ವ್ಯಕ್ತಿಯ ಸಾವಿನ ಬಳಿಕ ಸೋಶಿಯಲ್ ಮೀಡಿಯಾದಲ್ಲಿರುವ ಖಾತೆ ಏನಾಗುತ್ತದೆ??|ಇದರ ಕುತೂಹಲಕಾರಿ ಡೀಟೇಲ್ಸ್ ಇಲ್ಲಿದೆ|

ನಾವು ಜೀವಂತ ಇರುವಾಗ ಅನೇಕ ವಿಚಾರಗಳ ಬಗ್ಗೆ ಚಿಂತನೆ ನಡೆಸುವುದು ಸಾಮಾನ್ಯ. ಹಾಗೆಯೆ ಸಾವಿನ ಬಳಿಕ ಏನಾಗಬಹುದು ಎಂಬ ಕುತೂಹಲ ಹೆಚ್ಚಿನವರಿಗೆ ಕಾಡಿರಬಹುದು.

ಮನೆಯವರ ಬಗ್ಗೆ ಉಳಿದವರು ನಮ್ಮನ್ನು ನೆನಪಿಸಿಕೊಳ್ಳಬಹುದಾ??? ಹೀಗೆ ಹತ್ತಾರು ಪ್ರಶ್ನೆಗಳು ಸುಳಿದಾಡುತ್ತವೆ. ನಮ್ಮ ನೆಚ್ಚಿನ ಪ್ರಾಣಿಗಳೂ ಇಲ್ಲವೇ ಅಚ್ಚುಮೆಚ್ಚು ಆಗಿರುವ ವಸ್ತುಗಳ ಬಗ್ಗೆ ಯೋಚಿಸುವುದು ಸಹಜ.

ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ (Facebook), ಇನ್​​ಸ್ಟಾಗ್ರಾಮ್ (Instagram) ಅಥವಾ ಟ್ವಿಟರ್ ಖಾತೆ ಏನಾಗಬಹುದು ಎಂಬ ಪ್ರಶ್ನೆ ಹಲವರನ್ನು ಕಾಡದಿರದು.

ಮರಣದ ನಂತರ ನಮ್ಮ ಸಾಮಾಜಿಕ ಮಾಧ್ಯಮದಲ್ಲಿರುವ (Social Media) ಖಾತೆಗಳು ಏನಾಗುತ್ತವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು ಎಂದು ಹಲವರು ಚಿಂತಿಸುತ್ತಿರಬಹುದು.

ಮೊಬೈಲ್ ಎಂಬ ಮಾಯಾವಿ ಕಾಲಿಟ್ಟ ಬಳಿಕ ಪ್ರತಿ ಕ್ಷೇತ್ರದಲ್ಲೂ ಸರ್ವಾಂತರ್ಯಾಮಿ ಸಾಧನವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚು ನಡೆಯುತ್ತಿವೆ.

ಹೆಚ್ಚಿನ ಜನರಲ್ಲಿ ಕನಿಷ್ಠ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಯ ಸಾವಿನ ಬಳಿಕ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ?.

ಸತ್ತ ಮೇಲೆ ನಮ್ಮ ಫೇಸ್‌ಬುಕ್ (Facebook), ಇನ್​​ಸ್ಟಾಗ್ರಾಮ್ (Instagram) ಅಥವಾ ಟ್ವಿಟರ್ ಖಾತೆ ಏನಾಗುತ್ತದೆ, ಯಾರಾದರು ನಮ್ಮ ಖಾತೆಯನ್ನು ಹ್ಯಾಕ್ ಮಾಡಿ ಕೆಟ್ಟ ಸಂದೇಶ ಫೋಟೋಗಳನ್ನು ಹಂಚಿಕೊಂಡರೆ ಏನು ಮಾಡೋದು? ಈ ರೀತಿಯ ಅನೇಕ ಪ್ರಶ್ನೆಗಳು ಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

ಸಾಮಾಜಿಕ ಜಾಲತಾಣಗಳು ಅದರದ್ದೇ ಆಗಿರುವ ಕೆಲವೊಂದು ಖಾಸಗಿ ನಿಯಮಗಳನ್ನು ರೂಪಿಸಿರುತ್ತವೆ. ಫೇಸ್‌ಬುಕ್ ನಲ್ಲಿ ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆ ಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಆದರೆ, ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು.

ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.

ಫೇಸ್‌ಬುಕ್ ಬಳಕೆದಾರರು ತಮ್ಮ ಖಾತೆಗಳನ್ನು ಅಳಿಸಲು ಅಥವಾ ಅವರ ಸಾವಿನ ನಂತರ ಅವುಗಳನ್ನು ಸ್ಮರಣಾರ್ಥವಾಗಿ ಪರಿವರ್ತಿಸಲು ಆಯ್ಕೆಯನ್ನು ಹೊಂದಿರುತ್ತಾರೆ.

