ನನ್ನಮ್ಮ ಸೂಪರ್ ಸ್ಟಾರ್ 2 ವಂಶಿಕಾ ನಿರೂಪಕಿ ಆಗಿದ್ದಾದ್ರು ಯಾಕೆ? ರಹಸ್ಯ ಬಿಚ್ಚಿಟ್ಟ ತಂಡ

ಎಂಟರ್ಟೈನ್ಮೆಂಟ್ ವಾಹಿನಿಗಳಲ್ಲಿ ನೂರಾರು ರೀತಿಯ ಶೋಗಳು ಪ್ರಸ್ತುತ ಬರುತ್ತಿದೆ. ಜನರ ಮನರಂಜನೆಗಾಗಿ ಹೊಸ ಹೊಸ ಐಡಿಯಾಗಳೊಂದಿಗೆ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪರ್ ಸ್ಟಾರ್ ಕೂಡ ಒಂದು. ಈಗಾಗಲೇ ಸೀಸನ್ ಒಂದು ಮುಗಿಸಿ ಮತ್ತೊಂದು ಸೀಸನ್ ಆರಂಭವಾಗಿದೆ. ಈ ವಾರದಲ್ಲಿ ದೀಪಾವಳಿ ಆಚರಿಸುವ ಎಪಿಸೋಡ್ ಕೂಡ ಜನರನ್ನು ಮನರಂಜಿಸಲು ಮುಂದಾಗಿದ್ದಾರೆ.

ಈ ಶೋನಲ್ಲಿ ಅನುಪಮಾ ಪ್ರಭಾಕರ್, ಸೃಜನ್ ಲೋಕೇಶ್, ತಾರಾ ತೀರ್ಪುಗಾರರು. ನಿರಂಜನ್ ದೇಶಪಾಂಡೆ, ವಂಶಿಕಾ ಅಂಜನಿ ಕಶ್ಯಪ ಅವರು ನಿರೂಪಕರು. ರಿಯಾಲಿಟಿ ಶೋ ತಂಡ ಇದರ ಬಗ್ಗೆ ಮಾಧ್ಯಮದೊಂದಿಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್ ಪ್ರಕಾಶ್ ‘ನನ್ನಮ್ಮ ಸೂಪರ್‌ಸ್ಟಾರ್’ ಮಕ್ಕಳ ಮುಗ್ಧತೆ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ದಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸಸ್ ಆಗಲಿದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಹಾಗೆಯೇ “ವಂಶಿಕಾ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಈ ಶೋನಲ್ಲಿ ಹೊಸತು ಇರಲಿ, ಕ್ರಿಯೇಟಿವಿಟಿ ಇರಲಿ ಎಂದು ಅವಳನ್ನು ನಿರೂಪಕಿಯಾಗಿ ಮಾಡಿದ್ದೇವೆ” ಎಂದಿದ್ದಾರೆ.

Leave A Reply

Your email address will not be published.