ಸೋನು ಗೌಡ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ!

ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿ 1 ತಿಂಗಳು ಕಳಿತಾ ಬಂತು. ವೀಕ್ಷಕರು ಯಾವ್ದೇ ವೈಲ್ಡ್ ಕಾರ್ಡ್ ಎಂಟ್ರಿ ಇಲ್ವಾ ಅನ್ನೋ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕೇಳ್ತಾನೆ ಇದ್ದಾರೆ. ಇದಕ್ಕೆ ಸರಿಯಾಗಿ ಎಲ್ಲರಿಗೂ ಆನ್ಸರ್ ಕೂಡ ಸಿಕ್ಕಿದೆ. ಪಕ್ಕಾ ಶಾಕ್ ಆಗ್ತೀರಾ.

ಸದಾ ಕಿರಿ ಕಿರಿ ಮಾಡ್ತಾ, ಟ್ರೊಲ್ ಲೀ ಇರೋಳು, ರಾಕಿ ರಾಕಿ ಅಂತ ಯಾವಾಗ್ಲೂ ತಲೆಗೆ ಹುಳ ಬಿಡ್ತಾ ಇದ್ದ ಹುಡ್ಗಿ ಅವಳೇ ಸೋನು ಶ್ರೀನಿವಾಸ್ ಗೌಡ ಮತ್ತೆ ಬಿಗ್ ಬಾಸ್ ಗೆ ಬರಲಿದ್ದಾಳೆ.

ಈಗಾಗಲೇ ಬಿಗ್ ಬಾಸ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಟಾಪ್ 5 ಕೂಡ ಬಂದಿದ್ಲು ಈಕೆ. ಇದೀಗ ಆಕೆಯ ಏಟಿಗೆ ಎದುರೇಟು ಕೊಡೋಕೆ ಜೊತೆಗೆ ಒಂದಷ್ಟು ತರ್ಲೆಗಳನ್ನು ಮಾಡಲು ಸೋನು ಗೌಡಾಳನ್ನು ಬಿಗ್ ಬಾಸ್ ಟಿವಿ ಶೋ ಗೆ ಕರೆಸ್ತಾ ಇದ್ದಾರೆ.

ಇದು ಯಾವುದೇ ಗಾಸಿಪ್ ಸುದ್ಧಿ ಅಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಸೋನು ಗೌಡರವರು. ಒಟ್ಟಿನಲ್ಲಿ ಟ್ರೋಲ್ ಮಾಡೋರಿಗೂ ಒಂದಷ್ಟು ಕಂಟೆಂಟ್ ಸಿಗುತ್ತೆ ಜೊತೆಗೆ ವೀಕ್ಷಕರಿಗಂತು ಮನರಂಜನೆ ಸಿಗುತ್ತೆ ಅಂತಾನೆ ಹೇಳಬಹುದು.

Leave A Reply

Your email address will not be published.