Edit tweet : ಟ್ವಿಟ್ಟರ್ ಬಳಕೆದಾರರಿಗೆ ದೊರೆಯಿತು ಹೊಸ ವೈಶಿಷ್ಟ್ಯ |

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು(social media) ಸಾಕಷ್ಟು ಪ್ರಭಾವಶಾಲಿಯಾಗಿವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇದರಲ್ಲಿ ಮಂಚೂಣಿಯಲ್ಲಿರುವ ಸಾಮಾಜಿಕ ಮಾಧ್ಯಮಗಳ ಪೈಕಿ ಟ್ವಿಟ್ಟರ್‌ ಕೂಡ ಒಂದಾಗಿದ್ದು, ಟ್ವಿಟ್ಟರ್‌ ಜಾಲತಾಣವು ಹಲವು ವೈಶಿಷ್ಟ್ಯಗಳನ್ನು (Users more features) ಬಳಕೆದಾರರಿಗೆ ನೀಡಿದರೆ ಇನ್ನು ಕೆಲವು ವೈಶಿಷ್ಟ್ಯಗಳನ್ನು ತೆಗೆದು (Removed many features )ಹಾಕಿದೆ.


ಟ್ವಿಟ್ಟರ್ ಜನಪ್ರಿಯ ಫ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದ್ದು, ಸಾಕಷ್ಟು ಬಳಕೆದಾರರನ್ನು ಈ ಜಾಲತಾಣ ಹೊಂದಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಮೇಲಂತೂ ಸರಣಿ ಬದಲಾವಣೆಗಳನ್ನು ತರುವಲ್ಲಿ ಮುಂದಾಗಿದ್ದಾರೆ.

ಅದರಂತೆಯೇ ಎಡಿಟ್ ಆಯ್ಕೆಯನ್ನು ನೀಡುವ ಮೂಲಕ ಟ್ವೀಟ್ಗಳಲ್ಲಿನ ದೋಷಗಳನ್ನು ಸರಿಪಡಿಸಲು ಸಹಾಯ ಮಾಡಲು ಮುಂದಾಗಿದ್ದಾರೆ. ಟ್ವಿಟ್ಟರ್ ಇದುವರೆಗೆ ತನ್ನ ಬಳಕೆದಾರರಿಗೆ ಎಡಿಟ್ ಬಟನ್ ಆಯ್ಕೆ ನೀಡಿರಲಿಲ್ಲ. ಆದರೆ ಸದ್ಯವೇ ಈ ಹೊಸ ಆಯ್ಕೆ ಬರಲಿದೆ ಎಂದು ಈ ಮೊದಲೇ ಮಾಹಿತಿ ನೀಡಲಾಗಿತ್ತು.


ಟ್ವಿಟರ್ ಬಳಕೆದಾರರು ಪ್ರಕಟಿಸಿದ ಟ್ವೀಟ್‌ನಲ್ಲಿ ಏನಾದರೂ ತಪ್ಪುಗಳಿದ್ದರೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೊಮ್ಮೆ ಪೋಸ್ಟ್ ಮಾಡಬೇಕಾದ ಅವಶ್ಯಕತೆ ಇತ್ತು ಅಥವಾ ಶಾಶ್ವತವಾಗಿ ಆ ಟ್ವೀಟ್ ಅನ್ನು ಡಿಲೀಟ್ ಮಾಡಬೇಕಿತ್ತು. ಆದರೆ, ಇದೀಗ ಟ್ವೀಟ್ ಗಳನ್ನು ಎಡಿಟ್ ಮಾಡಬಹುದಾದ ವೈಶಿಷ್ಟ್ಯವು ದೊರೆತಿದೆ.


ಜನಪ್ರಿಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ಬಹುನಿರೀಕ್ಷಿತ ‘Edit Tweet’ ವೈಶಿಷ್ಟ್ಯವನ್ನು ಅಮೆರಿಕಾದ ಜನರಿಗೆ ಪರಿಚಯಿಸಿದ್ದು, ವ್ಯಾಪಕವಾಗಿ ಬೇಡಿಕೆ ಇದ್ದ ಈ ವೈಶಿಷ್ಟ್ಯವನ್ನು ಅಮೆರಿಕಾದಲ್ಲಿ ಪ್ರಯೋಗ ಮಾಡಲು ಸಂಸ್ಥೆ ಮುಂದಾಗಿದ್ದು, ಟ್ವಿಟರ್ ಬಳಕೆದಾರರು ಇದೀಗ ಒಂದು ನಿಮಿಷದವರೆಗೆ ಟ್ವೀಟ್‌ಗಳನ್ನು ತಡೆಹಿಡಿಯಬಹುದಾದ ಮತ್ತು ಎಡಿಟ್ ಮಾಡುವ ಆಯ್ಕೆ ಪಡೆದಿದ್ದಾರೆ.

