ಪುನೀತ್ ನಟನೆಯ ‘ಗಂಧದ ಗುಡಿ ‘!ಸಿನಿಮಕ್ಕೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡ್!

Share the Article

ಕೋಟಿ ಕೋಟಿ ಜನರ ಮನಸ್ಸನ್ನು ಗೆದ್ದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನು ಅಗಲಿದರು ಸಹ ಅವರ ನೆನಪುಗಳು, ದಾನ ಧರ್ಮಗಳು, ನಿಸ್ವಾರ್ಥ ಸೇವೆಗಳು ಇಂದು ಅಜರಾಮರವಾಗಿ ಉಳಿದಿದೆ.

ಅಲ್ಲದೆ ಇಂದು ರಾಜ್ಯಾದ್ಯಂತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಗಂಧದ ಗುಡಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬೆಂಗಳೂರಿನ ಥಿಯೇಟರ್‌ಗಳಲ್ಲಿ ಫಸ್ಟ್‌ ಶೋ ಆರಂಭವಾಗಿದೆ.ಕರ್ನಾಟಕದಲ್ಲಿ 225ಕ್ಕೂಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್‌ ಆಗ್ತಿದೆ ಎಂಬ ಮಾಹಿತಿ ಇದೆ.

ಹೌದು ಇಂದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ನೋಡಲು ಹಂಬಲದಿಂದ ಇದ್ದಾರೆ.

ಅಷ್ಟೇ ಅಲ್ಲ ಟ್ವಿಟ್ಟರ್ ಖಾತೆಯ ಪೋಸ್ಟ್‌ನಲ್ಲಿ ʻಗಂಧದ ಗುಡಿʼಯ ಸಣ್ಣ ತುಣುಕೊಂದನ್ನು ಪೋಸ್ಟ್‌ ಮಾಡಲಾಗಿದ್ದು, ʻನಿಮ್ಮನ್ನೆಲ್ಲಾ ನೋಡುವ ಕಾತುರದಲ್ಲಿʼ ಎಂದು ಬರೆಯಲಾಗಿದೆ.

ಪ್ರತಿಯೊಬ್ಬರೂ ಗಂಧದ ಗುಡಿ ಸಾಕ್ಷ್ಯಾಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲಾ ಥಿಯೇಟರ್‌ಗಳ ಎದುರು ಪುನೀತ್‌ ರಾಜ್‌ಕುಮಾರ್‌ ಅವರ ಕಟೌಟ್‌ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ಅವುಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಮತ್ತು ಹೂವಿನ ಹಾರಗಳಿಂದ ಅಪ್ಪು ಅವರ ಕಟೌಟ್‌ಗಳಿಗೆ ಶೃಂಗಾರ ಮಾಡುತ್ತಿದ್ದಾರೆ. ಜೊತೆಗೆ ಜೈಕಾರ ಹಾಕುತ್ತಿದ್ದಾರೆ.

Leave A Reply