿ ಸ್ಥಳಗಳಲ್ಲಿ ಪ್ರಚಾರ ನಡೆಸುವುದು, ಕಡಲ ತೀರದಲ್ಲಿ ವಾಹನ ಚಲಾಯಿಸುವುದು ಮೊದಲಾದವುಗಳನ್ನು ‘ಉಪದ್ರವಕಾರಿ’ ಚಟುವಟಿಕೆ ಎಂದು ಪರಿಗಣಿಸಲಾಗಿದೆ.

ಹಾಗಾಗಿ, ಇವುಗಳ ಮೇಲೆ ನಿಷೇಧ ಹೇರಲಾಗಿದೆ. ಪ್ರವಾಸೋದ್ಯಮವನ್ನು ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ, ತನ್ನ ಆದಾಯದ ಮೂಲವಾದ ಪ್ರವಾಸೋದ್ಯಮಕ್ಕೆ ಕುತ್ತು ತರುವ ವಿಷಯಗಳಿಗೆ ಬ್ರೇಕ್ ನೀಡಲು ಗೋವಾಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಬಹಿರಂಗವಾಗಿ ಮದ್ಯಪಾನ (Drinking) ಬೀಚ್‌ಗಳಲ್ಲಿ (Beach) ವಾಹನ ಸಂಚಾರ, ಭಿಕ್ಷೆ ಬೇಡುವುದಕ್ಕೆ (Begging) 5,000 ರೂ. ನಿಂದ 50,000 ರೂ. ವರೆಗೂ ದಂಡ ವಿಧಿಸಲು ನಿರ್ಧರಿಸಿದೆ.

ಇದರ ಜೊತೆಗೆ ಸೇವಾ ಪೂರೈಕೆದಾರರು ಮತ್ತು ಸ್ಥಳೀಯ ವ್ಯವಹಾರಗಳಿಗೂ ಕೂಡ ಹೊಸ ನಿಯಮಗಳನ್ನು ಘೋಷಿಸಲಾಗಿದೆ. ಜಲ ಕ್ರೀಡೆಗಳಿಗೆ ಗುರುತಿಸಲಾದ ವಲಯಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ. .

ಅಲ್ಲದೆ, ಅಧಿಕೃತ ಟಿಕೆಟ್‌ ಕೌಂಟರ್‌ ಹಾಗೂ ವ್ಯಾಪಾರಿಗಳನ್ನು ಹೊರತುಪಡಿಸಿ ಇನ್ನಿತರೆ ವ್ಯಕ್ತಿಗಳು ಜಲಕ್ರೀಡೆಗಾಗಿ ಟಿಕೆಟ್‌ ಮಾರುವುದು ಅಥವಾ ಯಾವುದೇ ವಸ್ತುಗಳನ್ನು ಮಾರುವುದನ್ನೂ ಸಹ ನಿಷೇಧ ಮಾಡಲಾಗಿದೆ. ಪ್ರವಾಸಿಗರು ಮುಕ್ತವಾಗಿ ಸಂಚರಿಸಲು ಅಡ್ಡಿಪಡಿಸುವ ವ್ಯಾಪಾರಿಗಳು ಇಲ್ಲವೇ ಚಲಿಸಬಲ್ಲ ಬಂಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುತ್ತದೆ.

ಮೇಲೆ ತಿಳಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ವ್ಯಕ್ತಿಯೊಬ್ಬನಿಗೆ 5,000 ರೂ.ನಿಂದ 50,000 ರೂ. ವರೆಗೂ ದಂಡ ವಿಧಿಸಲಾಗುತ್ತದೆ. ಹೊಸ ನಿಯಮಗಳನ್ನು ಗಮನಿಸಿ ಅದರಂತೆ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಗೋವಾ ರಾಜ್ಯ ಸರ್ಕಾರ ತಿಳಿಸಿದೆ.

Leave A Reply

Your email address will not be published.