ಬಿಗ್ ಬಾಸ್ ಮನೇಲಿ ಆರಂಭ ಆಯ್ತು ರಾಕಿ ಅನು ಲವ್

Share the Article

ಬಿಗ್ ಬಾಸ್ ಸೀಸನ್ ಒಂಬತ್ತು ಕನ್ನಡದಲ್ಲಿ ಆರಂಭವಾಗಿ ಎರಡು ವಾರಗಳ ಮುಗಿದವು. ನಿನ್ನೆ ನಡೆದ ಎಪಿಸೋಡ್ ನಲ್ಲಿ ಈ ವಾರ ನವಾಜ್ ಸಪ್ಪೆ ಮುಖ ಮಾಡ್ಕೊಂಡು ಹೊರಗೆ ಬಂದಿದ್ದಾರೆ. ಹಾಗೆ ಅನುಪಮಾ ಗೌಡನ ಮುಖ ಊರಗಲ ಅರಳಿದೆ. ಕಾರಣ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಇದರಿಂದ ಅನುಪಮಾ ಗೌಡ ತುಂಬಾ ಭಾವುಕರಾಗಿದ್ದೂ ಹೌದು.

ಇದೀಗ ಬಿಗ್ ಬಾಸ್ ಮನೆಯ ಅಡುಗೆ ಮನೆಯಲ್ಲಿ ಲವ್ವಿ ಡವ್ವಿ ಸ್ಟಾರ್ಟ್ ಆಗಿದೆ. ರಾಕೇಶ್ ಅಡಿಗ ಅಮೂಲ್ಯ, ಅನುಪಮಾ ಗೌಡ ಮತ್ತು ದಿವ್ಯ ಉರುಡಗನಿಗೆ ಏಕಕಾಲದಲ್ಲಿ ಗಾಳ ಹಾಕಿದ್ದ. ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಮೀನುಗಳು ಸರಿಯಾಗಿ ಕಚ್ಚಿಕೊಂಡಿವೆ. ಅದರಲ್ಲಿ ಅನುಪಮಾ ಮಾತ್ರ ಬುದ್ದಿವಂತರ ಹಾಗೆ ಎದ್ದು ಹೋಗಿದ್ದಾಳೆ. ಆಕೆಗೆ ಬಹುಶಃ ಗೊತ್ತಿರಬಹುದು : ಪ್ರತಿ ಗಾಳದ ಕೊಂಡಿಯ ಹಿಂದೆ, ದಡದಲ್ಲಿ ಒಬ್ಬ ಮೀನುಗಾರ ಹೊಂಚು ಹಾಕಿ ಕಾಯುತ್ತಿದ್ದಾನೆ ಎಂದು !!

ನಿಜಕ್ಕೂ ಅದು ಪಟಾಯಿಸೊ ಟಾಸ್ಕ್. ಅದೇನಪ್ಪ ಅಂದ್ರೆ ರಾಕೇಶ್ ಅಡಿಗರಿಗೆ ಅರುಣ್ ಸಾಗರ್ ಟಾಸ್ಕ್ ಕೊಟ್ರು. ಅದುವೇ ಮೆಲ್ಲ ಸ್ವಭಾವದ ಹುಡುಗನ ಹಾಗೆ ಎಲ್ಲ ಹುಡುಗಿಯರನ್ನು ಪಟಾಯಿಸು ಮತ್ತು ಪಡ್ಡೆ ಹುಡುಗನ ಹಾಗೆ ಎಲ್ಲಾ ಹುಡುಗಿಯರನ್ನು ಪಟಾಯಿಸು ಅಂತ. ಅರುಣ್ ಸಾಗರ್ ಅವರ ಮಾತನ್ನು ಕೇಳಿ ಅಮೂಲ್ಯ, ಅನುಪಮಾ ಗೌಡ ಮತ್ತು ದಿವ್ಯ ಉರುಡಗನಿಗೆ ಫುಲ್ ಪಟಾಯಿಸೆ ಬಿಟ್ರು.

ಅನುಪಮಾ ಗೌಡನಿಗಂತು, ‘ ನಿನ್ನ ನಗು ಚಂದ, ಅದು ಚಂದ, ಪನ್ನೀರಿನ ಹಾಗೆ, ನನ್ನ ಮನಸ್ಸು ನಿನಗಾಗಿ ‘ ಹೀಗೆ ಹತ್ತು ಹಲವು ಡೈಲಾಗ್ ಗಳನ್ನು ಹೊಡೆದ ರಾಕಿ. ಆದ್ರೆ ಇವೆಲ್ಲದಕ್ಕೂ ಅನುಪಮಾ ಗೌಡ ಜೋರಾಗಿ ನಗುತ್ತಾ “ನನಗೆ ಅಡುಗೆ ಮಾಡಕ್ಕಿದೆ, ಸುಮ್ಮನೆ ಹೋಗು ರಾಕಿ” ಎಂದು ನಿರ್ಲಕ್ಷ್ಯ ಮಾಡಿ ಎದ್ದು ಹೋಗಿ ಬಚಾವ್ ಆದಳಾಕೆ.

ಇದಾದ ನಂತರ ಒಂದು ಟಾಸ್ಕ್ ಕೂಡ ಬಿಗ್ ಬಾಸ್ ಏರ್ಪಡಿಸಿದ್ದರು. ಅದುವೇ ಚೈನ್ ಟಾಸ್ಕ್. ಇದರಲ್ಲಿ ರೂಪೇಶ್ ಶೆಟ್ಟಿ ಮತ್ತು ವಿನೋದ್ ಗೊಬ್ಬರಗಾಲ ವಿನ್ ಆದ್ರು. ಇವರ ಕ್ಯಾಪ್ಟನ್ ಗುರುಜಿ.”ಇದು ಗ್ರೂಪ್ ಟಾಸ್ಕ್ ಆಗಿದ್ದರಿಂದ ಗುರೂಜಿ ಅವರಿಗೆ ಜಾಸ್ತಿ ಕನ್ಫ್ಯೂಷನ್ ಆಗಿಲ್ಲ. ಇನ್ನು ಸಿಂಗಲ್ ಟಾಸ್ಕ್ ಆರಂಭವಾದ ನಂತರ ಗುರೂಜಿಗೆ ಫುಲ್ ಕನ್ಫ್ಯೂಷನ್ ಆಗುತ್ತೆ” ಅಂತ ಅಶ್ವಿನಿ ಮತ್ತು ರಾಕೇಶ್ ಅಡಿಗ ಬಾತ್ರೂಮ್ ನಲ್ಲಿ ಮಾತಾಡಿಕೊಂಡರು. ಒಟ್ಟಾರೆ ಇವತ್ತಿನ ಶೋ ಮಜಾ ಭರಿತ ಆಗಿತ್ತು. ಇನ್ನೊಂದು ಶೋಗಾಗಿ ಕಾಯುವಂತೆ ಮಾಡಿತ್ತು.

Leave A Reply

Your email address will not be published.