ಗಮನಿಸಿ ಸಾರ್ವಜನಿಕರೇ | ನಿಮ್ಮ ಮೊಬೈಲ್ ಗೆ 5G ಆ್ಯಕ್ಟಿವೇಟ್ ಮಾಡಲು ಈ ಸುಲಭ ಟ್ರಿಕ್ಸ್ ಫಾಲೋ ಮಾಡಿ

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ವರ್ಕ್ ಫ್ರಮ್ ಹೋಂ, ಅಲ್ಲದೆ, ಆನ್ಲೈನ್ ಮೂಲಕ ಕೋಚಿಂಗ್ ಪಡೆಯುವ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು ಗ್ರಾಹಕ ಸ್ನೇಹಿ ನಡೆಯ ಮೂಲಕ ನವೀನ ರೀತಿಯಲ್ಲಿ ಅಪ್ಗ್ರೇಡ್ ಮಾಡುತ್ತಿದೆ.

ನರೇಂದ್ರ ಮೋದಿಯವರು, ಏರ್ಟೆಲ್ 5G ಸೇವೆಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ ವಿಚಾರ ಎಲ್ಲರಿಗೂ ತಿಳಿದಿದೆ. ಈ ನಡುವೆ ಟೆಲಿಕಾಮ್ ಸರ್ವೀಸ್ಗಳು ಜನರಿಗೆ ನೆರವಾಗಲು 5G ಸೇವೆಗೆ ಅಣಿಯಾಗಿದ್ದು, ಇನ್ನೇನೂ ಕೆಲವೇ ದಿನಗಳಲ್ಲಿ ಪ್ರಮುಖ ನಗರಗಳಲ್ಲಿ ಈ ಸೇವೆಯು ಆರಂಭವಾಗಲಿದೆ.

ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ನಾಲ್ಕು ನಗರಗಳಲ್ಲಿ 5G ಸೇವೆಯು ಫ್ರಾರಂಭವಾಗಲಿದೆ.

ಏರ್ಟೆಲ್ 5G ಸೇವೆ ನೀಡುವ ಬೆನ್ನಲ್ಲೇ, ರಿಲಯನ್ಸ್ ಜಿಯೊ ಮತ್ತು ವೊಡಾಫೋನ್, ಐಡಿಯಾ ಕೂಡ 5G ಸೇವೆಯನ್ನು ಪ್ರಮುಖ ನಗರಗಳಲ್ಲಿ ವಿಸ್ತರಿಸಲು ಯೋಜನೆ ರೂಪಿಸುತ್ತಿದೆ.

ಈ ಸೇವೆಯು ಮೊದಲ ಹಂತದಲ್ಲಿ ಪ್ರಮುಖ ನಗರದಲ್ಲಿ ದೊರೆಯಲಿದ್ದು, ನಂತರದ ಪ್ರಕ್ರಿಯೆಯಲ್ಲಿ ಎಲ್ಲ ನಗರಗಳಲ್ಲೂ 5G ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

5G ಆಕ್ಟಿವೇಟ್ ಮಾಡುವುದು ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧ ರವರೆಗು ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇದ್ದು, ಆಂಡ್ರೋಯ್ಡ್ ಇರುವ 5G ಸ್ಮಾರ್ಟ್‌ಫೋನ್ ಆಗಿದ್ದರೆ, ಮೊದಲು ಸೆಟ್ಟಿಂಗ್ಸ್ ಓಪನ್ ಮಾಡಿಕೊಂಡು ನಂತರ ಮೊಬೈಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳಬೇಕು.

ಇದರ ಬಳಿಕ ಯಾವ ಸಿಮ್/ನೆಟ್‌ವರ್ಕ್‌ನಲ್ಲಿ ಗ್ರಾಹಕ 5G ಬಳಕೆ ಮಾಡಲು ಇಚ್ಚಿಸುತ್ತಾರೋ ಅದನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ, ‘Preferred network type’ ಎಂದಿರುವುದನ್ನು ಸೆಲೆಕ್ಟ್ ಮಾಡಬೇಕು. ಈ ಪ್ರಕ್ರಿಯೆಯ ಬಳಿಕ ಮೇಲ್ಬಾಗದಲ್ಲಿ 5G ಇರುವುದನ್ನು ಖಚಿತಪಡಿಸಿಕೊಂಡು ಅದನ್ನು ಆಯ್ಕೆ ಮಾಡಿ, ಬಳಿಕ ಫೋನ್ ರೀಸ್ಟಾರ್ಟ್ ಮಾಡಬೇಕು.

