ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವರ್ಗಾವಣೆ | ನೂತನ ಜಿಲ್ಲಾಧಿಕಾರಿಯಾಗಿ ಜಿ.ಪಂ.ಸಿಇಓ ಆಗಿದ್ದ ಡಾ.ಕುಮಾರ್

ರಾಜ್ಯ ಸರ್ಕಾರ( Karnataka Government) 21 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಾಗಾಗಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಭರದಿಂದ ಸಾಗಿದೆ ಎನ್ನಬಹುದು.

ಈ ಕುರಿತು ರಾಜ್ಯ ಸರ್ಕಾರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರಿಗೆ ವರ್ಗಾವಣೆಯಾಗಿದ್ದು,ಅವರ ಸ್ಥಳಕ್ಕೆ ದ.ಕ.ಜಿ.ಪಂ.ಸಿಇಓ ಆಗಿದ್ದ ಡಾ.ಕುಮಾರ್ ಅವರನ್ನು ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ರಾಜೇಂದ್ರ ಅವರನ್ನು ಮೈಸೂರು ಜಿಲ್ಲಾಧಿಕಾರಿ ಆಗಿ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಅನಿಲ್ ಕುಮಾರ್ ಟಿ.ಕೆ ಅವರಿಗೆ ರೆವಿನ್ಯೂ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

ಡಾ.ಪ್ರಸಾದ್ ಎನ್ ವಿ ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹಾಗೂ ಜಯರಾಂ ಅವರಿಗೆ ಕಪಿಲ್ ಮೋಹನ್ ಅವರ ವರ್ಗಾವಣೆಯಿಂದ ತೆರವಾದಂತ ಕಂದಾಯ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಹೊಣೆಗಾರಿಕೆ ನೀಡಲಾಗಿದೆ.

ಮೈಸೂರು ಡಿಸಿ ಡಾ.ಬೋಗಾದಿ ಗೌತಮ್ಮ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರಿನ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಡೈರೆಕ್ಟರ್ ಆಗಿ ನೇಮಿಸಿದೆ.

ರಮೇಶ್ ಡಿ ಎಸ್ ಅವರನ್ನು ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಶ್ರೀಮತಿ ಅಶ್ವತ್ಥಿ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಮಂಡ್ಯ ನೂತನ ಡಿಸಿಯಾಗಿ ಡಾ.ಗೋಪಾಲ್ ಕೃಷ್ಣ ಹೆಚ್ ಎನ್ ನೇಮಿಸಿದೆ.

ಸ್ಕಿಲ್ ಡೆವೆಲೆಪ್ ಮೆಂಟ್, ಎಂಟರ್ ಪ್ರೈನರ್ ಶಿಪ್ ಮತ್ತು ಲೈವಿಹೂಡ್ ನ ಹೆಚ್ಚುವರಿ ಕಾರ್ಯದರ್ಶಿ ಶ್ರೀವಿದ್ಯಾ ಪಿ.ಐ ಅವರನ್ನು ಬೆಂಗಳೂರು ಈ-ಗೋವೆರೆನ್ಸ್ ನ ಸಿಇಓ ಆಗಿ ನೇಮಕ ಮಾಡಿದೆ.

Leave A Reply

Your email address will not be published.