ನಿಮ್ಮ ಬಾಯಿ ಒಣಗುತಿದ್ಯ? ಹಾಗಿದ್ರೆ ಹೀಗೇ ಮಾಡಿ

ಬೇಸಿಗೆ ಸಮಯದಲ್ಲಿ ಬಾಯಿ ಒಣಗುವುದು ಸಾಮಾನ್ಯ. ಇನ್ನು ವೇದಿಕೆಯ ಮೇಲೆ ನಿಂತಾಗ ಭಯದಲ್ಲಿ ಬಾಯಿ ಒಣಗಿ ತಲೆ ಸುತ್ತು ಬರುವುದು ಸಹಜ. ಏನೇ ತಿಂದರೂ ತಲೆ ತಿರುಕು, ಬಾಯಿ ಒಣಗುವುದು ಸಹಜವಾಗಿದೆ. ಹೀಗಾಗಿ ಇದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ ಫಾಲೋ ಮಾಡಿ.

ಬಾಯಿ ಒಣಗುತ್ತಿದ್ದಲ್ಲಿ ಆದಷ್ಟೂ ನೀರನ್ನು ಸೇವಿಸಿ. ಇದನ್ನು ಡಿ ಹೈ ಡ್ರೇಟ್ ಅಂತ ಕರೆಯಲಾಗುತ್ತೆ. ಇಂತ ಸಮಸ್ಯೆಯಿಂದ ಬಳಲುತ್ತಿದ್ದವರು ಆದಷ್ಟು ದ್ರವ ಪದಾರ್ಥವನ್ನು ಸೇವಿಸಿ. ಜ್ಯೂಸ್, ಕ್ಯಾಂಡಿ ಇಂತಹ ದ್ರವಗಳನ್ನು ಹೆಚ್ಚಾಗಿ ಸೇವಿಸಿ. ಆದಷ್ಟು ಕಮ್ಮಿ ಆಗುತ್ತೆ.

ನಿಮ್ಮ ಬಾಯಿಯ ಸುತ್ತಲೂ ಶುದ್ಧ ಅಲೋವೆರಾವನ್ನು ಹಚ್ಚಿ. ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಜಕ್ಕೂ ಬಾಯಿ ಒಣಗುವುದು ಕಡಿಮೆ ಆಗುತ್ತದೆ. ಅಲೋವೆರಾ ಕೇವಲ ಕೂದಲು ಮತ್ತು ಅಂದ ಚೆಂದಕ್ಕೆ ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮವಾಗಿದೆ.

ಪ್ರತಿದಿನ 2 ರಿಂದ 3 ಕಪ್ ಶುಂಠಿ ಚಹಕ್ಕೆ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯಿರಿ. ಇದು ನಿಮ್ಮ ಲಾಲಾರಸ ಗ್ರಂಥಿಗಳನ್ನು ಉತ್ಪಾದಿಸುತ್ತದೆ. ಇದರಿಂದ ಆಗಾಗ ಬಾಯಿ ಒಣಗುವುದನ್ನು ತಪ್ಪಿಸಬಹುದು.

ಖಾರದ ಪದಾರ್ಥಗಳ ರಸವನ್ನು ಕುಡಿಯಿರಿ. ಉದಾಹರಣೆಗೆ ಮೆಣಸಿನ ಕಾಯಿಯ ರಸವನ್ನು ನೀವು 1 ಡ್ರಾಪ್ ನಾಲಿಗೆಗೆ ಮುಟ್ಟಿಸಿದರೆ ಸಾಕು. ಲಾಲಾರಸ ವೃದ್ಧಿಸುತ್ತದೆ. ಮೆಂತ್ಯ ಮತ್ತು ಸೋಂಪು ಕಾಳನ್ನು ಹುರಿದು ಊಟವಾದ ನಂತರ ಸೇವಿಸಬೇಕು. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಇದರ ಜೊತೆಗೆ ನಿಮ್ಮ ಒಣ ಬಾಯನ್ನು ಸರಿಪಡಿಸುತ್ತದೆ. ಹೀಗೆ ಒಂದಷ್ಟು ಟಿಪ್ಸ್ ಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಿ. ಇದರಿಂದ ಅನುಭವಿಸುತ್ತಿರುವ ಕಾಯಿಲೆಗಳು ದೂರವಾಗುತ್ತದೆ.

Leave A Reply