Ultraviolette f77 : ಅತ್ಯಧಿಕ ಮೈಲೇಜ್ ನೀಡುವ ಅಲ್ಟ್ರಾವಯೊಲೆಟ್ ಈ ದಿನದಂದು ನಿಮ್ಮ ಮನೆಬಾಗಿಲಿಗೆ!!!
ಅತ್ಯಧಿಕ ಮೈಲೇಜ್ ನೀಡುವ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಜನರನ್ನು ಸೆಳೆಯಲು ಸಿದ್ಧವಾಗುತ್ತಿದೆ.
ಬೆಂಗಳೂರು ಮೂಲದ ಆಲ್ಟ್ರಾವಯೊಲೆಟ್ ಕಂಪನಿಯು ತನ್ನ ಹೊಸ ಎಫ್77 ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ನವೆಂಬರ್ 24ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಹೊಸ ಇವಿ ಬೈಕ್ ಖರೀದಿಗಾಗಿ ಅಕ್ಟೋಬರ್ 23ರಿಂದ ಬುಕಿಂಗ್ ಆರಂಭಗೊಳ್ಳಲಿದೆ.
2019ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಮಾದರಿಯು ಸತತ ಮೂರು ವರ್ಷ ರೋಡ್ ಟೆಸ್ಟಿಂಗ್ ನಂತರ ಇದೀಗ ಉತ್ಪಾದನಾ ಮಾದರಿಯೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ.
ಆಲ್ಟ್ರಾವಯೊಲೆಟ್ ಎಫ್77(Ultraviolette F77) ಬೈಕ್ ಖರೀದಿಗಾಗಿ ರೂ. 10 ಸಾವಿರ ಮುಂಗಡ ಹಣ ನಿಗದಿಪಡಿಸಿದ್ದು, ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಕಂಪನಿಯು ಶೀಘ್ರದಲ್ಲಿಯೇ ಎಕ್ಸ್ಪಿರೆನ್ಸ್ ಸೆಂಟರ್ ಗಳಲ್ಲಿ ಟೆಸ್ಟ್ ಡ್ರೈವ್ ಮಾಡಲು ಅನುವು ಮಾಡಿಕೊಡಲಿದೆ.
ಹೊಸ ಎಲೆಕ್ಟ್ರಿಕ್ ಬೈಕ್ ತೂಕ ಇಳಿಕೆಯೊಂದಿಗೆ ಪರ್ಫಾಮೆನ್ಸ್ ಮತ್ತು ಮೈಲೇಜ್ ಹೆಚ್ಚಳಕ್ಕಾಗಿ ಸಹಕಾರಿಯಾದ ಫ್ರೇಮ್ ಚಾರ್ಸಿಸ್ ಮೇಲೆ ನಿರ್ಮಾಣ ಮಾಡಿದ್ದು, ಇದು ಉತ್ತಮ ಸ್ಱಿರತೆಯೊಂದಿಗೆ ಐದು ಹಂತದ ರಕ್ಷಣೆ ಹೊಂದಿರುವ ಬ್ಯಾಟರಿ ಪ್ಯಾಕ್ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತದೆ.
ಹೊಸ ಇವಿ ಬೈಕಿನಲ್ಲಿ ಆ್ಯಂಗುಲರ್ ಬಾಡಿ ಪ್ಯಾನೆಲ್, ಶಾರ್ಪ್ ಫ್ರಂಟ್ ಫ್ಯಾಸಿಯಾ ಮತ್ತು ಫುಲ್ ಎಲ್ಇಡಿ ಹೆಡ್‌ಲೈಟ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಕ್ಲಿಪ್ ಹ್ಯಾಂಡ್ ಬಾರ್ ಮತ್ತು ಹಿಂಬದಿಯಲ್ಲಿರುವ ಫುಟ್ ಪೆಗ್ ಸೌಲಭ್ಯವು ಪರ್ಫಾಮೆನ್ಸ್ ಬೈಕ್ ರೈಡಿಂಗ್ ಶೈಲಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತವೆ.
ಇಕೋ, ಸ್ಪೋರ್ಟ್ ಮತ್ತು ಇನ್‌ಸೆನ್ ಎನ್ನುವ ಮೂರು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಇದು ಇತರೆ ಇವಿ ಬೈಕ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಯೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.
ಹೊಸ ಇವಿ ಬೈಕ್ ಬೆಲೆಯು ನವೆಂಬರ್ 24ರಂದು ಅಧಿಕೃತವಾಗಿ ಲಭ್ಯವಾಗಲಿದೆ.ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಆಲ್ಟ್ರಾವಯೊಲೆಟ್ ಕಂಪನಿಯು ಹೊಸ ಎಫ್77 ಇವಿ ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಹೊಸ ಬೈಕಿನಲ್ಲಿರುವ 10.5kWh ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್ ಗೆ ಗರಿಷ್ಠ 307 ಕಿ.ಮೀ ಮೈಲೇಜ್ ನೀಡುತ್ತದೆ.
ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಈ ಹಿಂದೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಿದ್ದ ಆಲ್ಟ್ರಾವಯೊಲೆಟ್ ಕಂಪನಿಯು ನವೀಕೃತ ಮಾದರಿಗಾಗಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಈ ಹಿಂದೆ ಅನಾವರಣ ಮಾಡಿದ್ದ ಬ್ಯಾಟರಿಗಿಂತಲೂ ಇದೀಗ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ಪ್ರೇರಿತ ಬ್ಯಾಟರಿ ನೀಡುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಹೊಸ ಎಫ್77 ಎಲೆಕ್ಟ್ರಿಕ್ ಬೈಕ್ ಮಾದರಿಯು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಏರ್‌ಸ್ಟ್ರೈಕ್, ಲೇಸರ್ ಮತ್ತು ಶ್ಯಾಡೋ ಎಂಬ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಆಲ್ಟ್ರಾವಯೊಲೆಟ್ ಕಂಪನಿಯ ಹೊಸ ಯೋಜನೆಯ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ವಾಹನ ಉತ್ಪಾದನಾ ಪ್ರಮಾಣವನ್ನು ರೂ. 15 ಸಾವಿರ ಯುನಿಟ್‌ನಿಂದ 1.20 ಲಕ್ಷ ಯುನಿಟ್ ಉತ್ಪಾದನೆ ಮಾಡುವ ಗುರಿಹೊಂದಿದೆ.
ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲು ಸಜ್ಜಾಗುತ್ತಿದೆ.