Mysore Chamundeshwari Temple: ಭಕ್ತಾದಿಗಳ ಗಮನಕ್ಕೆ : ಗ್ರಹಣ ದಿನ ಭಕ್ತರಿಗಿಲ್ಲ ಮೈಸೂರು ಚಾಮುಂಡೇಶ್ವರಿ ದರ್ಶನ ʼ

ಮೈಸೂರು : ಮಂಗಳವಾರ ಗ್ರಹಣ ಹಿನ್ನೆಲೆ ಮಧ್ಯಾಹ್ನ ನಂತ್ರ ಮೈಸೂರು ಚಾಮುಂಡಿ ತಾಯಿಯ ದರ್ಶನ ಇರೋದಿಲ್ಲ ಎಂದು ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆಮೈಸೂರು: ಗ್ರಹಣ ದಿನ ಭಕ್ತರಿಗಿಲ್ಲ ಚಾಮುಂಡೇಶ್ವರಿ ದರ್ಶನ

27 ವರ್ಷಗಳ ನಂತರ ಮೊದಲ ಬಾರಿಗೆ ದೀಪಾವಳಿ ಅಮವಾಸ್ಯೆಯ ಸಂದರ್ಭದಲ್ಲಿ ಬಂದಿರುವ ಸೂರ್ಯ ಗ್ರಹಣ ಹಿನ್ನಲೆಯಲ್ಲಿ ಮಂಗಳವಾರ ಮದ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿ ತಾಯಿಯ ದರ್ಶನ ಇರುವುದಿಲ್ಲ.ಆದ್ರೆ ಗ್ರಹಣದ ಫ್ರಾರಂಭ ಸ್ಪರ್ಷಕಾಲ ಮತ್ತು ಮೋಕ್ಷ ಕಾಲ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚರಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದೆ. ಗ್ರಹಣ ಬಿಟ್ಟ ನಂತ್ರ ದೇವಾಲಯವನ್ನು ಸ್ವಚ್ಚಗೊಳಿಸಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ದೇವಾಯಲಕ್ಕೆ ಭಕ್ತರಿಗೆ ಪ್ರವೇಶ ಇರೋದಿಲ್ಲ ಎಂದು ಚಾಮುಂಡೇಶ್ವರಿ ದೇವಲಯಾದ ಕಾರ್ಯ ನಿರ್ವಾಹಕ ಅಧಿಕಾರಿಗಳು ತಮ್ಮ ಪ್ರಕಟಣೆಯನ್ನು ತಿಳಿಸಿದ್ದಾರೆ

Leave A Reply

Your email address will not be published.