ಸ್ಮರಣೀಯವಾದ ಫೇಸ್‌ಬುಕ್ ಪುಟವು ಇತರ ಪುಟಗಳಂತೆ ಕಾಣುತ್ತದೆ. ಆದರೆ, ವ್ಯಕ್ತಿಯ ಹೆಸರಿನ ಮುಂದೆ “Remembering” ಎಂಬ ಪದವನ್ನು ನೋಡಬಹುದು.

ಇನ್​ಸ್ಟಾಗ್ರಾಮ್ನಲ್ಲಿ ಕೂಡ ಫೇಸ್‌ಬುಕ್‌ನಂತೆಯೇ, ಇನ್​ಸ್ಟಾಗ್ರಾಮ್ ಖಾತೆಯನ್ನು ಸ್ಮರಣೀಯಗೊಳಿಸಬಹುದಾಗಿದ್ದು, ಇಲ್ಲವೇ ಅಳಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಆದರೆ ಖಾತೆಯನ್ನು ಸ್ಮರಣೀಯಗೊಳಿಸಿ ಬಳಸಲು, ಜನರು ಮರಣದ ಪುರಾವೆಯೊಂದಿಗೆ ಇನ್​ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕಾಗಿದೆ.

ಯೂಟ್ಯೂಬ್ ಖಾತೆದಾರರು ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಅವಕಾಶ ನೀಡಲಾಗಿದ್ದು, ಯೂಟ್ಯೂಬ್​​ನಲ್ಲಿ ಹಣ ಸಂಪಾದನೆ ಮಾಡುವಂತಹ ಲಕ್ಷಾಂತರ ಮಂದಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಸಾವಿನ ಬಳಿಕ ತಮ್ಮ ಚಾನೆಲ್ ಅನ್ನು ಯಾರು ನಿರ್ವಹಿಸಲು ಅನುಮತಿಸಬೇಕು ಎಂದು ಒಂದು ಕಾನೂನು ಪತ್ರ ಸಲ್ಲಿಸಬೇಕಾಗಿದೆ.

ಈ ಆಯ್ಕೆ ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇದ್ದಾಗ ಅಂತಹ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್​ನ ಇನ್ ಆಯಕ್ಟಿವ್ ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದಾಗಿದೆ.

ವಿಶ್ವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವನ್ನು ರೂಪಿಸಿಲ್ಲ.

ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್​ಗೆ ಮನವಿ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ, ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುತ್ತದೆ .ಇದಕ್ಕಾಗಿ, ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯವಾಗಿದೆ .

ಜಿ-ಮೇಲ್‌ನಲ್ಲಿ ಸಹ ಖಾತೆಯನ್ನು ನಿಷ್ಕ್ರಿಯ ಮಾಡುವ ಅವಕಾಶಗಳನ್ನು ಗೂಗಲ್ ನೀಡಿದ್ದು, ಅದಕ್ಕಾಗಿ ‘ಪ್ರಿ ಸೆಲೆಕ್ಟೆಡ್‌ ಪೀರಿಡ್’ ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್‌ ನೀಡುವ ಆಯ್ಕೆಗಳನ್ನು ನೀಡಲಾಗಿದೆ.

ಬಳಕೆದಾರರು ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯ ಡಿಆಕ್ಟಿವ್ ಮಾಡುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಬಳಕೆದಾರ ತೀರಿ ಹೋದರೆ, ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡಲು ಆಕ್ಸಸ್ ನೀಡುವ ಆಯ್ಕೆಯನ್ನೂ ಗೂಗಲ್ ಕಲ್ಪಿಸಿಕೊಟ್ಟಿದೆ.

ನಮ್ಮ ಮರಣದ ನಂತರ ನಮ್ಮ ಖಾತೆಯನ್ನೂ ಯಾರು ನಿರ್ವಹಿಸಬೇಕು ಎಂಬುದನ್ನು ಬಳಕೆದಾರರ ಮೊದಲೇ ನಿಗದಪಡಿಸಬಹುದು.

2 Comments
  1. sklep online says

    Wow, awesome blog structure! How lengthy have you been running a blog for?
    you made blogging glance easy. The entire glance of your site is wonderful, let alone the content!
    You can see similar here sklep online

  2. List of Backlinks says

    Hey there! Do you know if they make any plugins to help with Search Engine Optimization? I’m trying to
    get my site to rank for some targeted keywords but
    I’m not seeing very good results. If you know of any please share.
    Cheers! I saw similar art here: Backlink Portfolio

Leave A Reply

Your email address will not be published.