Necrotizing Fasciitis: ಮಾಂಸ ತಿನ್ನುವ ಬ್ಯಾಕ್ಟೀರಿಯಾ | ಏನಿದು ? ಇದೆಷ್ಟು ಅಪಾಯಕಾರಿ?

ಈ ಮಾಂಸ ತಿನ್ನುವ ಬ್ಯಾಕ್ಟೀರಿಯಾವನ್ನು ವೈದ್ಯಕೀಯ ಪರಿಭಾಷೆಯಲ್ಲಿ ನೈಕ್ರೊಟೈಸಿಂಗ್ ಫ್ಯಾಸಿಟಿಸ್ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾವು ನಮ್ಮ ಚರ್ಮ ಮತ್ತು ಅದರ ಕೆಳಗಿನ ಅಂಗಾಂಶಗಳ ಅಪರೂಪದ ಸೋಂಕಿಗೆ ಕಾರಣವಾಗುತ್ತದೆ. ಈ ರೋಗ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ.

ಮಾಂಸ ತಿನ್ನುವ ನೆಕ್ರೊ ಟೈಸಿಂಗ್ ಫ್ಯಾಸಿಟಿಸ್ ಬ್ಯಾಕ್ಟೀರಿಯಾವು ವ್ಯಕ್ತಿಯೊಬ್ಬನ ಬಲಿ ಪಡೆದ ಘಟನೆ ವರದಿಯಾಗಿದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕಿನಿಂದಾಗಿ ಕೋಲ್ಕತ್ತಾದ 44 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಕೆಲವು ದಿನಗಳ ಹಿಂದೆ ರೈಲಿನಿಂದ ಬಿದ್ದಿದ್ದಾರೆ. ಕಬ್ಬಿಣದ ರಾಡ್ ಸೊಂಟದ ಕೆಳಭಾಗಕ್ಕೆ ಬಡಿದು ಗಾಯಗೊಂಡಿದ್ದಾರೆ. ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿದ್ದು, ಒಂದು ವಾರ ಅವರಿಗೆ ಸ್ಥಳೀಯ ನರ್ಸಿಂಗ್​ಹೋಮ್​ನಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಳಿಕ ಅವರನ್ನು ಅಕ್ಟೋಬರ್ 23 ರಂದು RGKMCH ಟ್ರಾಮಾ ಸೆಂಟರ್​ಗೆ ದಾಖಲಿಸಲಾಗಿದ್ದು, ರೋಗಿಯು ಉಸಿರಾಟ ತೊಂದರೆ ಅನುಭವಿಸುತ್ತಿದ್ದರಿಂದ ತಕ್ಷಣ ಅವರನ್ನು ಶಸ್ತ್ರಚಿಕಿತ್ಸೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಮಾಂಸ ತಿನ್ನುವ ಬ್ಯಾಕ್ಟೀರಿಯಾ ಮೊದಲು ರಕ್ತನಾಳಗಳ ಮೇಲೆ ದಾಳಿ ಮಾಡುವುದರಿಂದ ಥ್ರಂಬೋಸಿಸ್ ಉಂಟಾಗುತ್ತದೆ. ಇದು ಅಂಗಾಂಶಗಳು, ಮತ್ತು ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆಯುಂಟು ಮಾಡುವುದಲ್ಲದೆ, ಅಂತಿಮವಾಗಿ ರಕ್ತ ಪೂರೈಕೆಯನ್ನು ಕಡಿತಗೊಳಿಸುತ್ತದೆ .

ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೆಂಟಿಲೇಷನ್​ನಲ್ಲಿಟ್ಟು ತಡಮಾಡದೇ ಚಿಕಿತ್ಸೆಯನ್ನೂ ಪ್ರಾರಂಭಿಸಲಾಗಿದೆ. ಈ ವೇಳೆ ಅವರ ದೇಹದಲ್ಲಿ ನೈಕ್ರೊಟೈಸಿಂಗ್ ಫ್ಯಾಸಿಟಿಸ್ ಇರುವಿಕೆ ದೃಢವಾಗಿದೆ. ಸೋಂಕು ರೋಗಿಯ ಕೆಳಭಾಗದ ಅಂಗ ಮತ್ತು ಜನನಾಂಗದ ಪ್ರದೇಶವನ್ನು ತಿಂದು ಹಾಕಿತ್ತು.

ಇದರ ಜೊತೆಗೆ ಈ ಬ್ಯಾಕ್ಟೀರಿಯ ದಿಂದ ಸೋಂಕು ಉಂಟಾಗಿ ಉರಿಯೂತವನ್ನು ಪ್ರಚೋದಿಸುತ್ತದೆ. ಹಾಗೂ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವ ರಕ್ತವನ್ನು ಪೂರೈಸುವ ಕ್ಯಾಪಿಲ್ಲರಿಗಳನ್ನು ಸಂಕುಚಿತಗೊಳಿಸುತ್ತದೆ.

ಇದರಿಂದ ಜೀವಕೋಶದ ಸಾವು, ಅಂಗಾಂಶ ಹಾನಿ ಅಥವಾ ನೈಕ್ರೋಸಿಸ್​ಗೆ ಕಾರಣವಾಗುತ್ತದೆ. ಇದು ಸ್ನಾಯುಗಳನ್ನೂ ಒಳಗೊಳ್ಳಬಹುದು

ಈ ಅಪರೂಪದ ಸೋಂಕು ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಆಗಿದೆ. ಗಮನಾರ್ಹವಾಗಿ, ನೆಕ್ರೋಟೈಸಿಂಗ್ ಫ್ಯಾಸಿಟಿಸ್ ದೇಹದಲ್ಲಿ ವೇಗವಾಗಿ ಹರಡುವ ಅಪರೂಪದ ಸೋಂಕಾಗಿದ್ದು, ಸರಿಯಾದ ಮತ್ತು ಆರಂಭಿಕ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೆ ಕಾರಣವಾಗಬಹುದು.

ನೆಕ್ರೋಟೈಸಿಂಗ್ ಫ್ಯಾಸಿಟಿಸ್ ರಕ್ತನಾಳಗಳ ಮೇಲೆ ದಾಳಿ ಮಾಡುತ್ತದೆ. ಮಾಂಸ ತಿನ್ನುವ ಬ್ಯಾಕ್ಟೀರಿಯಾಗಳು ತುಂಬಾ ತೀವ್ರವಾಗಿದ್ದು ಅವು ದೇಹಕ್ಕೆ ರಕ್ತ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತವೆ.

ಮಾದಕವಸ್ತು ಬಳಕೆದಾರರು ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ತ್ವರಿತವಾಗಿ ಸೋಂಕಿಗೆ ಒಳಗಾಗುವ ಸಾದ್ಯತೆ ಇದೆ. ಕೆಲ ವರದಿಗಳ ಅನ್ವಯ, ಈ ಅಪರೂಪದ ಕಾಯಿಲೆ US ನಲ್ಲಿ ಪ್ರತಿ ವರ್ಷ ಮತ್ತು ವಾರ್ಷಿಕವಾಗಿ 600 ರಿಂದ 700 ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ .

ಈ ಪೈಕಿ ಶೇ.25ರಿಂದ 30ರಷ್ಟು ಪ್ರಕರಣಗಳಲ್ಲಿ ರೋಗಿಯು ಸಾಯುತ್ತಾನೆ ಎಂದು ಅಂದಾಜಿಸಲಾಗಿದೆ. ಈ ಸೋಂಕು ಮಕ್ಕಳಲ್ಲಿ ಅಪರೂಪವಾಗಿ ಸಂಭವಿಸುತ್ತದೆ ಎಂದು ಸಹ ಬಹಿರಂಗವಾಗಿದೆ.

Leave A Reply

Your email address will not be published.