BP-Sugar tips : ನಿಮ್ಮ ದೇಹದಲ್ಲಿ ಬಿಪಿ-ಶುಗರ್ ಹೆಚ್ಚಾಗಿದ್ಯಾ? ಈ ವಿಟಮಿನ್ ಸಿ ಹಣ್ಣು-ತರಕಾರಿ ಸೇವನೆಯ ಪ್ರಯೋಜಗಳನ್ನ ತಿಳಿಯಿರಿ

ಹೊಸಕನ್ನಡ : ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕೆ ಹಾಗಿದ್ರೆ ನೀವು ವಿಟಮಿನ್ ‘ ಸಿ ‘ ಅಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಬೇಕು. ಅವುಗಳ ಸೇವನೆಯಿಂದ ದೀರ್ಘಕಾಲ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ಕೂಡ ನಮ್ಮನ್ನು ದೂರ ವಿರಿಸುವಲ್ಲಿ ಇವುಗಳ ಪಾತ್ರ ಮಹತ್ವದು.

ಬನ್ನಿ ಇಂದಿನ ಈ ಲೇಖನದಲ್ಲಿ ಯಾವೆಲ್ಲಾ ಬಗೆಯ ವಿಟಮಿನ್ ಸಿ ಅಂಶಗಳು ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವುದರಿಂದ ಇಂತಹ ದೀರ್ಘ ಕಾಲದ ಕಾಯಿಲೆಗಳಿಂದ ದೂರ ಇರಬಹುದು ಎನ್ನುವುದನ್ನು ನೋಡೋಣ…


ಟೊಮೆಟೊ ಹಣ್ಣು :
ವರ್ಷವಿಡೀ ಸಿಗುವ ಟೊಮೆಟೊ ಹಣ್ಣಿನಲ್ಲಿ ವಿಟಮಿನ್‌ ಸಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದರಲ್ಲಿರುವ ಲೈಕೋಪೀನ್ ಎನ್ನುವ ನೈಸರ್ಗಿಕ ಅಂಶ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಟೊಮೆಟೊ ಹಣ್ಣನ್ನು ದೈನಂದಿನ ಅಡುಗೆಯಲ್ಲಿ ಬಳಸುವುದರಿಂದ, ಮಧುಮೇಹ, ಕ್ಯಾನ್ಸರ್, ಹೃದ್ರೋಗಗಳ ಅಪಾಯ ದೂರವಾಗುತ್ತದೆ
ಇತ್ತೀಚಿನ ಒಂದು ಸಂಶೋಧನೆಯೊಂದರ ಪ್ರಕಾರ, ಟೊಮೆಟೊ ಹಣ್ಣಿನ ಜ್ಯೂಸ್ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಜೊತೆಗೆ ಸಕ್ಕರೆಕಾಯಿಲೆಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.


ಸೀಬೆಹಣ್ಣು
ಸೀಬೆ ಹಣ್ಣಿನಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಅಂಶ ಅಡಗಿದೆ. ಇವು ರಕ್ತ ದೊತ್ತಡವನ್ನು ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಪ್ರಮುಖ್ವಾಗಿ ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ರಕ್ತದೊತ್ತ ಡವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿವಾರಣೆ ಮಾಡುತ್ತದೆ. ಬಿಪಿ ಸಮಸ್ಯೆ ಇರುವವರಿಗೆ ಸೀಬೆಹಣ್ಣು ತುಂಬಾ ಒಳ್ಳೆಯದು….


ನೆಲ್ಲಿಕಾಯಿ
ಕೊರೊನಾ ಎಂಬ ಹೆಸರು ಕೇಳಿ ಬಂದಾಗಿನಿಂದಲೂ, ಕೂಡ ನೆಲ್ಲಿಕಾಯಿಯ ಹೆಸರು ಮುಂಚೂಣಿ ಯಲ್ಲಿ ಬಂದು ನಿಲ್ಲುತ್ತದೆ. ಇದಕ್ಕೆ ಬಹು ಮುಖ್ಯ ಕಾರಣ ಇದರಲ್ಲಿ ವಿಟಮಿನ್ ‘ ಸಿ ‘ ಅಂಶ ಯಥೇಚ್ಛವಾಗಿದೆ ಎಂಬ ಕಾರಣಕ್ಕೆ.
ಆದರೆ ಕೇವಲ ಈ ಸಂದರ್ಭಕ್ಕೆ ಮಾತ್ರವಲ್ಲದೆ ಆಯುರ್ವೇದ ಕಾಲದಿಂದಲೂ ಕೂಡ ನಮ್ಮ ಆರೋಗ್ಯಕ್ಕೆ, ಇದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತಾ ಬಂದಿದೆ. ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಜೀರ್ಣಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ, ರಕ್ತದೊತ್ತಡ ದಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ರಕ್ತದ ಒತ್ತಡ, ಮಧುಮೇಹ ಸಮಸ್ಯೆ ಇದ್ದವರು, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.


ಬೆಟ್ಟದ ನೆಲ್ಲಿಕಾಯಿ : ವಿಟಮಿನ್ ಸಿ ಹೆಚ್ಚಿರುವ ಹಣ್ಣು-ತರಕಾರಿಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ, ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳನ್ನು ಗುಣಲಕ್ಷಣಗಳನ್ನು ಒಳಗೊಂಡಿದೆ.


ಆಹಾರ ಪದ್ಧತಿಯಲ್ಲಿ, ಆದಷ್ಟು ವಿಟಮಿನ್ ಸಿ ಹೆಚ್ಚಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಜೊತೆಗೆ ಸಕ್ಕರೆಕಾಯಿಲೆಗೆ ಸಂಬಂಧಿಸಿದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.