Bigg Boss Shocking | ಬಿಗ್ ಬಾಸ್’ ಮನೆಯಲ್ಲಿ ಎಗ್ ರೈಸ್ ( Egg Rice) ಮಾಡಿದ ಗುರೂಜಿ

ಆರ್ಯವರ್ಧನ್ ಗುರೂಜಿ (Aryavardhan Guruji) ಸಕಲ ಕಲಾ ವಲ್ಲಭ. ಟಾಸ್ಕ್ ಜತೆ ಅಡುಗೆಯಲ್ಲಿ ಕೂಡಾ ಅವರದು ಪಳಗಿದ.ಕೈ. ನಿಧಾನಕ್ಕೆ ಅವರು ಬಿಗ್ ಬಾಸ್ (Bigg Boss Season 9) ಮನೆಯ ಸದಸ್ಯರ ಮತ್ತು ಹೊರಗಿನ ಜನರ ಮನಸ್ಸು ಕದಿಯುತ್ತಿದ್ದಾರೆ. ಹಿಂದೆ ಒಮ್ಮೆ ಅನ್ನ ಸಾಂಬರ್ ಮಾಡದೇ ಇದ್ದರೆ, ನಾನು ಊಟವನ್ನೇ ಮಾಡೊಲ್ಲ ಅಂತ ಹಠ ಹಿಡಿದು ಕೂತಿದ್ದರು ಗುರೂಜಿ. ಊಟ ಸವಿಯುವುದರಲ್ಲಿ ಮಾತ್ರವಲ್ಲ, ಅಡುಗೆ ಮಾಡುವುದರಲ್ಲೂ ಅವರು. ನಿಸ್ಸೀಮರು.ಗುರೂಜಿ ಈವರೆಗೂ ಮಾಡಿರುವ ಅಷ್ಟೂ ಅಡುಗೆಗಳು ಕೂಡ ದೊಡ್ಮನೆಯ ಸದಸ್ಯರಿಗೆ ಇಷ್ಟವಾಗಿವೆ. ಮನೆ ಮಂದಿ ಮೂಗಿನ ಹೊಳ್ಳೇ ಅರಳಿಸಿಕೊಂಡು ಅಡುಗೆ ಸವಿದಿದ್ದಾರೆ. ಊಟ ಆದ ನಂತರ ಕೂಡಾ ಕೈ ಬೆರಳು ಮೂಸಿಕೊಂಡ್ ಖಾದ್ಯದ ಘಮ ಹೀರಿದವರಿದ್ದಾರೆ. ಈಗ ಮತ್ತೆ ಸೌಟು ಹಿಡಿದಿದ್ದಾರೆ ಗುರೂಜಿ. ಈ ಸಾರಿ ಗುರೂಜಿ ಎಗ್ ಫ್ರೈಡ್ ಮಾಡಿ ದೊಡ್ಡ ಸುದ್ದಿಯಾಗಿದ್ದಾರೆ. ಮೂಲತಃ ಪಕ್ಕಾ ವೆಜ್ ಆಗಿರುವ ಸ್ವಾಮೀಜಿಯ ನಾನ್ ವೆಜ್ ಈಗ ರೈಸ್ ಸುದ್ದಿ ಕೇಳಿ ಆತನ ಅಭಿಮಾನಿಗಳು ‘ ಏನಿದು, ಸುದ್ದಿ ನಿಜಾನಾ ಸುಳ್ಳಾ ?’ ಎಂದು ಕಣ್ಣರಳಿಸುತ್ತಿದ್ದಾರೆ. ಸುದ್ದಿ ನಿಜಾನೆ. ಗುರೂಜಿ ಎಗ್ ಫ್ರೈಡ್ ರೈಸ್ ಮಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅವರು ಮಾಡಿದ ಎಲ್ಲರಿಗೂ ಇಷ್ಟವಾಗಿದ್ದು, ವಿಶೇಷ ಅಂದ್ರೆ ಅದು ಎಗ್ ಇಲ್ಲದೆ ಇಲ್ಲದೇ ಮಾಡಿರೋ ಎಗ್ ರೈಸ್. ಮೊಟ್ಟೆ ಇಲ್ಲದೇ ಎಗ್ ರೈಸ್ (Egg Rice) ಮಾಡಲು ಸಾಧ್ಯವಾ? ಸಾಧ್ಯ ಕೇವಲ ಗುರೂಜಿಗೆ. ಬಿಗ್ ಬಾಸ್ ಮನೆಯಲ್ಲಿ ಅಂಥದ್ದೊಂದು ಮ್ಯಾಜಿಕ್ ಮಾಡಿ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಅವರ ಪ್ರಶಂಸೆಗೆ ಕಾರಣರಾಗಿದ್ದಾರೆ ಗುರೂಜಿ. ಆ ರೈಸ್ ಅನ್ನು ಹೇಗೆ ಮಾಡುವುದು ಎನ್ನುವ ರೆಸಿಪಿಯನ್ನೂ ಗುರೂಜಿ ಹೇಳಿಕೊಟ್ಟಿದ್ದಾರೆ.


