Labour Card : ಕಾರ್ಮಿಕ ಕಾರ್ಡ್ ನಿಂದ 19 ಸ್ಕೀಂ ಗಳ ಲಾಭ | ಈ ಸೌಲಭ್ಯಗಳನ್ನು ಪಡೆಯುವ ವಿಧಾನ ಇಲ್ಲಿದೆ!!!

ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅಂಗವಿಕಲರಿಗೆ ಪಿಂಚಣಿ ಸೌಲಭ್ಯ, ಸ್ವ ಉದ್ಯೋಗ ನಡೆಸಲು ಸಾಲ ನೀಡುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಆರ್ಥಿಕ ನೆರವನ್ನು ಜೊತೆಗೆ ಮಕ್ಕಳ ಅಭಿವೃದ್ಧಿಗೆ ಉಚಿತ ಶಿಕ್ಷಣ, ರೈತರಿಗೂ ಕೂಡ ಸಾಲ ಮನ್ನಾ, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅವಕಾಶ ಕಲ್ಪಿಸಿದೆ.

 


ಈ ನಡುವೆ ಬಹಳ ಕಾಲದಿಂದ ರಾಜ್ಯ ಕಾರ್ಮಿಕ ಇಲಾಖೆಯಡಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಟ್ಟುವ ಕೆಲಸದಲ್ಲಿ ಅಥವಾ ಇತರ ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಆದರೆ ಇದುವರೆಗೆ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಈ ಸೌಕರ್ಯಗಳ ಬಗ್ಗೆ ಮಾಹಿತಿ ತಿಳಿಯದೇ ಇರುವುದರಿಂದ ಯೋಜನೆಯ ಸದುಪಯೋಗ ಆಗುವಲ್ಲಿ ವಿಫಲವಾಗಿದೆ.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದರೆ ಅಂತಹ ಫಲಾನುಭವಿಗಳಿಗೆ ಮಂಡಳಿಯಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯ, ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ನೋಂದಾಯಿತ ಫಲಾನುಭವಿಗ ಮಕ್ಕಳಿಗೆ ಸ್ಫರ್ಧಾತ್ಮಕ ಪರೀಕ್ಷಾ ಸೌಲಭ್ಯ, ಶೈಕ್ಷಣಿಕ ಸಹಾಯಧನ ಸೇರಿದಂತೆ 19 ರೀತಿಯ ವಿವಿಧ ಸೌಲಭ್ಯಗಳು ಸಿಗುತ್ತದೆ.

ಈವರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೆಪ್ಟೆಂಬರ್ 30ರ ತನಕ ಒಟ್ಟು 22.50 ಲಕ್ಷ ಕಟ್ಟಡ ಕಾರ್ಮಿಕರು ರಿಜಿಸ್ಟರ್ ಮಾಡಿಸಿದ್ದಾರೆ.


ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲು ಇರಬೇಕಾದ ಅರ್ಹತೆ ಮತ್ತು ವಿಧಾನಗಳೆಂದರೆ, ಕನಿಷ್ಠ 18 ರಿಂದ ಗರಿಷ್ಠ 60 ವರ್ಷದ ಒಳಗಿನವರಾಗಬೇಕು. ಕಳೆದ 12 ತಿಂಗಳಲ್ಲಿ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

ಆಧಾರ್ ಕಾರ್ಡ್, ಎಂಪ್ಲಾಯ್ಮೆಂಟ್ ಕಾರ್ಡ್ (EMPLOYMENT CARD), ನೀವು ಕೆಲಸ ಮಾಡುತ್ತಿರುವ ಮಾಲೀಕರ ಹೆಸರು ಮತ್ತು ವಿಳಾಸ, ನೀವು ನಾಮಿನಿ ಮಾಡಬೇಕಾದವರ ವಿದ್ಯಾರ್ಹತೆ, ವಿಳಾಸ, ನಿಮಗೂ ಅವರಿಗೆ ಇರುವ ಸಂಬಂಧದ ಮಾಹಿತಿ ಮತ್ತು ಕುಟುಂಬದಲ್ಲಿ ಇರುವವರ ಸಂಖ್ಯೆಯ ಜೊತೆಗೆ ಒಂದು ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದೆ.

ಅದು ರಾಷ್ಟ್ರೀಕೃತ ಅಥವಾ RBI ಇಂದ ಮಾನ್ಯತೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು. ರೇಷನ್ ಕಾರ್ಡ್ನ ಒಂದು ಪ್ರತಿ , ಹಾಗೂ ವೋಟರ್ ಐಡಿ ಕಾರ್ಡನ್ನು ಮತ್ತೊಮ್ಮೆ ಮೇಲಿರುವ ಎಲ್ಲಾ ದಾಖಲೆಗಳು ಪಿಡಿಎಫ್(PDF) ರೂಪದಲ್ಲಿರಬೇಕು

ನೋಂದಣಿ ಮಾಡುವ ಅರ್ಜಿದಾರನ ಮೂರು ಪಾಸ್ ಪೋರ್ಟ್ ಅಳತೆಯ ಫೊಟೋ, ವಯಸ್ಸಿನ ದಾಖಲೆಯ ಪತ್ರ, ಅರ್ಜಿದಾರ ಹಾಗೂ ಅವರ ಅವಲಂಬಿತರ ಆಧಾರ್ ಕಾರ್ಡ್ ಪ್ರತಿಯನ್ನು ಸ್ವಯಂ ದೃಢೀಕರಣ ಮಾಡಿ ಅರ್ಜಿಯೊಂದಿಗೆ ಸಲ್ಲಿಸಬೇಕು.

