ನಿಮ್ಮ ಹಲ್ಲುಗಳನ್ನು ಹೀಗೆ ಇಟ್ಟುಕೊಳ್ಳಿ

ದಂತವನ್ನು ಜೋಪಾನ ಮಾಡುವುದು ಸುಲಭ. ಆದ್ರೆ ಅಷ್ಟೇ ಬೇಗ ಹಾಳುಗೆಡುತ್ತದೆ ಎನ್ನುವುದು ಸತ್ಯ. ಯಾಕೆಂದ್ರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸುವುದು ಬೇಗ. ತುಂಬಾ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ಇದರಿಂದ ಹುಳುಕುಗಳು ಕಡಿಮೆಯಾಗುತ್ತದೆ. ಇದರ ಸಂರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ ನೋಡಿ.

ಹೌದು ಹಲ್ಲುಗಳನ್ನು ವರ್ಷಕ್ಕೆ ಒಂದು ಬಾರಿಯಾದರೂ ವೈದ್ಯರ ಬಳಿ ಹೋಗಿ ಕ್ಲೀನ್ ಅಪ್ ಮಾಡಿಸುತ್ತಾ ಇದ್ದರೆ ಒಳಿತು. ಇದರ ಜೊತೆಗೆ ನಾವು ಕೂಡ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ರಾತ್ರಿ ಮಲಗುವ ಮುನ್ನ ಎರಡರಿಂದ ಮೂರು ಹನಿ ಲವಂಗದ ಎಣ್ಣೆಯನ್ನು 1/4 ಟೀ ಚಮಚದ ಎಳ್ಳಿನ ಎಣ್ಣೆಯೊಂದಿಗೆ ಮಿಶ್ರ ಮಾಡಿ ಹತ್ತಿ ಉಂಡೆಯ ಮೇಲೆ ಹಾಕಿ ಹುಳುಕಿನ ಹಲ್ಲು ಇಲ್ಲೇ ಇರುತ್ತದೆ ಅಲ್ಲಿಗೆ ಇಟ್ಟುಕೊಂಡರೆ ನೋವು ಕಡಿಮೆ ಆಗುತ್ತದೆ. ಇನ್ನಷ್ಟು ಕ್ಯಾವಿಟಿ ಹೆಚ್ಚಾಗುವುದು ತಡೆಯಬಹುದು.

ಒಂದು ಲೋಟದಲ್ಲಿ ಉಪ್ಪು ನೀರನ್ನು ತೆಗೆದುಕೊಂಡು ಗಂಟಲಿಗೆ ಹಾಕಿ ಗಳಗಳ ಮಾಡಿ ನಂತರ ಉಗಿಯಿರಿ. ಇದರಿಂದ ಹಲ್ಲಿನಲ್ಲಿ ಹುಳುಕು ಆಗುವುದನ್ನು ಆದಷ್ಟು ತಡೆಯಬಹುದು. ಇದರ ಜೊತೆಗೆ ತಿಳಿದಿರುವ ಹಾಗೆ ರಾತ್ರಿ ಕೂಡ ಬ್ರಷ್ ಮಾಡಿ ಮಲಗಿದರೆ ಉತ್ತಮ.

ಬೆಳ್ಳುಳ್ಳಿ ಮತ್ತು ಲವಂಗವನ್ನು ಉಪ್ಪಿನೊಂದಿಗೆ ಪೇಸ್ಟ್ ಮಾಡಿ ಹಚ್ಚಿದರೆ ಹಲ್ಲು ಉರಿಬರುವುದನ್ನು ಆದಷ್ಟು ತಡೆಯಬಹುದು. 1/4 ಟೀ ಚಮಚದಷ್ಟು ಪೇಸ್ಟ್ ಇದ್ದರೂ ಸಾಕು. ಮಾಡಲು ತುಂಬಾ ಈಸಿ ವಾರದಲ್ಲಿ ಒಮ್ಮೆಯಾದರೂ ಈ ರೀತಿಯಾಗಿ ನಿಮ್ಮ ಹಲ್ಲುಗಳಿಗೆ ಕೇರ್ ಮಾಡಿ.

ಹಲ್ಲುಗಳಿಗೆ ಯಾವ್ಯಾವುದೋ ಪೇಸ್ಟುಗಳನ್ನು ಉಪಯೋಗಿಸುವ ಬದಲು ಜೇಷ್ಠ ಮದ್ದಿನ ಪುಡಿ ಮಾಡಿ ಅದನ್ನು ಉಪಯೋಗಿಸಿದರೆ ಉತ್ತಮ. ನಿಮ್ಮ ಬಾಯಲ್ಲಿ ಎಳ್ಳೆಣ್ಣೆಯನ್ನು ಹಾಕಿ 20 ನಿಮಿಷಗಳ ಕಾಲ ಸ್ವಿಶ್ ಮಾಡಿ ಮತ್ತೆ ಉಗುಳಿದರೆ ಅದು ಹಲ್ಲಿಗೆ ತುಂಬಾ ಆರೋಗ್ಯಕರ. ಹೊಳೆಯಲು ಇದೊಂದು ರಹಸ್ಯ ಅಂತಾನೆ ಹೇಳಬಹುದು.

ಕಹಿಬೇವಿನ ರಸವನ್ನು ನಿಮ್ಮ ವಸಡುಗಳ ಮೇಲೆ ಹಾಕುವುದರಿಂದ ಹಲ್ಲುಗಳು ಬಲಿಷ್ಠವಾಗಲು ಕಾರಣವಾಗುತ್ತದೆ. ಹಾಗೂ ವಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಡೆಯಬಹುದು. ಇದರ ಕಡ್ಡಿಗಳು ಹಲ್ಲು ಉಜ್ಜಲು ಸಹಕಾರಿಯಾಗಿದೆ. ಈ ರೀತಿಯಾದಂತಹ ಒಂದಷ್ಟು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡುವುದರ ಮೂಲಕ ನಿಮ್ಮ ವಸಡುಗಳನ್ನು ಮತ್ತು ಹಲ್ಲುಗಳನ್ನು ಆದಷ್ಟು ಕೇರ್ ಮಾಡಬಹುದು.

Leave A Reply

Your email address will not be published.