Health Tips : ರಾತ್ರಿ ಮಹಿಳೆಯರು ಹಾಲಿಗೆ ಲವಂಗ ಹಾಕಿ ಕುಡಿದರೆ ದೊರಕುವ ಲಾಭ ಎಷ್ಟು ಗೊತ್ತಾ ? ಇಲ್ಲಿದೆ ಸಂಪೂರ್ಣ ಮಾಹಿತಿ

ಲವಂಗ ಭಾರತೀಯ ಅಡುಗೆ ಪದ್ಧತಿಯಲ್ಲಿ ಧಾರಾಳವಾಗಿ ಬಳಕೆಯಾಗುವ ಮಸಾಲೆ ಪದಾರ್ಥವಾಗಿದ್ದು, ಅಡುಗೆಗೆ ರುಚಿ ಕೊಡೋದು ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಲವಂಗ ಬಹಳ ಪ್ರಯೋಜನಕಾರಿಯಾಗಿದೆ.

ಲವಂಗದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊಂದಿರುತ್ತದೆ.

ಇದರಲ್ಲಿ ವಿಟಮಿನ್ ಎ ಮತ್ತು ಸಿ, ಮ್ಯಾಂಗನೀಸ್ ಮತ್ತು ಡಯೆಟರಿ ಫೈಬರ್ ಕೂಡ ಇದೆ. ಲವಂಗದಲ್ಲಿ ವಿಟಮಿನ್ ಸಿ ಅಂಶಗಳಿದ್ದು, ರಕ್ತದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಖಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.

ಹಾಲಿಗೆ ಅರಿಶಿನ, ಏಲಕ್ಕಿ ಹಾಲು ಕುಡಿಯುವುದು ಸಾಮಾನ್ಯ ಆದರೆ ಹಾಲಿಗೆ ಲವಂಗ ಹಾಕಿ ಸೇವಿಸಿದ್ದಿರಾ? ಆರೋಗ್ಯದ ದೃಷ್ಟಿಯಿಂದ ನಿಯಮಿತ ಸೇವನೆಯು ಮಹಿಳೆಯರಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

ಲವಂಗದ ಹಾಲು ಮಾಡಲು, ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಬೇಕು. ಬಳಿಕ ಲವಂಗವನ್ನು ಪುಡಿಮಾಡಿ ಇಟ್ಟುಕೊಂಡು ಲವಂಗವನ್ನು ಪುಡಿಯಾಗುವವರೆಗೆ ರುಬ್ಬಿಕೊಳ್ಳಬೇಕು. ನಂತರ ಹಾಲಿನಲ್ಲಿ ಲವಂಗದ ಪುಡಿಯನ್ನು ಮಿಶ್ರಣ ಮಾಡಬೇಕು.ಕೊನೆಗೆ ಲವಂಗದ ಹಾಲನ್ನು ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬಹುದು.

ಹಾಲು ಮತ್ತು ಲವಂಗವನ್ನು ಪ್ರತ್ಯೇಕವಾಗಿ ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುತ್ತದೆ. ಆದರೆ ಈ ಎರಡನ್ನೂ ಒಟ್ಟಿಗೆ ಸೇವಿಸಿದರೆ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದಾಗಿದೆ.

ಹಾಲಿನಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಪುರುಷ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ರಾತ್ರಿ ವೇಳೆ ಲವಂಗ ಮತ್ತು ಹಾಲನ್ನು ಸೇವಿಸಿದರೆ ದೇಹವನ್ನು ಹಲವು ರೋಗಗಳಿಂದ ರಕ್ಷಣೆ ಪಡೆಯಬಹುದು.

ಮಹಿಳೆಯರು ಲವಂಗ ಮತ್ತು ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು:

ಪ್ರತಿಯೊಬ್ಬರು ಒಂದಲ್ಲಾ ಒಂದು ಚಿಂತೆಯಿಂದ ದಿನ ದೂಡುವುದು ಸಹಜ. ಅದರಲ್ಲೂ ಬದಲಾಗಿರುವ ಆಹಾರ ಕ್ರಮದ ಜೊತೆಗೆ ಒತ್ತಡ ಸರ್ವೇ ಸಾಮಾನ್ಯವಾಗಿದೆ. ಒತ್ತಡ ಮತ್ತು ಆತಂಕದ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು, ರಾತ್ರಿಯಲ್ಲಿ ಲವಂಗ ಮತ್ತು ಹಾಲು ಕುಡಿಯಬಹುದು.

ರಾತ್ರಿಯಲ್ಲಿ ಲವಂಗ ಮತ್ತು ಹಾಲು ಕುಡಿಯುವುದರಿಂದ ಮನಸ್ಸು ಪ್ರಹ್ಲಾದ ಗೊಳ್ಳುತ್ತದೆ.ಇತ್ತೀಚಿನ ದಿನಗಳಲ್ಲಿ ವಿವಾಹಿತರಲ್ಲಿ ಬಂಜೆತನದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಪುರುಷರ ವೀರ್ಯ ಕೋಶಗಳು ದುರ್ಬಲವಾಗಿರುತ್ತವೆ.

ಮತ್ತೊಂದೆಡೆ, ಮಹಿಳೆಯರ ಅನಿಯಮಿತ ಅಂಡೋತ್ಪತ್ತಿ ಕಾರಣವಾಗಿರಬಹುದು. ಫಲವತ್ತತೆಯ ಅವಧಿಯನ್ನು ನಿಗದಿಪಡಿಸಲಾಗಿಲ್ಲ. ಬಂಜೆತನದ ಸಮಸ್ಯೆಯು ಅನೇಕ ಜನರ ತೂಕಕ್ಕೂ ಸಂಬಂಧಿಸಿದೆ.

ಲವಂಗವನ್ನು ಸೇವಿಸುವುದರಿಂದ ತೂಕ ಕೂಡ ಕಡಿಮೆಯಾಗುತ್ತದೆ.ದೇಹದಲ್ಲಿ ಶಕ್ತಿಯ ಕೊರತೆಯಾದರೆ, ಲವಂಗವನ್ನು ಹಾಲಿನೊಂದಿಗೆ ಸೇವಿಸಬಹುದು. ಇದನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ಹಾನಿಕಾರಕ ಅಂಶಗಳು ದೇಹದಿಂದ ಹೊರಬರುತ್ತವೆ. ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಮ್ ಪ್ರಮಾಣವು ಹಾಲಿನಲ್ಲಿದೆ.

ಇದರಿಂದಾಗಿ ದೇಹವು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ.ಮಹಿಳೆಯರು ಲವಂಗದ ಹಾಲು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಒತ್ತಡ ಕಡಿಮೆ ಮಾಡಿಕೊಳ್ಳಲು ನಿಯಮಿತವಾಗಿ ಬಳಸಬಹುದು.

Leave A Reply

Your email address will not be published.