Gujarat Assembly Election: ಗುಜರಾತ್ ವಿಧಾನಸಭೆ ಚುನಾವಣೆ | ಆಯೋಗದಿಂದ ದಿನಾಂಕ ಘೋಷಣೆ!!!

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ದೇಶದ ಬಹುನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಪ್ರಕಟಮಾಡಿದ್ದಾರೆ. ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 1ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನವು ಡಿ.5ರಂದು ನಡೆಯಲಿದೆ. ಡಿ.8ರಂದು ಮತ ಎಣಿಕೆಯು ನಡೆಯಲಿದೆ ಎಂದು ತಿಳಿಸಿದ್ದಾರೆ. ಹಿಮಾಚಲ ಪ್ರದೇಶ ಚುನಾವಣೆಯ ಮತ ಎಣಿಕೆಯೂ ಕೂಡ ಇದೇ ದಿನದಂದು ನಡೆಯಲಿದೆ.

ಕೇವಲ ಒಬ್ಬ ಮತದಾರರಿಗೆ, ಒಂದು ಶಿಪ್ಪಿಂಗ್ ಕಂಟೈನರ್‌ ನಲ್ಲಿ ಮತ್ತು ಜಫ್ರಾಬಾದ್ ಪಟ್ಟಣದ ಸಮೀಪವಿರುವ ಅರಬ್ಬಿ ಸಮುದ್ರದ ದ್ವೀಪದಲ್ಲಿ ಒಂದು ಸೇರಿದಂತೆ ಹಲವಾರು ವಿಶಿಷ್ಟ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಜೀವ್ ಕುಮಾರ್ ಹೇಳಿದರು.

1998 ರಿಂದಲೂ ಬಿಜೆಪಿಯು ಗುಜರಾತ್ ನಲ್ಲಿ ತನ್ನದೇ ಅಧಿಕಾರವನ್ನು ಚಲಾಯಿಸುತ್ತಿದೆ. 2017ರ ಚುನಾವನೆಯಲ್ಲಿ, 182 ಸ್ಥಾನಗಳಲ್ಲಿ ಬಿಜೆಪಿಯು 99 ಕ್ಷೇತ್ರ, ಕಾಂಗ್ರೆಸ್ ಪಕ್ಷವು 77 ಮತ್ತು ಇತರರು ಆರು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು.

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ಹಿರಿಯ ನಾಯಕರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಧಾನಿಯವರ ತವರು ರಾಜ್ಯವಾದ ಗುಜರಾತ್ ಚುನಾವಣೆ ಭಾರೀ ಮಹತ್ವ ಪಡೆದಿದೆ. ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದೂ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೂ ಎದುರಾಳಿಯಾಗಿ ಸ್ಪರ್ಧೆ ನೀಡಲಿದೆ.

Leave A Reply

Your email address will not be published.