ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಥ್ಲೀಟ್ | ನಂತರ ನಡೆದದ್ದೇನು?

ಅಂತಾರಾಷ್ಟ್ರೀಯ ಕ್ರೀಡಾಪಟುವಾದ ಎಲ್ನಾಜ್ ರೆಕಾಬಿ ಭಾನುವಾರ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದರು. ಈ ವಿಷಯವಾಗಿ ಭಾರೀ ಸುದ್ದಿಯಲ್ಲಿದ್ದರು.

ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ ಮಾಡಿದ್ದ ಇರಾನ್ ಅಥ್ಲೀಟ್ ಎಲ್ನಾಜ್ ರೆಕಾಬಿ(Elnaz Rekabi) ಬುಧವಾರ ಇರಾನ್‌ನ ಟೆಹ್ರಾನ್‌ಗೆ ಮರಳಿದ್ದು, ಆಕೆಗೆ ಅಲ್ಲಿನ ಜನರು ಗ್ರ್ಯಾಂಡ್‌ ವೆಲ್‌ಕಮ್ ನೀಡಿದ್ದಾರೆ. ಪ್ರಸ್ತುತ ರೆಕಾಬಿಗೆ ಬಂಧನದ ಭೀತಿಯೂ ಎದುರಾಗಿದೆ.

ಎಲ್ನಾಜ್ ರೆಕಾಬಿ ಟೆಹ್ರಾನ್‌ಗೆ ಹಿಂದಿರುಗಿದ ನಂತರ ಆಕೆಗೆ ಅಲ್ಲಿನ ಜನರು ಗ್ರ್ಯಾಂಡ್‌ ವೆಲ್‌ಕಮ್ ನೀಡಿದ್ದಾರೆ. ಬೀದಿಗಳಲ್ಲಿ ಸಾಲುಗಟ್ಟಿದ ಸಾವಿರಾರು ರೋಚಕ ಸ್ವಾಗತವನ್ನು ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿನ ವೈರಲ್‌ ಆಗಿರುವ ವೀಡಿಯೋಗಳು ರೆಕಾಬಿರನ್ನು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಹೋಗುವುದನ್ನು ನೋಡಬಹುದು.

ವರದಿಯ ಪ್ರಕಾರ, 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಎಲ್ಲಾ ಇರಾನಿನ ಮಹಿಳೆಯರು ಹಿಜಾಬ್‌ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಅಲ್ಲದೆ ಇರಾನ್‌ನ ಪೊಲೀಸರಿಂದ ಚಿತ್ರಹಿಂಸೆಗೆ ಒಳಗಾಗಿ ಸಾವನ್ನಪ್ಪಿದ ಮಹ್ಸಾ ಅಮಿನಿಯ ಸಾವಿನಿಂದ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದೆ.

ಆ ಬೆನ್ನಲ್ಲೇ ಕಾನೂನುಗಳನ್ನು ರೆಕಾಬಿ ಉಲ್ಲಂಘಿಸಿದ್ದಾರೆ. ಈಗ ಅವರಿಗೆ ಬಂಧನದ ಭೀತಿ ಎದುರಾಗಿದೆ. ಪೊಲೀಸರು ರೇಕಾಬಿ ಅವರ ಫೋನ್ ಮತ್ತು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮಾಹಿತಿ ದೊರಕಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ರೆಕಾಬಿ ʻಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್‌ ಆಕಸ್ಮಿಕವಾಗಿ ನನ್ನ ತಲೆಯಿಂದ ಜಾರಿದೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.