ಈ ವೈಶಿಷ್ಟ್ಯವು ಪ್ರಕಟಿತ ಟ್ವೀಟ್ ಲೇಬಲ್, ಟೈಮ್‌ಸ್ಟ್ಯಾಂಪ್ ನಂತಹ ಗುರುತಿಸುವ ಐಕಾನ್‌ಗಳನ್ನು ಹೊಂದಿದೆ.
ಟ್ವಿಟರ್ ಎಡಿಟ್ ಬಟನ್ ವೈಶಿಷ್ಟ್ಯವು ಟ್ವೀಟ್ ಪ್ರಕಟಿಸಿದ ನಂತರ 30 ನಿಮಿಷಗಳವರೆಗೆ ಅಸ್ತಿತ್ವದಲ್ಲಿರುವ ಟ್ವೀಟ್‌ಗಳಿಗೆ ಬದಲಾವಣೆಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಬಳಕೆದಾರರು ಟ್ವೀಟ್ ಮಾಡಿ Send ಬಟನ್ ಒತ್ತಿ 30 ನಿಮಿಷದವರೆಗೆ ಎಡಿಟ್ ಮಾಡುವ ಅಥವಾ ಬದಲಾಯಿಸುವ ವೈಶಿಷ್ಟ್ಯವನ್ನು ಪಡೆಯಬಹುದು. ಟೈಮ್ ಸ್ಟಾಂಪ್ ಮತ್ತು ಟ್ವೀಟ್ ಲೇಬಲ್ ಮೂಲಕ, ಬಳಕೆದಾರರ ಪೋಸ್ಟ್ ಅನ್ನು ಕೊನೆಯದಾಗಿ ಯಾವಾಗ ಎಡಿಟ್ ಮಾಡಲಾಯಿತು ಎಂದು ಪ್ರದರ್ಶಿಸಲಾಗುತ್ತದೆ.


ಅಮೆರಿಕಾದ ಟ್ವಿಟರ್ ಬಳಕೆದಾರರು ತಾವು ಪ್ರಕಟಿಸುವ ಟ್ವೀಟ್ ಅನ್ನು ಒಂದು ನಿಮಿಷದವರೆಗೆ ಹೋಲ್ಡ್ ಮಾಡಿ, ಪರಿಶೀಲಿಸಿ ಪ್ರಕಟಿಸುವ ಅಥವಾ ಅನ್‌ಡು ಮಾಡುವ ಅವಕಾಶವನ್ನು ಪಡೆದಿದ್ದು, ಈ ವೈಶಿಷ್ಟ್ಯವು ಟ್ವೀಟ್ ಎಡಿಟ್ ಆಗಿದೆ ಎಂಬ ಲೇಬಲ್ ಪ್ರಕಟವಾಗುವುದಿಲ್ಲ.

ಇದರ ಬದಲಿಗೆ, ಒಂದು ನಿಮಿಷದ ನಂತರ ಎಡಿಟ್ ಮಾಡಲಾದ ಟ್ವೀಟ್‌ಗಳ ಮೇಲೆ ‘ಎಡಿಟ್ ಮಾಡಲಾಗಿದೆ’ ಎಂಬ ಆಯ್ಕೆ ಇರಲಿದೆ .
ಟ್ವೀಟ್ ಎಡಿಟ್ ಬಟನ್ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಮೊದಲಿಗೆ ಬ್ಲೂ ಟಿಕ್ ಬಳಕೆದಾರಿಗೆ ಮಾತ್ರವೇ ಪರಿಚಯಿಸಲಾಗಿದ್ದು, ಟ್ವಿಟರ್ ಬ್ಲೂಗಾಗಿ ತಿಂಗಳಿಗೆ $4.99 ಪಾವತಿಸುವ ಚಂದಾದಾರರು ತಮ್ಮ ಟ್ವೀಟ್‌ಗಳನ್ನು ಪ್ರಕಟಿಸಿದ 30 ನಿಮಿಷಗಳಲ್ಲಿ “ಕೆಲವು ಬಾರಿ” ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಟ್ವಿಟರ್ ತಿಳಿಸಿದೆ.

ಇದರ ಜೊತೆಗೆ ಟ್ವೀಟ್‌ಗಳನ್ನು ಪರಿಶೀಲಿಸಿ ಪ್ರಕಟಿಸುವ ಅಥವಾ ಅನ್‌ಡು ಮಾಡುವ ಅವಕಾಶವು ಸಹ ದೊರೆತಿದೆ.

ಈ ಮೊದಲು ಟ್ವಿಟರ್ ಬಳಕೆದಾರರು ಪ್ರಕಟಿಸಿದ ಟ್ವೀಟ್‌ನಲ್ಲಿ ಏನಾದರೂ ತಪ್ಪುಗಳಿದ್ದರೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೊಮ್ಮೆ ಪೋಸ್ಟ್ ಮಾಡಬೇಕಾದ ಅವಶ್ಯಕತೆ ಇತ್ತು ಅಥವಾ ಶಾಶ್ವತವಾಗಿ ಆ ಟ್ವೀಟ್ ಅನ್ನು ಡಿಲೀಟ್ ಮಾಡಬೇಕಿತ್ತು. ಇದೀಗ ಟ್ವೀಟ್ ಗಳನ್ನು ಎಡಿಟ್ ಮಾಡಬಹುದಾದ ವೈಶಿಷ್ಟ್ಯವು ದೊರೆತಿದೆ.

Leave A Reply

Your email address will not be published.