ಗ್ರಾಹಕ ವಾಸಿಸುವ ಪ್ರದೇಶದಲ್ಲಿ 5G ನೆಟ್‌ವರ್ಕ್ ಇದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ 5G ನೆಟ್‌ವರ್ಕ್ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಏರ್‌ಟೆಲ್ ಈಗ ಇರುವ 4G ಸಿಮ್ ಮೂಲಕವೂ 5G ನೆಟ್‌ವರ್ಕ್ ಕಾರ್ಯನಿರ್ವಹಿಸಲಿದ್ದು, ಗ್ರಾಹಕನಿಗೆ ಮನೆಯಲ್ಲೆ 5G ಸೇವೆ ಪಡೆಯಲು ಅನುವು ಮಾಡಿಕೊಡುತ್ತದೆ. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಪರೀಕ್ಷಿಸಿಕೊಳ್ಳಬೇಕು.

ಗ್ರಾಹಕ ಬಳಸುವ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಟೆಲ್ ನೆಟ್‌ವರ್ಕ್ ಇದ್ದರೆ, 5G ಸೇವೆ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬಹುದು. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ತೆರೆದು, ಅದರಲ್ಲಿ ಇರುವ 5G ಬ್ಯಾನರ್ ಅದರಲ್ಲಿನ ‘ಚೆಕ್ ಯುವರ್ ಫೋನ್ ಇಸ್ 5G ಎನೇಬಲ್ಸ್’ ಆಯ್ಕೆಯನ್ನು ಒತ್ತಿ ನೋಡಬಹುದು.

ಈಗ , ಸ್ಮಾರ್ಟ್ ಫೋನ್ ಮತ್ತು ಸಾಫ್ಟ್‌ವೇರ್ 5G ಬೆಂಬಲ ನೀಡುವುದೇ ಎಂದು ಪರೀಕ್ಷಿಸಬಹುದಾಗಿದ್ದು, 5G ಇದ್ದಲ್ಲಿ, ಡಿವೈಸ್ 5G ರೆಡಿ ಮತ್ತು ನೆಟ್‌ವರ್ಕ್ ಲಭ್ಯತೆ ಇದೆ ಎನ್ನುವುದನ್ನು ಖಚಿತಪಡಿಸಿಕೊಂಡು ಸೆಟ್ಟಿಂಗ್ಸ್‌ಗೆ ಹೋಗಿ, ಫೋನ್ ನೆಟ್‌ವರ್ಕ್ನಲ್ಲಿ 5G ಸೆಲೆಕ್ಟ್ ಮಾಡಬೇಕು.

ಐಫೋನ್‌ನಲ್ಲಿ 5G ಬಳಸಲು, ಐಫೋನ್‌ನಲ್ಲಿ ಸೆಟ್ಟಿಂಗ್‌ ತೆರೆದು, ಅದರಲ್ಲಿ ಮೊಬೈಲ್ ಡೇಟಾ ಎಂದಿರುವುದನ್ನು ನೋಡಿಕೊಂಡು ಬಳಿಕ ಮೊಬೈಲ್ ಆ್ಯಪ್ ಸೆಲೆಕ್ಟ್ ಮಾಡಿ, ಅದರಲ್ಲಿ ವಾಯ್ಸ್ ಮತ್ತು ಡೇಟಾ ಆಯ್ಕೆ ಮಾಡಿದೆಯೆ ನೋಡಿದ ಬಳಿಕ, 5G ಎಂದಿರುವುದನ್ನು ಆಯ್ಕೆ ಮಾಡಬೇಕು.

ಐಫೋನ್ 12 ಮತ್ತು ನಂತರದ ಮಾದರಿಗಳಲ್ಲಿ 5G ಲಭ್ಯವಾಗಲಿದ್ದು, ಪ್ರಸ್ತುತ iOS 16,0.2 ಓಎಸ್ ಅಪ್ಡೇಟ್ ಇದ್ದು, ಮುಂದಿನ ಅಪ್‌ಡೇಟ್ ಜತೆಗೆ ದೇಶದಲ್ಲಿ ಆ್ಯಪಲ್, ಅರ್ಹ ಐಫೋನ್‌ಗಳಿಗೆ 5G ನೆಟ್‌ವರ್ಕ್ ಒದಗಿಸಲಿದೆ.

ಶೀಘ್ರದಲ್ಲಿ ಅಪ್‌ಡೇಟ್ ಬಿಡುಗಡೆ ಮಾಡುವುದಾಗಿ ಆ್ಯಪಲ್ ಹೇಳಿಕೊಂಡಿದೆ. 5G ಸೇವೆ ಲಭ್ಯತೆಯಿಂದ ಜನತೆಗೆ ಹೆಚ್ಚು ನೆರವಾಗಲಿದ್ದು, ಮನರಂಜನೆಯ ಜೊತೆಗೆ ದಿನಕ್ಕೆ 2Gb ಗಿಂತಲೂ ಹೆಚ್ಚು ಡೇಟಾ ಸೇವೆಗಳನ್ನು ಗ್ರಾಹಕ ಮನಯಲ್ಲಿಯೇ ಕುಳಿತು ಪಡೆಯಬಹುದಾಗಿದೆ.

Leave A Reply

Your email address will not be published.