ATM ನಿಂದ ಹಣ ವಿತ್ ಡ್ರಾ ಮಾಡೋರಿಗೆ ಶಾಕ್ ನೀಡಿದ ಈ ಬ್ಯಾಂಕ್ ಗಳು !!!
ಕಾಲ ಬದಲಾದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳಾಗಿ ಜನರ ಜೀವನ ಶೈಲಿಗೆ ತಕ್ಕಂತೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ .ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.
ಹಣ ರವಾನೆ, ಪಡೆಯಲು ಹಿಂದಿನಂತೆ ಸರತಿ ಸಾಲಿನಲ್ಲಿ ನಿಂತು ಕಾದು ಟೋಕನ್ ಪಡೆದು ಹಣ ಪಡೆಯಬೇಕಾದ ಸಂಕಷ್ಟ ಈಗಿಲ್ಲ. ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ ಎಟಿಎಂ ಕಾರ್ಡ್ ಮೂಲಕ ಬ್ಯಾಂಕ್ನ ದಿನನಿತ್ಯದ ವಹಿವಾಟು ಮಿತಿಯಲ್ಲಿ ಬೇಕಾದಷ್ಟು ಹಣ ತೆಗೆಯಬಹುದು.
ಆದರೆ, ಅನೇಕ ಬ್ಯಾಂಕುಗಳು ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಹೊಸ ದರಗಳನ್ನ ವಿಧಿಸಿವೆ. ಈಗ ಹಣ ವಿತ್ಡ್ರಾ ಮಾಡುವುದು ಮೊದಲಿಗಿಂತ ಹೆಚ್ಚು ದುಬಾರಿಯಾಗಲಿದೆ.
ಹೌದು, ಗ್ರಾಹಕರು ಪ್ರತಿ ತಿಂಗಳು ಉಚಿತ ವಹಿವಾಟು ಮಿತಿಯ ಬಳಿಕ ಎಟಿಎಂ ಸೇವೆಗಳನ್ನು ಬಳಸಲು ಖಾತೆಗಳ ಪ್ರಕಾರ, ದರಗಳನ್ನು ನಿಗದಿಪಡಿಸಲಾಗಿದ್ದು, ಹಾಗಾಗಿ, ಇನ್ನೂ ಮುಂದೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಎಟಿಎಂಗಳಿಗೆ ಪ್ರತಿ ಪ್ರದೇಶದಲ್ಲಿ ಐದು ಉಚಿತ ವಿತ್ಡ್ರಾ ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್ನಂತಹ ಪ್ರಮುಖ ನಗರಗಳಲ್ಲಿನ ಇತರ ಬ್ಯಾಂಕ್ ಎಟಿಎಂಗಳಿಗೆ, ಬ್ಯಾಂಕ್ ಗಳಲ್ಲಿ ಹಣ ಪಡೆಯಲು ಕೇವಲ ಮೂರು ಬಾರಿ ಮಾತ್ರ ಅವಕಾಶ ದೊರೆಯಲಿದೆ.
ಈ ಮಿತಿಯನ್ನು ಮೀರಿದರೆ ಎಸ್ಬಿಐ ಎಟಿಎಂಗಳಿಂದ ಹಿಂಪಡೆಯಲು ಎಸ್ಬಿಐ 10 ರೂಪಾಯಿ ದಂಡ ವಿಧಿಸುತ್ತದೆ. ಇದರ ಜೊತೆಗೆ ಎಸ್ಬಿಐ ಅಲ್ಲದ ಎಟಿಎಂಗಳಿಂದ ಹಿಂಪಡೆಯಲು 20 ರೂಪಾಯಿ ಪಾವತಿಸಬೇಕಾಗುತ್ತದೆ.
ಎಸ್ಬಿಐ ಎಟಿಎಂಗಳು ಪೂರ್ವನಿರ್ಧರಿತ ಮಿತಿಯನ್ನು ಮೀರಿದ ಹಣಕಾಸುಯೇತರ ವ್ಯವಹಾರಗಳಿಗೆ 5 ರೂಪಾಯಿ ಮತ್ತು ಇತರ ಬ್ಯಾಂಕ್ ಎಟಿಎಂಗಳಿಂದ 8 ರೂಪಾಯಿ ವಿಧಿಸಲಾಗುತ್ತದೆ.
ಆಕ್ಸಿಸ್ ಬ್ಯಾಂಕ್ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳು ಲಭ್ಯವಿದ್ದರೆ, ಮೂರು ಆಕ್ಸಿಸ್ ಬ್ಯಾಂಕ್ (ಮೆಟ್ರೋ ಸ್ಥಳಗಳಲ್ಲಿ) ಮಾಲೀಕತ್ವ ಹೊಂದಿರದ ಎಟಿಎಂಗಳಲ್ಲಿ ಲಭ್ಯವಾಗಲಿವೆ. ಈ ಮಿತಿಯ ಬಳಿಕ ಆಕ್ಸಿಸ್ ಮತ್ತು ನಾನ್-ಆಕ್ಸಿಸ್ ಎಟಿಎಂಗಳು ನಗದು ಹಿಂಪಡೆಯುವಿಕೆಗೆ 21 ರೂ ಮತ್ತು ಹಣಕಾಸುಯೇತರ ವಹಿವಾಟಿಗೆ 10 ರೂಪಾಯಿ ವಿಧಿಸಲಾಗುತ್ತದೆ.
