ರಾಜ್ಯದಾದ್ಯಂತ ಜಾರಿಯಾಗಲಿದೆ ವಿದ್ಯುತ್ ಪ್ರಿಪೇಯ್ಡ್ ವ್ಯವಸ್ಥೆ | ಮೊದಲೇ ಹಣ ಪಾವತಿಸಿ ವಿದ್ಯುತ್ ಬಳಸುವ ಸ್ಮಾರ್ಟ್ ಮೀಟರ್

ಬೆಂಗಳೂರು: ವಿದ್ಯುತ್ ಮೀಟರ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ-ಹೊಸ ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಣೆ ಮತ್ತು ಆದಾಯ ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ರೂಪಿಸಿದೆ.

ಹೌದು. ಇನ್ನು ಮುಂದೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಾಗಲಿದೆ. ರಾಜ್ಯದಾದ್ಯಂತ ವಿದ್ಯುತ್ ಪ್ರಿಪೇಯ್ಡ್ ವ್ಯವಸ್ಥೆ ಶೀಘ್ರವೇ ಜಾರಿ ಆಗಲಿದ್ದು, ಸರ್ಕಾರ ಸಿದ್ಧತೆ ಕೈಗೊಂಡಿದೆ. ಈ ಮೀಟರ್ ಅಳವಡಿಸಿದ ಬಳಿಕ ಪ್ರತಿ ತಿಂಗಳಿಗೂ ಮೊದಲೇ ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರಸ್ತುತ ಗ್ರಾಹಕರು, ಬಳಕೆ ಮಾಡುವ ವಿದ್ಯುತ್ ಬಿಲ್ ಬಂದ ನಂತರ ಶುಲ್ಕ ಪಾವತಿಸಬೇಕಿತ್ತು. ಹೊಸ ವ್ಯವಸ್ಥೆ ಜಾರಿಯಾದ ನಂತರ ಮೊದಲೇ ನಿರ್ದಿಷ್ಟ ಹಣ ಪಾವತಿಸಿ ನಂತರ ವಿದ್ಯುತ್ ಬಳಸಬೇಕಿದೆ. ಈ ವರ್ಷದ ಡಿಸೆಂಬರ್ ಒಳಗೆ ಅಳವಡಿಸುವ ವಿದ್ಯುತ್ ಮೀಟರ್ ಗಳಿಗೆ ಶೇಕಡಾ 15 ರಷ್ಟು ಸಬ್ಸಿಡಿ ನೀಡಲಾಗುವುದು. ನಂತರ ಸಬ್ಸಿಡಿ ಸಿಗುವುದಿಲ್ಲ. ಹಾಗೆಯೇ, ಸಬ್ಸಿಡಿ ಪಡೆದುಕೊಳ್ಳಲು ರಾಜ್ಯದಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಗೆ ಇಂಧನ ಇಲಾಖೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್ ಬದಲಾವಣೆ ಮಾಡುವ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಹಕರು ಮೊದಲು ಹಣ ಕಟ್ಟಿ ನಂತರ ವಿದ್ಯುತ್ ಬಳಸುವ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.

Leave A Reply

Your email address will not be published.