Divorce: 5 ರೂ. ಕುರ್ಕುರೆ ತಂದಿಲ್ಲ ಎಂಬ ಕಾರಣಕ್ಕೆ ಗಂಡನಿಗೆ ಡಿವೋರ್ಸ್‌ ನೀಡಲು ಮುಂದಾದ ಪತ್ನಿ

Divorce: ಉತ್ತರ ಪ್ರದೇಶ (Uttar Pradesh)ದಲ್ಲೊಂದು ವಿಚಿತ್ರ ಡಿವೋರ್ಸ್‌ ಘಟನೆ ನಡೆದಿದೆ. ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್‌ ತರಲಿಲ್ಲವೆಂಬ ಕಾರಣಕ್ಕೆ ತನ್ನ ಪತಿ ವಿರುದ್ಧ ಠಾಣೆ ಏರಿದ್ದು, ಇದರ ಜೊತೆಗೆ ಡಿವೋರ್ಸ್‌ ನೀಡಲು ಮುಂದಾಗಿರುವ ಘಟನೆ ನಡೆದಿದೆ.

 

ಕಳೆದ ಒಂದುವರೆ ತಿಂಗಳಿನಿಂದ ಮಹಿಳೆ ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ತನ್ನ ಗಂಡನ ವಿರುದ್ಧ ದೂರು ನೀಡಲೆಂದು ಪೊಲೀಸ್‌ ಠಾಣೆಗೆ ಬಂದಿದ್ದು, ಮಹಿಳೆಯ ದೂರನ್ನು ಇದೀಗ ಫ್ಯಾಮಿಲಿ ಕೌನ್ಸೆಲಿಂಗ್‌ ಸೆಲ್‌ಗೆ ವರ್ಗಾಯಿಸಲಾಗಿದೆ. ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ ಸೆಲ್‌ ಗೆ ಕರೆಯಿಸಿದಾಗ ಇವರಿಬ್ಬರ ನಡುವಿನ ಜಗಳಕ್ಕೆ 5ರೂ. ಕುರ್ಕುರೆ ಕಾರಣ ಎಂದು ತಿಳಿದು ಬಂದಿದೆ.

 

ಈ ಜೋಡಿ ಕಳೆದ ವರ್ಷ ಮದುವೆಯಾಗಿದ್ದು, ಪತಿ ನನಗೆ ಹೊಡೆಯುತ್ತಾನೆ ಎಂದು ಹೆಂಡಿಯ ವಾದವಾದರೆ, 5 ರೂಪಾಯಿ ಕುರ್ಕುರೆ ತಂದಿಲ್ಲ ಎಂದು ಹೆಂಡತಿ ಜಗಳವಾಡುತ್ತಾಳೆ. ಕುರ್ಕುರೆ ಸಿಗದ ಕಾರಣ ತಾಯಿ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಇದೀಗ ಇವರಿಬ್ಬರ ಪ್ರಕರಣ ಮುಂದೂಡಲಾಗಿದ್ದು, ಮುಂದಿನ ದಿನಾಂಕದಲ್ಲಿ ಇವರಿಬ್ಬರ ಮನಸ್ತಾಪ ಸರಿ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Leave A Reply

Your email address will not be published.