BJP ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ !!

BJP: 2024ರ ಲೋಕಸಭಾ ಚುನಾವಣೆಲ್ಲಿ ಬಿಜೆಪಿ ಟಿಕೆಟ್ ಕೊಡದ ಕಾರಣಕ್ಕಾಗಿ ಕೆಲವು ಹಾಲಿ ಸಂಸದರು ಮುನಿಸಿಕೊಂಡಿದ್ದಾರೆ. ಕೆಲವರು ಪಕ್ಷವನ್ನೂ ತೊರೆಯುವ ಮಾತನಾಡಿದ್ದಾರೆ. ಇದೀಗ ಮತ್ತೆ ರಾಜ್ಯ ಬಿಜೆಪಿ(BJP)ಗೆ ಆಘಾತ ಎದುರಾಗಿದ್ದು ಬಿಜೆಪಿ ಹಾಲಿ ಸಂಸದ ಸಂಗಣ್ಣ ಕರಡಿ(Sanganna Karadi) ಕಾಂಗ್ರೆಸ್(Congress)ಸೇರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: Bengaluru: ವಿಡಿಯೋದಲ್ಲಿ ಮಾಡುವಂತೆ S’X ಮಾಡಬೇಕೆಂದು ಗಂಡನ ಕಿರುಕುಳ – ಕಾಲ್ ಗರ್ಲ್ ಕರೆಸಿ ಹೆಂಡತಿ ಎದುರು ಮಾಡಿದ್ದೇನು?

ಇದನ್ನೂ ಓದಿ: Jammu Kashmir: ಮುಳುಗಿದ ದೋಣಿ; ಶಾಲಾ ಮಕ್ಕಳು ಜಲಸಮಾಧಿ

ಈ ಸಲ ಇತರ ಕ್ಷೇತ್ರಗಳ ಹಾಲಿ ಸಂಸದರಿಗೆ ಕೋಕ್ ಕೊಟ್ಟಂತೆ ಬಿಜೆಪಿಯು ಕೊಪ್ಪಳದ(Koppala) ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೂ ಶಾಕ್ ನೀಡಿ ಬೇರೆಯವರಿಗೆ ಟಿಕೆಟ್ ನೀಡಿದೆ. ಇದರಿಂದ ಬೇಸರಗೊಂಡ ಸಂಗಣ್ಣ ಪಕ್ಷದ ಚಟುವಟಿಕೆಗಳಿಂದ, ಪ್ರಚಾರದಿಂದ ದೂರ ಉಳಿದಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರೆಬೆಲ್ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ಲಕ್ಷ್ಮಣ ಸವದಿ (Laxman Savadi) ಭೇಟಿ ನೀಡಿದ್ದು, ಕರಡಿ ಸಂಗಣ್ಣ ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಇನ್ನು ಕುತೂಹಲದ ಸಂಗತಿ ಅಂದರೆ ಸಂಗಣ್ಣರ ಬೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬರೋದರ ಬಗ್ಗೆ ನಾವು ಮಾತಾಡಿಲ್ಲ. ಅದಕ್ಕೆ ಇನ್ನೂ ಸಮಯ ಇದೆ ಅದನ್ನ ಸಂಗಣ್ಣ ಅವರು ತೀರ್ಮಾನ ಮಾಡ್ತಾರೆ. ಅವರೂ ರಾಜಕೀಯ ನೆಲೆ ಹುಡುಕಿ ಕೊಳ್ಳಬೇಕು ಅದನ್ನ ಅವರು ಹಾಗೂ ಅವರ ಕುಟುಂಬ ಸದಸ್ಯರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದು ಅಚ್ಚರಿ ಎನಿಸಿದೆ.

Leave A Reply

Your email address will not be published.