ಕಾರ್ಮಿಕ ಅಧಿಕಾರಿಗಳು/ ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ಕಾರ್ಮಿಕರ ನೋಂದಣಿ ಮಾಡಲಾಗುತ್ತದೆ.

ಪಿಂಚಣಿ ಸೌಲಭ್ಯದ ಬಗ್ಗೆ ಮಾಹಿತಿ
ನೋಂದಾಯಿತ ಫಲಾನುಭವಿಯ ಮಕ್ಕಳಿಗೆ ಯುಪಿಎಸ್ ಸಿ/ಕೆಪಿಎಸ್ ಸಿ (UPSC/KPSC) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೌಲಭ್ಯದ ಜೊತೆಗೆ ಫಲಾನುಭವಿಯ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಶಿಶುವಿಹಾರ/ನರ್ಸರಿಯಿಂದ ಹಿಡಿದು ಪ್ರಾಥಮಿಕ, ಪ್ರೌಢಶಿಕ್ಷಣ, ಡಿಪ್ಲೊಮೊ, ಐಟಿಐ, ಪಾಲಿಟೆಕ್ನಿಕ್, ಪದವಿಪೂರ್ವ, ಪದವಿ ನೋಂದಾಯಿತ ಕಾರ್ಮಿಕರ ಮಕ್ಕಳ ಪಿಎಚ್ ಡಿ/ಎಂಫಿಲ್/ಐಐಟಿ/ಐಐಎಂ/ಎನ್‌ಐಟಿ ಹಾಗೂ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಶಿಕ್ಷಣದ ತನಕ ವಾರ್ಷಿಕ ಸಹಾಯ ಸಹಾಯ ಧನವನ್ನು ಕಾರ್ಮಿಕ ಕಲ್ಯಾಣ ಮಂಡಳಿ ನೀಡಲಿದೆ.

ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3,000 ರೂ. ಪಿಂಚಿಣಿ ಪಡೆಯಬಹುದಾಗಿದೆ .

ಮೃತ ಪಿಂಚಣಿದಾರರ ಪತಿ/ಪತ್ನಿಗೆ ಮಾಸಿಕ 1000 ರೂ. ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ) : 20,000 ರೂ. ತನಕ ದೊರೆಯುತ್ತದೆ.
ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವ ತನಕ ವಾರ್ಷಿಕ 6,000ರೂ. ಸಹಾಯಧನ ಪಡೆಯಬಹುದು.


ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ) : 2,00,000 ರೂ. ವರೆಗೆ ಮುಂಗಡ ಸಾಲ ಸೌಲಭ್ಯ ದೊರೆಯುತ್ತದೆ. ಇದಲ್ಲದೆ, ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್) : ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ 50,000 ರೂ. ಪಡೆಯಬಹುದು.

ನೋಂದಾಯಿತ ಫಲಾನುಭವಿ ಹಾಗೂ ಅವಲಂಬಿತರಿಗೆ 300 ರೂ.ನಿಂದ 20,000ರೂ. ತನಕ ಸಹಾಯಧನ ಪಡೆಯಬಹುದಾಗಿದೆ. ನೋಂದಣಿ ಮಾಡಿದ ವ್ಯಕ್ತಿ, ಮರಣ ಹೊಂದಿದ್ದಲ್ಲಿ 5,00,00 ರೂ. ಹಾಗೂ ಸಂಪೂರ್ಣ ಶಾಶ್ವತ ದುರ್ಬಲತೆಯಾದರೆ, 2,00,00ರೂ. ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ 1,00,000ರೂ.
ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಧನ ಪಡೆಯಬಹುದಾಗಿದ್ದು, ಕೋವಿಡ್ -19 ಚಿಕಿತ್ಸೆ ಹಾಗೂ ಇತರೆ ಔದ್ಯೋಗಿಕ ಚಿಕಿತ್ಸೆಗಳಿಗೆ 2,00,000ರೂ.ವರೆಗೆ ವೈದ್ಯಕೀಯ ವೆಚ್ಚ ಸಹಾಯಧನ ದೊರೆಯಲಿದೆ.

ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 60,000ರೂ.ಕೂಡ ಪಡೆಯಬಹುದು. ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ : ಮರುಪಾವತಿ ಸೌಲಭ್ಯ ಕಲ್ಪಿಸಲಾಗಿದೆ. ನೋಂದಾಯಿತ ಕಾರ್ಮಿಕರಿಗೆಕೆಎಸ್ ಆರ್ ಟಿಸಿ ಬಸ್ ಪಾಸ್ ನ ಸೌಲಭ್ಯ ಕಲ್ಪಿಸಲಾಗಿದೆ.

ಬದುಕು ಕಟ್ಟಿಕೊಳ್ಳಲು ತಮ್ಮ ತವರು ನೆಲವನ್ನು ತೊರೆದು ಒಂದೂರಿಂದ ಒಂದೂರಿಗೆ ವಲಸೆ ಬಂದು ಮನೆ, ಕಟ್ಟಡ, ಇನ್ನಿತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬಹುದು

1 Comment
  1. dobry sklep says

    Wow, marvelous blog layout! How long have you ever been blogging for?
    you make running a blog glance easy. The total look of your
    website is magnificent, let alone the content! You can see similar here ecommerce

Leave A Reply

Your email address will not be published.