Puneeth Rajkumar : ಈ ನಟಿಯ ಕೈ ಮೇಲಿದೆ ಅಪ್ಪು ಟ್ಯಾಟೂ…ಇದಕ್ಕಿದೆ ವಿಶೇಷವಾದ ನಂಟು!!!

ಇತ್ತೀಚಿನ ದಿನಗಳಲ್ಲಿ ಟ್ಯಾಟು ಹಾಕಿಸಿಕೊಳ್ಳುವ ಟ್ರೆಂಡ್ ಜೋರಾಗಿ ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ನಮ್ಮ ನೆಚ್ಚಿನವರ ಹೆಸರನ್ನು ಹಚ್ಚೆ ಹಾಕಿಸಿ ಪ್ರೀತಿಯನ್ನು ವ್ಯಕ್ತಪಡಿಸುವ ಅಭ್ಯಾಸ ಹೆಚ್ಚಾಗಿ ನಡೆಯುತ್ತಿವೆ.

ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಹಾಗೂ ಸರಳತೆಯ ಶೋಭೆಯ ಜೊತೆಗೆ ನಗುವಿನ ಯಜಮಾನ ಅಪ್ಪು ಅಭಿಮಾನಿಗಳ ಪಾಲಿಗೆ ದೇವರೆಂದರೆ ತಪ್ಪಾಗದು.

ಕರುನಾಡಿನಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದ ಧ್ರುವ ತಾರೆ ಇಹಲೋಕಕ್ಕೆ ವಿದಾಯ ಹೇಳಿದರೂ ಕೂಡ ಅಭಿಮಾನಿಗಳ ಹೃದಯ ಸಾಮ್ರಾಜ್ಯ ದಲ್ಲಿ ಅಚ್ಚಳಿಯದೆ ಭದ್ರ ಸ್ಥಾನ ಪಡೆದಿದ್ದಾರೆ.

2007 ರಲ್ಲಿ, ನಮ್ರತಾ ಪುನೀತ್ ರಾಜ್‌ಕುಮಾರ್ ಅವರ ಮಿಲನ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದು, ಇದೀಗ ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ 2ರ ನಟಿ ನಮ್ರತಾ ಗೌಡ ಕೂಡ ಅಪ್ಪುವಿನ ಹೆಸರಿನ ಹಚ್ಚೆ ಹಾಕಿಸಿಕೊಂಡು ತನ್ನ ನೆಚ್ಚಿನ ನಟನ ಮೇಲಿರುವ ಗೌರವವನ್ನು ವ್ಯಕ್ತ ಪಡಿಸಿದ್ದಾರೆ.

ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿಯಾಗಿದ್ದು, ಹೊಸ ಹೊಸ ಫೋಟೊ ಹಾಕಿ ಪಡ್ಡೆ ಹೈಕ್ಳ ಹೃದಯವನ್ನು ಆಗಾಗ ಡಿಸ್ಟರ್ಬ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗವಿದೆ.

ಈ ನಡುವೆ ನಮ್ರತಾ ಗೌಡ ಹೊಸ ಫೋಟೊ ಮತ್ತು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಸ್ಪೆಷಲ್ ಫೋಟೊಗಳಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

https://www.instagram.com/p/CcuVjMMvABI/?utm_source=ig_web_copy_link

ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ನಮ್ರತಾ ತನ್ನ ನೆಚ್ಚಿನ ನಟನನ್ನು ನೆನಪಿಸಿಕೊಂಡು ಪುನೀತ್ ರಾಜ್‌ಕುಮಾರ್ ಹೆಸರನ್ನು ಕೈಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಮ್ರತಾ ಗೌಡ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿ, ತಮ್ಮ ನೆಚ್ಚಿನ ನಟನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಈ ಬಗ್ಗೆ ಇತ್ತೀಚೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಬಗೆಗಿನ ಭಾವನಾತ್ಮಕ ಸಾಲುಗಳನ್ನು ಬಿಚ್ಚಿಟ್ಟಿದ್ದಾರೆ.

ಅಪ್ಪುವಿನ ಹುಟ್ಟು ಹಬ್ಬದ ರಾಜರತ್ನನ ಹೆಸರಿರುವ ಟ್ಯಾಟೂದ ಫೋಟೊವನ್ನು ಹಂಚಿಕೊಂಡು ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಹಚ್ಚೆ ಹಾಕಿಸಿಕೊಳ್ಳಲು ಬೆಂಗಳೂರಿನ ಜನಪ್ರಿಯ ಟ್ಯಾಟೂ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಯೂಟ್ಯೂಬ್‌ನಲ್ಲಿ ಅವರ ಈ ವಿಡಿಯೋ 5.2 ಕೆ ಲೈಕ್ಸ್ ಮತ್ತು 139 ಕೆ ವೀಕ್ಷಣೆಗಳನ್ನು ಪಡೆದುಕೊಂಡು ಅಭಿಮಾನಿಗಳಿಗೆ ರಾಜರತ್ನ ನ ಹಚ್ಚೆ ಹಾಕಿಸಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಅಪ್ಪುವಿನ ಡ್ರೀಮ್ ಪ್ರೊಜೆಕ್ಟ್ ಗಂಧದ ಗುಡಿ ಚಿತ್ರ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿಯುವ ಸಾಧ್ಯತೆ ದಟ್ಟವಾಗಿದೆ.

Leave A Reply

Your email address will not be published.