ಮತ್ಸ್ಯಾಶ್ರಯ ಯೋಜನೆ: 5 ಸಾವಿರ ಮನೆ ಮಂಜೂರು ಸಾಧ್ಯತೆ

ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುವ ಯೋಜನೆಯನ್ನು ರಾಜ್ಯ ಸರಕಾರ ಮರು ಪರಿಚಯಿಸಿದ್ದು, ಉಭಯ ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಅಧಿಕ ಮನೆಗಳು ಶೀಘ್ರ ಮಂಜೂರಾಗುವ ಸಾಧ್ಯತೆ ದಟ್ಟವಾಗಿದೆ.

ರಾಜೀವ್ ಗಾಂಧಿ ನಿಗಮದಿಂದ ಈ ಯೋಜನೆಯಡಿ ಮನೆ ಹಂಚಿಕೆ ಮಾಡಲು ಸಿಆರ್ಝಡ್ ಸಹಿತ ವಿವಿಧ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಈ ಹಿಂದಿನ ಪದ್ಧತಿಯಂತೆ ಮೀನುಗಾರಿಕೆ ಇಲಾಖೆಯ ನಿರ್ದಿಷ್ಟ ನಿಗಮದ ಮೂಲಕ ಮನೆ ಮಂಜೂರು ಮಾಡಲು ಅವಕಾಶ ನೀಡುವ ಕುರಿತಾದ ಪ್ರಸ್ತಾವನೆಯನ್ನು ಇಲಾಖೆಯಿಂದ ಸರಕಾರಕ್ಕೆ ಮನವಿ ಸಕ್ಕಿಕೆಯಾಗಿದ್ದು, ಇದರ ಜೊತೆಗೆ ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೂ ತರಲಾಗಿದೆ.

2018-19ರಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಹಂಚಿಕೆ ಮಾಡಿದ ಮನೆಗಳಿಗೆ ಈವರೆಗೆ ಪೂರ್ಣ ಪ್ರಮಾಣದಲ್ಲಿ ಹಂಚಿಕೆಯಾಗಲೂ ತಾಂತ್ರಿಕ ದೋಷ ಹಾಗೂ ಕೋರೋನ ಮಹಮಾರಿಯ ಕಾರಣದಿಂದ ಫಲಾನುಭವಿಗಳಿಗೆ ಇದರ ಪ್ರಯೋಜನ ತಲುಪಿಲ್ಲ.

2018-19ರ ಅನಂತರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದ್ದು, ಹಾಗಾಗಿ, ಯಾವುದೇ ಮನೆ ಹಂಚಿಕೆಯಾಗಿಲ್ಲ. ಇದೀಗ, ಪ್ರಸಕ್ತ ಸಾಲಿನ ಬಜೆಟ್ನ ಘೋಷಣೆಯಂತೆ ಮತ್ಸ್ಯಾಶ್ರಯ ಯೋಜನೆ ಆರಂಭವಾಗಲಿದೆ.

ಈ ಮೊದಲು ಪ್ರತೀ ಮನೆಗೆ 1.20 ಲಕ್ಷ ರೂ.ಗಳನ್ನು ಯೋಜನೆಯಡಿ ನೀಡಲಾಗುತ್ತಿತ್ತು. ಆದರೆ, ಅದು ತೀರಾ ಕಡಿಮೆಯಾಗಿರುವುದರಿಂದ ಕನಿಷ್ಠ 3ರಿಂದ 5 ಲಕ್ಷ ರೂ.ಗೆ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ.

ಆದರೆ ಸರಕಾರ ಒಪ್ಪಿಗೆ ನೀಡುವುದು ಅವಮಾನವೆಂದು ಹೇಳಲಾಗುತ್ತಿದೆ. ಪ್ರತಿ ಮನೆಗೆ ಕನಿಷ್ಠ 3 ಲಕ್ಷ ರೂ. ನಿಗದಿ ಮಾಡಿದಲ್ಲಿ, ಹಂಚಿಕೆಯಾಗುವ ಮನೆಯ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಹೆಚ್ಚಿನ ಮನೆ ಹಂಚಿಕೆ ಮಾಡುವ ಉದ್ದೇಶದಿಂದ ಅನುದಾನ ಹೆಚ್ಚಳ ಅಸಾಧ್ಯ ಎಂದು ಅಂದಾಜಿಸಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮದಿಂದ ಮತ್ಸ್ಯಾಶ್ರಯ ಮನೆ ಹಂಚಿಕೆಯಾದರೆ ಫಲಾನುಭವಿಗಳಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಮನೆ ನಿರ್ಮಾಣ ಸಾಧ್ಯವಾಗದಿರಬಹುದು. ಅನುದಾನ ವಿಳಂಬವಾಗುವ ಜತೆಗೆ ತಾಂತ್ರಿಕ ಸಮಸ್ಯೆಗಳು ಕೂಡ ಹೆಚ್ಚಾಗಿ ಕಾಣಿಸಿಕೊಂಡಿದೆ.

ಮನೆ ನಿರ್ಮಾಣಕ್ಕೆ ಮೊದಲು ನಿವೇಶನದ ಜಿಪಿಎಸ್ ಮಾಡುವುದು, ಅನಂತರ ಮನೆಯ ಫೌಂಡೇಶನ್ ಜಿಪಿಎಸ್ ಸಹಿತ ಎಲ್ಲ ಹಂತವನ್ನು ಅಪ್ಲೋಡ್ ಮಾಡಬೇಕಾಗಿದ್ದು, ಇದರಿಂದ ಒಟ್ಟಾರೆ ಪ್ರಕ್ರಿಯೆ ವಿಳಂಬವಾಗುವ ಜತೆಗೆ ಅನುದಾನವೂ ಕೂಡ ಶೀಘ್ರ ವಾಗಿ ಜರುಗುವುದಿಲ್ಲ.

ಇದರ ಜೊತೆಗೆ ಈ ಹಿಂದಿನ ವ್ಯವಸ್ಥೆಯನ್ನು ಮೀನುಗಾರಿಕೆ ಇಲಾಖೆಯ ಅಧೀನದ ನಿಗಮದಿಂದ ಸ್ಥಳೀಯ ಶಾಸಕರ ಮೂಲಕವಾಗಿ ಮನೆ ಹಂಚಿಕೆ ಮಾಡುವ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆಯೂ ಕೂಡ ಕೇಳಿ ಬರುತ್ತಿದೆ.

ಸಿಆರ್ಝಡ್ ನಿಯಮ ಇತ್ಯಾದಿ ಕಾರಣಗಳಿಂದ ಮತ್ಸ್ಯಾಶ್ರಯದಡಿ ಮನೆ ನಿರ್ಮಾಣ ಕರಾವಳಿ ಭಾಗದಲ್ಲಿ ತೊಂದರೆಯಾಗುತ್ತಿದ್ದು ಕಷ್ಟವಾಗುತ್ತಿದೆ. ಹೀಗಾಗಿ, ಮೀನುಗಾರಿಕೆ ಇಲಾಖೆಯ ನಿರ್ದಿಷ್ಟ ನಿಗಮದ ಮೂಲಕವೇ ಮನೆ ಹಂಚಿಕೆಗೆ ಅವಕಾಶ ನೀಡಬೇಕು ಮತ್ತು ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಎಸ್. ಅಂಗಾರ ರವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಶೀಘ್ರವೇ ಮನೆ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.