ಪವಿತ್ರಾ ಲೋಕೇಶ್​ ಮೇಲೆ ಕೈ ಹಾಕಿದ ನರೇಶ್ ! ರೊಮ್ಯಾಂಟಿಕ್ ಆಗಿ ಜೋಡಿಯ ವೀಡಿಯೊ ವೈರಲ್ !!

ರೊಮ್ಯಾಂಟಿಕ್ ಆಗಿ ಜೋಡಿ ಮತ್ತೆ ದರ್ಶನ ಭಾಗ್ಯ ಕರುಣಿಸಿದೆ. ಸುದ್ದಿಗಳಿಗಾಗಿ ಕಾಯುತ್ತಿರುವ ಪತ್ರಿಕಾ ವೀರರಿಗೆ ಮತ್ತು ಗಾಸಿಪ್ ಗಾಗಿ ತಹತಹಿಸುತ್ತಿರುವ ಮನಸ್ಸುಗಳಿಗೆ ಈಗ ಎಲ್ಲಿಲ್ಲದ ಉತ್ಸಾಹ ಬಂದಿದೆ. ಅಂಥದ್ದೇನಾಯಿತು ಅಂತೀರಾ, ಇಲ್ಲಿದೆ ನೋಡಿ ಕೈ ಇಟ್ಟ ಸ್ಟೋರಿ !!

ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಪ್ರಕರಣ ಬಿಸಿ ಬಿಸಿ ಚರ್ಚೆಯಾಗುತ್ತಲೇ ಇದೆ. ಅದಿನ್ನೂ ಆರುವ ಸಂಭ ಸದ್ಯದಲ್ಲಿ ಕಾಣುತ್ತಿಲ್ಲ. ಜನರು ಈ ಜನಪ್ರಿಯ ಜೋಡಿಯ ಮೇಲೆ ಒಂದು ಕಣ್ಣು ಮಡಗಿದ್ದಾರೆ. ಲೋಕೇಶ್ ಹಾಗೂ ನರೇಶ್ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದಾರೆ. ಮದುವೆ ಕೂಡ ಆಗಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಕೆಲ ಹಿಂದೆ ಇಬ್ಬರು ಒಂದೇ ರೂಮ್​ನಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಮದುವೆ ಆಗದೆ ಇದ್ದರೆನಂತೆ, ಹೋಟೆಲ್ ನಲ್ಲಿ ಒಂದೇ ರೂಮಿನಲ್ಲಿ ಇದ್ದು ಬಂದ ಮೇಲೆ ಜನರು ಅಲ್ಲೇನು ನಡೆದಿರಬಹುದು ಎಂಬ ಕಲ್ಪನೆ ಮಾಡಿಕೊಂಡು ನಮ್ಮ ಕುತೂಹಲವನ್ನು ಇನ್ನಷ್ಟು ಅಧಿಕ ಮಾಡಿಕೊಂಡಿದ್ದರು.

ಇದೀಗ ಈ ಜೋಡಿಯ ಹೊಸ ವಿಡಿಯೋ ಒಂದು ಎಲ್ಲೆಡೆ ಸದ್ದು ಮಾಡುತ್ತಿದ್ದು, ಪವಿತ್ರಾ ಲೋಕೇಶ್​ ಮೇಲೆ ನರೇಶ್ ಕೈ ಹಾಕಿರುವುದು ಭಾರೀ ವೈರಲ್​ ಆಗುತ್ತಿದೆ. ಹೌದು ಪವಿತ್ರ ಲೋಕೇಶ್ ಮೇಲೆ ನರೇಶ್ ಕೈ ಹಾಕಿದ್ದಾರೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನಲ್ಲಿ ಒಂದೇ ಹೋಟೆಲ್ ಕೊಠಡಿಯಲ್ಲಿ  ಇದ್ದ ವೇಳೆ, ರೆಡ್‌ ಹ್ಯಾಂಡ್‌ ಆಗಿ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಎದುರು ಸಿಕ್ಕಿ ಬಿದ್ದಿದ್ದರು. ಆಗ  ನಾವಿಬ್ಬರು ಒಳ್ಳೆ ಸ್ನೇಹಿತರು ಅಷ್ಟೇ ಎಂದು ಇಬ್ಬರು ಹೇಳಿದ್ದರು. ಇದೀಗ ಈ ಇಬ್ಬರು ಕೂಡಾ ಮತ್ತೆ ಒಟ್ಟಿಗೆ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾರೆ.

ನರೇಶ್ ಹಾಗೂ ಪವಿತ್ರಾ ತೆಲುಗಿನ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೈಸೂರಿನ ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾ ನಂತರ ಇಬ್ಬರು ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಪವಿತ್ರಾ ಭುಜದ ಮೇಲೆ ನರೇಶ್ ಕೈ ಹಾಕಿರುವ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾರೆ.

ತೆಲುಗಿನ ಹಾಸ್ಯ ನಟ ಆಲಿ ನಿರ್ಮಿಸಿ ನಟಿಸಿರುವ ಸಿನಿಮಾ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಮತ್ತೆ ಗಂಡ- ಹೆಂಡತಿ ಪಾತ್ರಗಳಲ್ಲಿ ನಟಿಸಿದ್ದಾರೆ. ‘ ಎಲ್ಲರೂ ಚೆನ್ನಾಗಿರಲಿ, ಅದರಲ್ಲಿ ನಾನೂ ಸೇರಿರಲಿ ‘ ಎನ್ನುವುದು ಈ ಶೀರ್ಷಿಕೆಯ ಅರ್ಥ. ಈ ಚಿತ್ರದ ಅರ್ಥದಂತೆ ಗಂಡ ಹೆಂಡತಿ ಪಾತ್ರದ ಪಾತ್ರಧಾರಿಗಳಾದ ನರೇಶ್ ಮತ್ತು ಪವಿತ್ರ ಲೋಕೇಶ್ ಜೋಡಿ, ‘ ಚೆನ್ನಾಗೇ ‘ ಇದ್ದಾರೆ.

ಅವರ ಈ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆ ವಿಡಿಯೋ ಮೂಲಕ ಖುಷಿ ಹಂಚಿಕೊಂಡ ಈ ಜೋಡಿ, ರಾತ್ರಿಯಿಂದ ನನಗೆ ಸಾಕಷ್ಟು ಮೆಸೇಜ್ ಗಳು , ಫೋನ್ ಕರೆಗಳು ಬರ್ತಿದೆ. ಎಲ್ಲರೂ ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಒಳ್ಳೆಯ ಸಿನಿಮಾ ತೆಗೆದರೆ, ಕಂಟೆಂಟ್ ಬೇಸ್ಡ್ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗುತ್ತದೆ. ಇಷ್ಟು ಒಳ್ಳೆಯ ರಿವ್ಯೂಗಳು ಇತ್ತೀಚಿನ ದಿನಗಳಲ್ಲಿ ಬಂದಿರಲಿಲ್ಲ. ಸಿನಿಮಾ ನೋಡಿ ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್ ಎಂದು ನರೇಶ್, ಪವಿತ್ರ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಹೆಗಲ ಮೇಲೆ ಕೈ ಮಡಗಿ ಮಾತಾಡಿದ್ದಾರೆ.

Leave A Reply

Your email address will not be published.