ಬೆಡ್ ಶೀಟ್ ವ್ಯಾಪಾರಿಗಳಿಗೆ ಹಲ್ಲೆ ಪ್ರಕರಣ : 6 ಮಂದಿ ಬಂಧನ

ಕಡಬ : ಇಬ್ಬರು ಬೆಡ್ ಶೀಟ್ ವ್ಯಾಪಾರಿಗಳಿಗೆ ಗುಂಪೊಂದು ಕಾಣಿಯೂರು ಸಮೀಪ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಯತ್ನಕ್ಕೆ ಪ್ರಯತ್ನ ಕುರಿತಂತೆ ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು ತಾಲ್ಲೂಕಿನ ಅಡ್ಡೂರು ನಿವಾಸಿಗಳಾದ ರಮೀಝುದ್ದೀನ್ ಮತ್ತು ರಫೀಕ್ ಎಂಬುವವರನ್ನು, ಮನೆಗೆ ನುಗ್ಗಿ ಮಹಿಳೆಯೊಬ್ಬಳನ್ನು ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ,ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ದುಷ್ಕರ್ಮಿಗಳು ಇಬ್ಬರಿಗೂ 2 ಗಂಟೆಗಳ ಕಾಲ ನಿರಂತರವಾಗಿ ಥಳಿಸಿದ್ದರು ಮತ್ತು ಇಬ್ಬರ ಮೇಲೆ ಬೈಕ್ ಹತ್ತಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣಾ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪುನೀತ್ ,ರಾಜು,ಪ್ರಸಾದ್,ಕಿಶೋರ್,ಭವಿತ್,ರಂಜಿತ್ ಎಂದು ಗುರುತಿಸಲಾಗಿದೆ.

Leave A Reply

Your email address will not be published.