ಕರ್ನಾಟಕದ ರಾಜ್ಯ ಪಕ್ಷಿ ಯಾವುದೆಂದು ಗೊತ್ತೇ ನಿಮಗೆ? ಇದರ ಸಂಪೂರ್ಣ ವಿವರ ಇಲ್ಲಿದೆ!!!

ನಮ್ಮ ದೇಶ ತನ್ನದೇ ಪರಂಪರೆ ಸಂಸ್ಕೃತಿ,ಹಾಗೂ ಪ್ರಾಕೃತಿಕ ಸಂಪತ್ತುಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಇದರ ಜೊತೆಗೆ ವಿಭಿನ್ನ ಜೀವರಾಶಿಗಳ ಆಗರವಾಗಿದ್ದು, ವೈಶಿಷ್ಟ್ಯತೆಯ ಸಂಗಮವಾಗಿದೆ.

ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಕರ್ನಾಟಕವು ಕೂಡ ತನ್ನದೇ ಆದ ಲಾಂಛನ ಹೊಂದಿರುವುದು ತಿಳಿದಿರುವ ವಿಚಾರವೇ!!.

‘ದಾಸ ಮಗರೆ’ ಪಕ್ಷಿಯು ಕರ್ನಾಟಕದ ರಾಜ್ಯ ಪಕ್ಷಿಯಾಗಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ ‘ಇಂಡಿಯನ್ ರೋಲರ್’ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಹಿಂದಿಯಲ್ಲಿ ‘ನೀಲಕಂಠ’ ಎನ್ನಲಾಗುತ್ತದೆ.

ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಿಗೆ ರಾಜ್ಯಪಕ್ಷಿಯಾದ ಕೀರ್ತಿ ಕೂಡಾ ನೀಲಕಂಠ ಪಕ್ಷಿಗೆ ಸಲ್ಲುವುದಲದೆ, ಈ ಸುಂದರ ಪಕ್ಷಿಯು ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳಿಗೆ ರಾಜ್ಯ ಪಕ್ಷಿಯಾಗಿದೆ.

ಈ ಪಕ್ಷಿಯು ಗಾತ್ರದಲ್ಲಿ ಹೆಚ್ಚು- ಕಮ್ಮಿ ಪಾರಿವಾಳವನ್ನು ಹೋಲುವುದು. ಅಲ್ಲದೆ, ನೀಲಿ ಬಣ್ಣವನ್ನು ಹೆಚ್ಚಾಗಿ ಹೊಂದಿದ್ದು, ನೀಲಿಯ ಜೊತೆಗೆ ನೇರಳೆ, ಬೂದು, ಕೆಂಪು, ಕಂದು, ಬಿಳಿ ಬಣ್ಣಗಳ ಮಿಳಿತವಾಗಿದೆ.

ನೆತ್ತಿಯ ಬಣ್ಣ ನೀಲಿ, ಕೊಕ್ಕು ಕಂದು – ಕಪ್ಪು ಬಣ್ಣವಾಗಿದೆ. ಕತ್ತಿನ ಕಪ್ಪು ಬಿಳಿ ಗಡ್ಡದಂತೆ ಕಂಡರೆ, ಎದೆಯ ಮೇಲ್ಭಾಗದಲ್ಲಿ ಕಂದು ಬಣ್ಣವಿದ್ದರೆ ಕೆಳಭಾಗದಲ್ಲಿ ನೀಲಿ ಬಣ್ಣವನ್ನು ಹೊಂದಿರುತ್ತದೆ.

Leave A Reply

Your email address will not be published.