Ad Widget

ಎಗ್ ಇಲ್ಲದ ಎಗ್ ರೈಸ್ ಅನ್ನು ತಿಂದ ರೂಪೇಶ್ ಶೆಟ್ಟಿ, ಆ ರೈಸ್ ಬಗ್ಗೆ ಹಾಡಿಹೊಗಳುತ್ತಾ ‘ಜಗತ್ತಿನಲ್ಲೇ ಎಗ್ ಇಲ್ಲದೇ ಎಗ್ ರೈಸ್ ಮಾಡುವ ವ್ಯಕ್ತಿ ಯಾರಾದರೂ ಇದ್ದರೆ, ಅವರು ಬದುಕಿದ್ದರೆ ಅದು ಕೇವಲ ಆರ್ಯವರ್ಧನ್ ಗುರೂಜಿ ಮಾತ್ರ’ ಎನ್ನುತ್ತಾರೆ. ಅದಕ್ಕೆ ಧ್ವನಿಗೂಡಿಸುವ ಸಾನ್ಯ ಅಯ್ಯರ್ (Sanya Iyer) ‘ಎಗ್ ಇಲ್ಲದೇ ಎಗ್ ರೈಸ್ ಮಾಡೋ ಏಕೈಕ ವ್ಯಕ್ತಿ ಅಂದರೆ, ಅದು ಮೊಟ್ಟೆವರ್ಧನ’ ಎಂದು ರೇಗಿಸುತ್ತಾರೆ. ಮೊಟ್ಟೆವರ್ಧನ ಅಂತ ಕರೆದಿದ್ದಕ್ಕೆ ಮೊಟ್ಟೆ ತಲೆ ಸವರಿಕೊಂಡು ಗುರೂಜಿ ನಗ್ತಾರೆ.

Ad Widget

Ad Widget

Ad Widget

ನಂತರ ಎಗ್ ಇಲ್ಲದೇ ಎಗ್ ರೈಸ್ ಮಾಡೋ ವಿಧಾನವನ್ನೂ ಹೇಳಿದ ಗುರೂಜಿ, ಎಷ್ಟು ಹದವಾಗಿ ರೈಸ್ ಬೇಯಿಸಬೇಕು, ಇಂತಿಷ್ಟೇ ಪೆಪ್ಪರ್ ಪೌಡರ್ ಉದುರಿಸಬೇಕು ಮತ್ತು ಅದನ್ನು ಹೀಗೇ ಬೆರೆಸಬೇಕು ಎಂಬ ರೀತಿಯನ್ನೂ ಹೇಳಿಕೊಟ್ಟು ಸಂಭ್ರಮಿಸಿದ್ದಾರೆ. ಅಲ್ಲದೇ, ಈಗಾಗಲೇ ರೂಪೇಶ್ ಶೆಟ್ಟಿಗೆ ಮಗನ ಸ್ಥಾನ ಕೊಟ್ಟಿರುವ ಗುರೂಜಿ ‘ಸ್ವಲ್ಪ ಮಗನ ಪ್ರೀತಿಯನ್ನೂ ರೈಸ್ ಗೆ ಬೆರೆಸಿದರೆ ಅದ್ಭುತವಾದ ಎಗ್ ರೈಸ್ ಆಗತ್ತೆ’ ಅಂತ ರೂಪೇಶ್ ಶೆಟ್ಟಿಯನ್ನು (Rupesh Shetty) ಇಂಪ್ರೆಸ್ ಮಾಡುತ್ತಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಗುರೂಜಿಯ ಕಲೆಯ ಮೊಟ್ಟೆ ಸಣ್ಣಗೆ ಕಾವು ಪಡೆದುಕೊಂಡಿದೆ. ಮನೆಮಂದಿಯ ಪ್ರೀತಿ ಗುರೂಜಿ ಸುರಿಯಲು ಶುರುವಾಗಿದೆ. ಮನೆಯೊಳಗಿನ ಇಂಪ್ರೆಸ್ಸ್ ಹೊರಗಡೆ ಓಟಾಗಿ ವರ್ಕ್ ಔಟ್ ಆಗಲು ಎಷ್ಟು ಹೊತ್ತು ಅಲ್ಲವೇ?

error: Content is protected !!
Scroll to Top
%d bloggers like this: