Tech Tips : ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಉಂಟಾಗುತ್ತಿದೆಯೇ? ಈ ಕರೆಗಳನ್ನು ಬ್ಲಾಕ್ ಮಾಡಲು ಸಿಂಪಲ್ ಟ್ರಿಕ್ ಇಲ್ಲಿದೆ!!!

ನಮ್ಮ ಜೊತೆ ಎಲ್ಲೆಂದರಲ್ಲಿ ಜೊತೆ ಜೊತೆಗೆ ಇರೋದು ಸ್ಮಾರ್ಟ್ ಫೋನ್ ಮಾತ್ರ ಆದರೆ ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಈ ಸ್ಪ್ಯಾಮ್ ಕರೆಗಳಿಂದ ಕೆಲವೊಮ್ಮೆ ತುಂಬಾ ಕಿರಿ ಕಿರಿ ಅನುಭವಿಸಿ ಇರುತ್ತೇವೆ. ಆದರೆ ಇದಕ್ಕೆ ಪರಿಹಾರ ಏನೆಂದು ತಿಳಿದಿರುವುದಿಲ್ಲ. ಒಂದೊಂದು ಸಾರಿ ಮುಖ್ಯವಾದ ಮೀಟಿಂಗ್ ನಲ್ಲಿ ಇರುವಾಗ ಅಥವಾ ಗಾಢ ನಿದ್ರೆಯಲ್ಲಿ ಇದ್ದಾಗ, ದೇವರ ಪೂಜೆಯಲ್ಲಿ ಮಗ್ನರಾಗಿರುವಾಗ, ಏನೋ ಮುಖ್ಯ ವ್ಯವಹಾರ ಮಾಡುವಾಗ ಇಂತಹ ಕಾಲ್ ಬಂದಾಗ ಸಿಟ್ಟು ನೆತ್ತಿಗೇರುತ್ತೆ ಅಲ್ವೇ. ಹೌದು ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು ತಡೆಯುವುದು ಇಂದು ದೊಡ್ಡ ಸಾಹಸ ಆಗಿದೆ.

ಮೊಬೈಲ್ ಬಳಕೆದಾರರಿಗೆ ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ಬರುತ್ತಲೇ ಇರುತ್ತವೆ. ಯಾರದ್ದೋ ಕರೆ ಅಂತಾ ಮಾಡುವ ಕೆಲಸ ಬಿಟ್ಟು ಹೋಗಿ ಫೋನ್ ಎತ್ತಿದರೆ ಅದು ಸ್ಪ್ಯಾಮ್ ಕರೆಯಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ ದೂರ ಉಳಿಯುವುದಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೊಸ ಹೊಸ ನಂಬರ್‌ಗಳಿಂದ ಸ್ಪ್ಯಾಮ್‌ ಕರೆಗಳು ಬರುವುದು ಮತ್ತೊಂದು ತಲೆನೋವು.

ಆದರೆ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು ಕೆಲವೊಂದು ಟಿಪ್ಸ್ ಇವೆ :

• DND ನಲ್ಲಿ ನೋಂದಾಯಿಸುವ ಮೂಲಕ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಈ ಮೊಬೈಲ್-ಆಪರೇಟರ್ ನಿರ್ದಿಷ್ಟ DND (Do-Not-Disturb) ನೋಂದಣಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸಂಖ್ಯೆಯನ್ನು ನೀವು ನೋಂದಾಯಿಸಿಕೊಳ್ಳಬಹುದು, ಇದರ ಸಹಾಯದಿಂದ ನೀವು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವಲ್ಲಿ ತೀವ್ರವಾದ ಬದಲಾವಣೆಯನ್ನು ಗಮನಿಸಬಹುದು.

• ಸ್ಮಾರ್ಟ್‌ಫೋನ್‌ ಬಳಕೆದಾರರು ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಟ್ರೂ ಕಾಲರ್‌ ಅಪ್ಲಿಕೇಶನ್‌ 320 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ ಕಂಡಿದೆ. ಟ್ರೂ ಕಾಲರ್‌ ಕಾಲರ್ ಐಡಿ ಡಿವೈಸ್‌ ಆಗಿದ್ದು, ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕರೆ ಮಾಡುವವರ ಹೆಸರನ್ನು ಸೂಚಿಸಲಿದೆ. ಅಲ್ಲದೆ ಹೆಸರು ಅಥವಾ ಸಂಖ್ಯೆಯನ್ನು ಬಳಸಿಕೊಂಡು ವೈಯಕ್ತಿಕ ಬಳಕೆದಾರರ ಪ್ರೊಫೈಲ್‌ಗಳನ್ನು ಹುಡುಕುವುದಕ್ಕೆ ಸಹಕಾರಿ ಆಗಿದೆ.

• ಗೂಗಲ್‍ನ ಹೊಚ್ಚ ಫೋನ್ ಆಯಪ್ ಅನ್ನು ಡೌನ್‍ಲೋಡ್ ಮಾಡಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಫೋನ್ ಆಯಪ್ ನಿ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ನಂತರ ಆಯಪ್‍ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಸೈಲೆನ್ಸ್ ಅನ್‍ನೋನ್ ಕಾಲರ್ಸ್ ಅನ್ನು ಆಯ್ಕೆ ಆನ್ ಮಾಡಿ ಟಾಗಲ್ ಮಾಡಿ.

• ರೋಬೋಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಸೂಕ್ತವಾಗಿದೆ. ಇದು ತನ್ನ ಅಲ್ಗಾರಿದಮ್‌ ಅನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲಿದೆ. “ಆಡಿಯೋ ಫಿಂಗರ್‌ಪ್ರಿಂಟಿಂಗ್” ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.

ಈ ಮೇಲಿನ ಎಲ್ಲಾ ವಿಧಾನಗಳಿಂದ ಸ್ಪ್ಯಾಮ್‌ ಕಾಲನ್ನು ಅಳಿಸಬಹುದಾಗಿದೆ.

1 Comment
  1. RolandoL says

    Very interesting information!Perfect just what I was looking for!Raise your business

Leave A Reply

Your email address will not be published.