ಐಸಿಐಸಿಐ ಬ್ಯಾಂಕ್ನ ಆರು ಮೆಟ್ರೋ ಪ್ರದೇಶಗಳಲ್ಲಿ 5 ಮತ್ತು 3 ಮಾನದಂಡಗಳನ್ನ ಅನುಸರಿಸಲಾಗುತ್ತದೆ. ಇದರ ಅಡಿಯಲ್ಲಿ ತನ್ನ ಎಟಿಎಂಗಳಿಂದ 5 ಉಚಿತ ವಿತ್ ಡ್ರಾ ಮಾಡಬಹುದಾಗಿದೆ. ಹಾಗೆಯೇ, ಇತರ ಬ್ಯಾಂಕುಗಳ ಎಟಿಎಂಗಳಿಂದ 3 ವಿತ್ ಡ್ರಾ ಮಾಡಲು ಅನುಮತಿಸಲಾಗಿದೆ.
ಇದನ್ನು ಹೊರತುಪಡಿಸಿ, ಬ್ಯಾಂಕ್ ಹಣಕಾಸು ವಹಿವಾಟುಗಳಿಗೆ 20 ರೂಪಾಯಿ ಮತ್ತು ಹಣಕಾಸುಯೇತರ ವಹಿವಾಟಿಗೆ 8.50 ರೂಪಾಯಿ ವಿಧಿಸಲಾಗುತ್ತದೆ. ಈ ಶುಲ್ಕಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳು ಮತ್ತು ಇತರ ಬ್ಯಾಂಕುಗಳ ಎಟಿಎಂಗಳೆರಡಕ್ಕೂ ಅನ್ವಯವಾಗುತ್ತವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಹಿವಾಟುಗಳನ್ನು ಮಾಡಬಹುದಾಗಿದ್ದು, ಮತ್ತು ಮೆಟ್ರೋ ನಗರಗಳ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಮಾಡಬಹುದಾಗಿದೆ.
ಇದರ ಬಳಿಕ ಪಿಎನ್ಬಿ ಮಾಲೀಕತ್ವದ ಎಟಿಎಂನಲ್ಲಿ ಯಾವುದೇ ವಹಿವಾಟಿಗೆ ಬ್ಯಾಂಕ್ಗೆ 10 ರೂಪಾಯಿ ಹೆಚ್ಚುವರಿ ಹಣ ವಿಧಿಸಲಾಗುತ್ತದೆ.ಅದೇ ರೀತಿ, ಇತರ ಬ್ಯಾಂಕಿನ ಎಟಿಎಂಗಳಲ್ಲಿ, ಬ್ಯಾಂಕ್ ಹಣಕಾಸು ವ್ಯವಹಾರಗಳಿಗೆ 20 ರೂಪಾಯಿ ಮತ್ತು ಹಣಕಾಸುಯೇತರ ವಹಿವಾಟಿಗೆ 9 ರೂಪಾಯಿ ವಿಧಿಸಲಾಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಿಂದ ತಿಂಗಳಿಗೆ ಐದು ವಹಿವಾಟುಗಳು ಉಚಿತವಾಗಿದ್ದು, ನಗರ ಪ್ರದೇಶಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ, ಐದು ಬಾರಿ ವಹಿವಾಟು ನಡೆಸಬಹುದು.
ಈ ಮಿತಿಯ ಬಳಿಕ ನಗದು ಹಿಂಪಡೆಯುವಿಕೆಯ ಮೇಲೆ 21 ರೂಪಾಯಿ ಮತ್ತು ಯಾವುದೇ ಸಂಬಂಧಿತ ತೆರಿಗೆಯನ್ನು ವಿಧಿಸಲಾಗುತ್ತದೆ. ಹಣಕಾಸುಯೇತರ ವಹಿವಾಟುಗಳ ಮೇಲೆ 8.50 ರೂಪಾಯಿ ವಿಧಿಸಬೇಕಾಗುತ್ತದೆ.
ಬೇರೆ ಬೇರೆ ಬ್ಯಾಂಕ್ ಗಳು ವಿಧಿಸುವ ಎಟಿಯಂ ಶುಲ್ಕ ಭಿನ್ನವಾಗಿದ್ದು, ಹಾಗಾಗಿ, ಗ್ರಾಹಕರು ಹಣ ಪಡೆಯುವಾಗ ಅದರ ದಂಡದ ಅರಿವಿದ್ದರೆ ಒಳಿತು.