ರೈತರಿಗೆ ನಿಲ್ಲದ ಆರ್ಥಿಕ ಸಂಕಷ್ಟ | ತೆಂಗಿನಕಾಯಿ ಸಗಟು ದರ ಕುಸಿತ

ದೀಪಾವಳಿ ಹಬ್ಬದ ಸಡಗರದಲ್ಲಿರುವ ರೈತರಿಗೆ ತೆಂಗಿನ ಸಗಟು ದರ ಇಳಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ಫಸಲು ಲಭ್ಯವಿದ್ದರೂ ಕೂಡ ಉಷ್ಣವಲಯದ ಬೆಳೆಯ ಕೃಷಿಯಲ್ಲಿ ತೊಡಗಿರುವ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.

ಈ ಎರಡು ಜಿಲ್ಲೆಗಳಾದ್ಯಂತ ಸಾವಿರಾರು ರೈತರಿಗೆ ಈ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದು ತೆಂಗಿನಕಾಯಿಯ ಸಗಟುದರ ಕುಸಿತದಿಂದ ರೈತರು ಹಾಗೂ ತೆಂಗಿನ ಕಾಯಿ ಪಾಲುದಾರರ ಅಸಮಾಧಾನಕ್ಕೆ ಕಾರಣವಾಗಿದೆ ಹಾಗಾಗಿ, ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ರೈತರು ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ವಾರಗಳ ಹಿಂದೆ ಕೆ.ಜಿಗೆ 40 ಇದ್ದ ಸಗಟು ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಸಗಟು ದರ ಇದೀಗ ರೂ. 20ಗೆ ಕುಸಿದಿದ್ದು, ರೈತರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರಿಂದ ರೈತರು ಕಂಗಾಲಾಗಿದ್ದು, ಲಾಭದ ನಿರೀಕ್ಷೆ ಹುಸಿಯಾಗಿದೆ.

ಕೇವಲ ಚಾಮರಾಜನಗರ ಜಿಲ್ಲೆ ಒಂದರ ವ್ಯಾಪ್ತಿಯಲ್ಲೇ ರೈತರು 13,200 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಮೈಸೂರಲ್ಲಿ ಸುಮಾರು 16 ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲು ಜಾಗವನ್ನು ಮೀಸಲಿಡಲಾಗಿದೆ.

ಚಾಮರಾಜನಗರದ ತೆಂಗು ಬೆಳೆಗಾರರ ​​ಮಾರುಕಟ್ಟೆ ಒಕ್ಕೂಟ ತನ್ನ ಸಂಸ್ಕರಣಾ ಘಟಕಕ್ಕೆ ತೆಂಗಿನ ಬೆಳೆಯನ್ನು ರೈತರಿಂದ ಅತ್ಯಂತ ಸೀಮಿತ ಸಂಖ್ಯೆಯ ತೆಂಗಿನಕಾಯಿಗಳನ್ನು ಖರೀದಿಸಿದೆ. ಈ ಖರೀದಿ ಪ್ರಕ್ರಿಯೆ ವೇಳೆ ಮಾರಾಟ ಮಧ್ಯವರ್ತಿಗಳ ಕಾರಣದಿಂದ ಸಗಟು ಬೆಲೆ ಕುಸಿತಗೊಂಡಿದೆ ಎಂದು ಹೇಳಲಾಗುತ್ತಿದೆ.

ರೈತರ ಇನ್ನಿತರ ಕೃಷಿ ಉತ್ಪನ್ನಗಳಂತೆಯೇ ಸಗಟು ಬೆಲೆಯಲ್ಲಿನ ಏರಿಳಿತಗಳು ಚಿಲ್ಲರೆ ವೆಚ್ಚದ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರುತ್ತವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನ ದರವು ಅದರ ಸಗಟು ಬೆಲೆಯಲ್ಲಿನ ಕುಸಿತದಿಂದ ಪ್ರಭಾವ ಬೀರಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಒಂದು ತೆಂಗಿನಕಾಯಿಗೆ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ 20ರೂ.ನಿಂದ 30 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸದ್ಯ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪೂಜೆ ಹಾಗೂ ಇನ್ನಿತರ ಕಾರ್ಯಗಳಿಗೆ ಬೇಡಿಕೆ ಹೊಂದಿರುವ ತೆಂಗಿನಕಾಯಿ ಹಬ್ಬದ ವೇಳೆ ಪ್ರಮುಖ ಅಡುಗೆಗೂ ಹೆಚ್ಚು ಬಳಕೆಯಾಗುವುದು ಸಾಮಾನ್ಯ. ಹೀಗಾಗಿ ಸಗಟು ದರ ಇಳಿಕೆಯು ಈಗ ಚಿಲ್ಲರೆ ಬೆಲೆಯ ಮೇಲೆ ಉಂಟಾಗಿಲ್ಲ ಎನ್ನಲಾಗುತ್ತಿದೆ.

ಕರ್ನಾಟಕದ ಮೈಸೂರು, ಚಾಮರಾಜನಗರ ಮಾತ್ರವಲ್ಲದೆ ನೆರೆಯ ರಾಜ್ಯ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಕೊಬ್ಬರಿ ಕೊಯ್ಲು ಹೆಚ್ಚುವರಿಯಾಗಿರುವುದೇ ತೆಂಗಿನ ಸಗಟು ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಆದರೆ ಈ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ, ಬೆಲೆ ಪುನಃ ಲಾಭದಾಯಕ ಹಂತದಲ್ಲಿ ಸ್ಥಿರಗೊಳ್ಳಲಿದೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ತೆಂಗಿನಕಾಯಿಗೆ ಕನಿಷ್ಠ ಬೆಂಬಲ ಬೆಲೆಯಾಗಿ ಕ್ವಿಂಟಾಲ್‌ಗೆ ರೂ. 2,860 ನಿಗದಿಪಡಿಸಿದ್ದು, ಈ ಮೂಲಕ ಎಪಿಎಂಸಿಗಳು ರೈತರ ಬೆಳೆಗಳನ್ನು ಖರೀದಿಸುವಂತೆ ಕ್ರಮ ಕೈಗೊಂಡರೆ ಇದರಿಂದ ರೈತರಿಗೆ ಆರ್ಥಿಕವಾಗಿ ನೆರವಾಗುವ ಜೊತೆಗೆ ಫಸಲ್ ಬಿಮಾ ಬೆಳೆ ವಿಮೆಯ ವ್ಯಾಪ್ತಿಗೆ ತೆಂಗಿನ ಕಾಯಿಯನ್ನು ಸೇರಿಸುವುದರಿಂದ ರೈತರಿಗೆ ನೆರವಾಗಲಿದೆ.

ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮತ್ತು ತೆಂಗು ಬೆಳೆಗಾರರೊಬ್ಬರು ಸದ್ಯದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳ ಸಗಟು ಬೆಲೆ ಕುಸಿತ ಕಂಡಿದ್ದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Leave A Reply

Your email address will not be published.