ಗುಡ್ ನ್ಯೂಸ್ ಕೊಟ್ಟ ಮಹಾಲಕ್ಷ್ಮಿ ಮತ್ತು ರವೀಂದರ್ !

ಚಿತ್ರ ಜಗತ್ತಿನ ಮೋಸ್ಟ್ ಅನ್ ಮ್ಯಾಚ್ಡ್ ಆದರ್ಶ ದಂಪತಿಗಳಾದ ರವೀಂದರ್ ಮತ್ತು ಮಹಾಲಕ್ಷ್ಮಿ ಮತ್ತೆ ಸುದ್ದಿಯಲ್ಲಿದ್ದಾರೆ. ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ ಆದ ಹೊಸತರಲ್ಲಿ ಫುಲ್ ಟ್ರೆಂಡ್ ಮತ್ತು ಟ್ರೋಲ್ ಆಗಿದ್ರು. ಆದ್ರೂ ಯಾವುದಕ್ಕೂ ಕ್ಯಾರೆ ಮಾಡ್ತಾ ಇರ್ಲಿಲ್ಲ ಈ ಜೋಡಿ. ಇದಾದ ನಂತರವೂ ಇವರಿಬ್ಬರೂ ಹನಿಮೂನಿಗೆ ಹೋದಾಗ ಅವರನ್ನು ಬಹಳಷ್ಟು ಟ್ರೋಲ್ ಮಾಡಿದ್ದರು. ಯಾವುದಕ್ಕೂ ಲೆಕ್ಕಿಸದೆ ತಮ್ಮ ಎಂಜಾಯ್ಮೆಂಟ್ ನಲ್ಲಿ ತಾವು ಮುಳುಗಿದ್ದರು. ಇದೀಗ ಈ ಜೋಡಿ ಮತ್ತೊಂದು ಹೊಸ ಸುದ್ದಿ ಕೊಡ್ತಾ ಇದೆ.

ಈ ಸುದ್ದಿ ನೀವು ಅಂದುಕೊಂಡಿರುವ ‘ ಆ ‘ ಸುದ್ದಿಯಂತೂ ಅಲ್ಲ. ಮದ್ವೆ ಆದ್ಮೇಲೆ ಹನಿಮೂನ್ ಆಗ್ಲೇ ಬೇಕು, ಹನಿ ಮೂನ್ ಆದ್ಮೇಲೆ ಮಗು ಮೂಡಲೇ ಬೇಕು ಎನ್ನುವುದು ಮದ್ವೆ ಹನಿಮೂನ್ ಮತ್ತು ಮಗು ಮಾಡಿಕೊಂಡು ಪ್ರಾಕ್ಟಿಕಲ್ ಜೀವನ ನಡೆಸಿದವರ ಅನುಭವ. ಈಗ ಈ ಇಬ್ರು ಜೋಡಿ ಕೂಡಾ ಹನಿಮೂನ್ ಅಂತ ಎಲ್ಲೆಲ್ಲೂ ತಿರುಗಾಡಿದೆ. ಓಹ್, ಗುಡ್ ನ್ಯೂಸ್ ಅಂದ್ರೆ… ಅದೇ… ‘ ವಾಮಿಟ್ ಮಾಡ್ತಿದ್ದಾರಂತ ಮಹಾಲಕ್ಷ್ಮಿ? ‘ ಎಂದು ನೀವು ಊಹಿಸಿ ನಿಮ್ಮ ನಿಮ್ಮಲ್ಲೆ ಪ್ರಶ್ನೆ ಹಾಕಿಕೊಂಡರೆ ನಿಮ್ಮ ಊಹೆ ತಪ್ಪು.

ಹೌದು. ಸದಾ ಸುದ್ದಿಯಲ್ಲಿರೋ ಮಹಾಲಕ್ಷ್ಮಿ ಮತ್ತು ರವೀಂದರ್ ಅವರ ಜೀವನದಲ್ಲಿ ಒಂದು ಹೊಸ ಆಫರ್ ಬಂದಿದೆ. ಅದು Big ಆಫರ್, ಅದುವೇ ಬಿಗ್ ಬಾಸ್ ! ನಿಜವಾಗಿಯೂ ಇವರಿಬ್ಬರೂ ಬಿಗ್ ಬಾಸ್ ಗೆ ಹೋಗ್ತಾರಾ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ಯಾ? ಈ ಸುದ್ದಿಯನ್ನು ಕಂಪ್ಲೀಟ್ ಆಗಿ ಓದಿ.

ಇಲ್ಲಿಯವರೆಗೂ ಬಿಗ್ ಬಾಸ್ ಶೋಗಳನ್ನು ಅವಲೋಕಿಸುತ್ತಿದ್ದ ರವೀಂದರ್ ಮುಂಬರುವ 6ನೇ ಬಿಗ್ ಬಾಸ್ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವರದಿಗಳಿವೆ. ಬಿಗ್ ಬಾಸ್ ಸೀಸನ್ 6 ಅಕ್ಟೋಬರ್ 9 ರಿಂದ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ವೇಳೆ ಸ್ಪರ್ಧಿಗಳ ಪಟ್ಟಿಯಲ್ಲಿ ಹಲವರ ಹೆಸರು ಕೇಳಿಬಂದಿದೆ.

ಇದರಲ್ಲಿ ರವೀಂದರ್ ಮತ್ತು ಮಹಾಲಕ್ಷ್ಮಿ ಇಬ್ಬರ ಹೆಸರುಗಳಿವೆ. ಬಿಗ್ ಬಾಸ್ ಮನೆಗೆ ರವೀಂದರ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅದೇ ಸಮಯದಲ್ಲಿ, ಮಹಾಲಕ್ಷ್ಮಿ ದೀಪಾವಳಿಯನ್ನು ಆಚರಿಸಲು ಬಯಸಿದ್ದರು, ಆದ್ದರಿಂದ ಅವರು ಸೆಪ್ಟೆಂಬರ್‌ನಲ್ಲಿ ಮದುವೆಯಾದರು ಎಂದು ರವೀಂದರ್ ಹೇಳಿದರು.

ಬಹುಶಃ ರವೀಂದರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಮಹಾಲಕ್ಷ್ಮಿಯ ದೀಪಾವಳಿ ಆಸೆ ಈಡೇರುವ ಸಾಧ್ಯತೆ ಹೆಚ್ಚಿದೆ. ಬಿಗ್ ಬಾಸ್ ಮನೆಗೆ ರವೀಂದರ್ ಎಂಟ್ರಿ ಕೊಡ್ತಾರಾ? ಅಥವಾ ಇಲ್ವಾ ಎಂಬುದು ಅಕ್ಟೋಬರ್ 9 ರಂದು ಖಚಿತವಾಗಿ ತಿಳಿಯಲಿದೆ.

Leave A Reply

Your email address will not be published.